ಆಪರೇಷನ್ ಅಜಯ್: ಇಸ್ರೇಲ್‌ನಿಂದ 286 ಭಾರತೀಯರೊಂದಿಗೆ ದೆಹಲಿಗೆ ಬಂದಿಳಿದ ಐದನೇ ವಿಮಾನ
18 ನೇಪಾಳ ಪ್ರಜೆಗಳು ಸೇರಿದಂತೆ 286 ಪ್ರಯಾಣಿಕರೊಂದಿಗೆ ಟೆಲ್ ಅವಿವ್‌ನಿಂದ ಸ್ಪೈಸ್‌ಜೆಟ್ ವಿಮಾನ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಉಗ್ರಗಾಮಿ ಗುಂಪು ಹಮಾಸ್‌ನೊಂದಿಗೆ ತೀವ್ರ ಸಂಘರ್ಷ ನಡೆಯುತ್ತಿರುವ ಇಸ್ರೇಲ್‌ನಿಂದ ವಾಪಸಾಗಲು ಬಯಸುವ ಭಾರತೀಯರಿಗೆ ಮರಳಲು ಅನುಕೂಲವಾಗುವಂತೆ ಇದು ಸರ್ಕಾರದ ಆಪರೇಷನ್ ಅಜಯ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐದನೇ ವಿಮಾನವಾಗಿದೆ.
18 ನೇಪಾಳ ಪ್ರಜೆಗಳು ಸೇರಿದಂತೆ 286 ಪ್ರಯಾಣಿಕರೊಂದಿಗೆ ಇಸ್ರೇಲ್ನ ಟೆಲ್ ಅವಿವ್‌ನಿಂದ ಸ್ಪೈಸ್‌ಜೆಟ್ ವಿಮಾನ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಉಗ್ರಗಾಮಿ ಗುಂಪು ಹಮಾಸ್‌ನೊಂದಿಗೆ ತೀವ್ರ ಸಂಘರ್ಷ ನಡೆಯುತ್ತಿರುವ ಇಸ್ರೇಲ್‌ನಿಂದ ವಾಪಸಾಗಲು ಬಯಸುವ ಭಾರತೀಯರಿಗೆ ಮರಳಲು ಅನುಕೂಲವಾಗುವಂತೆ ಇದು ಸರ್ಕಾರದ ಆಪರೇಷನ್ ಅಜಯ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐದನೇ ವಿಮಾನವಾಗಿದೆ.
ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಆಪರೇಷನ್ ಅಜಯ್ ಅಡಿಯಲ್ಲಿ ಐದನೇ ವಿಮಾನದಲ್ಲಿ 18 ನೇಪಾಳದ ಪ್ರಜೆಗಳು ಸೇರಿದಂತೆ 286 ಪ್ರಯಾಣಿಕರು ಆಗಮಿಸಿದ್ದಾರೆ ಎಂದು ಹೇಳಿದ್ದಾರೆ. ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್ ಮುರುಗನ್ ಅವರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಸ್ವಾಗತಿಸುತ್ತಿರುವ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.
ಕೇರಳ ಸರ್ಕಾರದ ಪ್ರಕಾರ, ವಿಮಾನದಲ್ಲಿ ಬಂದ ಪ್ರಯಾಣಿಕರಲ್ಲಿ ರಾಜ್ಯದ 22 ಮಂದಿ ಇದ್ದರು. ಸ್ಪೈಸ್‌ಜೆಟ್ ವಿಮಾನ A340 ಭಾನುವಾರ ಟೆಲ್ ಅವಿವ್‌ನಲ್ಲಿ ಇಳಿದ ನಂತರ ತಾಂತ್ರಿಕ ಸಮಸ್ಯೆಯನ್ನು ಎದುರಿಸಿತು ಮತ್ತು ಸಮಸ್ಯೆಯನ್ನು ಸರಿಪಡಿಸಲು ವಿಮಾನವನ್ನು ಜೋರ್ಡಾನ್‌ಗೆ ಕೊಂಡೊಯ್ಯಲಾಯಿತು.
ಮತ್ತಷ್ಟು ಓದಿ: ಇಸ್ರೇಲ್-ಲೆಬನಾನ್ ಗಡಿಯಲ್ಲಿ 900 ಭಾರತೀಯ ಸೈನಿಕರು ನಿಯೋಜನೆಗೊಂಡಿರುವುದು ಏಕೆ?
ಸಮಸ್ಯೆಯನ್ನು ಪರಿಹರಿಸಿದ ನಂತರ, ವಿಮಾನವು ಮಂಗಳವಾರ ಟೆಲ್ ಅವಿವ್‌ನಿಂದ ಜನರೊಂದಿಗೆ ಮರಳಿತು. ವಿಮಾನವು ಸೋಮವಾರ ಬೆಳಗ್ಗೆ ದೆಹಲಿಗೆ ಮರಳಬೇಕಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ