ತಾಯಿ ಸೋನಿಯಾ ಗಾಂಧಿ(Sonia Gandhi)ಗೆ ಶ್ವಾನವನ್ನು ಉಡುಗೊರೆಯಾಗಿ ನೀಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ ತಮ್ಮ ನಾಯಿಗೆ ನೂರಿ ಎಂದು ಹೆಸರಿಟ್ಟ ಪ್ರಕರಣದಲ್ಲಿ ಹೊಸ ವಿವಾದ ಎದ್ದಿದೆ.
ಎಐಎಂಐಎಂ ರಾಜ್ಯ ವಕ್ತಾರ ಮೊಹಮ್ಮದ್ ಫರ್ಹಾನ್ ಪ್ರಯಾಗ್‌ರಾಜ್‌ನ ಸಿಜೆಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ರಾಹುಲ್ ಗಾಂಧಿ ಅವರ ನಾಯಿಗೆ ನೂರಿ ಎಂದು ಹೆಸರಿಡುವ ಮೂಲಕ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಮೊಹಮ್ಮದ್ ಫರ್ಹಾನ್ ಆರೋಪಿಸಿದ್ದಾರೆ.
ರಾಹುಲ್ ಗಾಂಧಿಯವರ ಈ ಕೃತ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ. ಇಸ್ಲಾಂನಲ್ಲಿ ನೂರಿ ಎಂಬ ಪದವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ.
ಈ ಪದವು ಇಸ್ಲಾಂ ಧರ್ಮದಲ್ಲಿ ಪ್ರವಾದಿ ಮೊಹಮ್ಮದ್‌ಗೆ ಸಂಬಂಧಿಸಿದೆ ಎಂದು ಅವರು ಹೇಳಿದರು. ನೂರ್ ಎಂಬ ಪದವನ್ನು ಪವಿತ್ರ ಕುರಾನ್‌ನಲ್ಲಿ 42 ಬಾರಿ ಉಲ್ಲೇಖಿಸಲಾಗಿದೆ ಮತ್ತು ನೂರ್‌ನ ಸಮಾನಾರ್ಥಕ ಪದವು ನೂರಿ.
ಮತ್ತಷ್ಟು ಓದಿ:ಸೋನಿಯಾ ಗಾಂಧಿಗೆ ಕ್ಯೂಟ್ ಗಿಫ್ಟ್; ಕುಟುಂಬದ ಹೊಸ ಸದಸ್ಯೆಯನ್ನು ಪರಿಚಯಿಸಿದ ರಾಹುಲ್ ಗಾಂಧಿ
ಇದಲ್ಲದೆ ಪ್ರವಾದಿ ಮೊಹಮ್ಮದ್ ಸಾಹಿಬ್ ಅವರನ್ನು ನೂರಿ ಬಶರ್ ಎಂದೂ ಕರೆಯುತ್ತಾರೆ. ಇದಲ್ಲದೇ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೆ ನೂರಿ ಎಂದು ಹೆಸರಿಡಲಾಗಿದೆ. ಸದ್ಯ ರಾಹುಲ್ ಗಾಂಧಿ ವಿರುದ್ಧದ ದೂರನ್ನು ಪ್ರಯಾಗ್‌ರಾಜ್‌ನ ಸಿಜೆಎಂ ನ್ಯಾಯಾಲಯ ಅಂಗೀಕರಿಸಿದೆ.
ನಾಯಿಗೆ ನೂರಿ ಎಂದು ಹೆಸರಿಡಬಾರದಿತ್ತು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಕ್ಟೋಬರ್ 4 ರಂದು ಗೋವಾದಿಂದ ತಂದ ನಾಯಿಮರಿಯನ್ನು ತನ್ನ ತಾಯಿಗೆ ಉಡುಗೊರೆಯಾಗಿ ನೀಡಿದ್ದರು. ಅದಕ್ಕೆ ನೂರಿ ಎಂದು ಹೆಸರಿಟ್ಟಿದ್ದರು. ರಾಹುಲ್ ಗಾಂಧಿ ವಿರುದ್ಧ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಮತ್ತು ಅವಮಾನಿಸಿರುವ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮುಸ್ಲಿಮ್ ಸಮುದಾಯದ ಜನರಲ್ಲಿ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಲಾಗಿದೆ.
ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಂಡು ಈ ಪ್ರಕರಣದಲ್ಲಿ ನ್ಯಾಯಾಲಯ ಮುಂದಿನ ಕ್ರಮ ಕೈಗೊಂಡರೆ ರಾಹುಲ್ ಗಾಂಧಿ ವಿರುದ್ಧ ಸೆಕ್ಷನ್ 295ಎ ಅಡಿಯಲ್ಲಿ ಪ್ರಕರಣ ದಾಖಲಿಸಬಹುದಾಗಿದೆ. ಈ ಸೆಕ್ಷನ್ ಅಡಿಯಲ್ಲಿ, ಆರೋಪ ಸಾಬೀತಾದರೆ, ಆರೋಪಿಗೆ 3 ವರ್ಷಕ್ಕಿಂತ ಹೆಚ್ಚು ಶಿಕ್ಷೆ ವಿಧಿಸಲು ಅವಕಾಶವಿದೆ.
ರಾಹುಲ್ ಗಾಂಧಿ ಧರ್ಮಕ್ಕೆ ಅವಮಾನ ಮಾಡಿದ್ದಾರೆ
IPCC ಯ ಸೆಕ್ಷನ್ 295A ಅಡಿಯಲ್ಲಿ, ಯಾವುದೇ ವ್ಯಕ್ತಿ ಉದ್ದೇಶಪೂರ್ವಕವಾಗಿ ಅಥವಾ ದುರುದ್ದೇಶದಿಂದ ಭಾರತದ ಯಾವುದೇ ಭಾಗದ ಧಾರ್ಮಿಕ ಭಾವನೆಗಳನ್ನು ಅವಮಾನಿಸುವ ಪ್ರಯತ್ನ ಎಂದು ಹೇಳಲಾಗುತ್ತದೆ.
ನವೆಂಬರ್ 8 ರಂದು ತನ್ನ ಹೇಳಿಕೆಗಾಗಿ ದೂರುದಾರನಿಗೆ ಸಮನ್ಸ್ ನೀಡಿದ್ದಾರೆ. ರಾಹುಲ್ ಗಾಂಧಿಯವರ ಈ ಕೃತ್ಯ ಪ್ರವಾದಿಯವರ ಜೊತೆಗೆ ಹಿರಿಯರಿಗೂ ಅವಮಾನ ಮಾಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇಸ್ಲಾಂ ಧರ್ಮದ ಉದಯದ ನಂತರ, ಯಾವುದೇ ಪ್ರಾಣಿಗಳಿಗೆ ನೂರಿ ಎಂದು ಹೆಸರಿಸಲಾಗಿಲ್ಲ ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:42 am, Wed, 18 October 23