AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಮನೆತನ ಟೀಕಿಸುವ ರಾಹುಲ್ ಗಾಂಧಿ ಲೇಖನದ ಬಗ್ಗೆ ಯದುವೀರ್ ಸೇರಿ ಹಲವರು ಗರಂ

ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಲೇಖನ ತೀವ್ರ ರಾಜಕೀಯ ಕೋಲಾಹಲವನ್ನು ಸೃಷ್ಟಿಸಿದೆ. ಹಲವು ಬಿಜೆಪಿ ನಾಯಕರು, ರಾಜವಂಶಸ್ಥರು ಅವರ ಲೇಖನವನ್ನು ತೀವ್ರವಾಗಿ ಟೀಕಿಸಿದ್ದಾರೆ ಮತ್ತು ಅವರನ್ನು ಗುರಿಯಾಗಿಸಿದ್ದಾರೆ. ಹಾಗಾದರೆ ರಾಹುಲ್ ಗಾಂಧಿ ಲೇಖನದಲ್ಲಿ ಏನಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ರಾಜಮನೆತನ ಟೀಕಿಸುವ ರಾಹುಲ್ ಗಾಂಧಿ ಲೇಖನದ ಬಗ್ಗೆ ಯದುವೀರ್ ಸೇರಿ ಹಲವರು ಗರಂ
ರಾಹುಲ್ ಗಾಂಧಿ Image Credit source: Business Today
ನಯನಾ ರಾಜೀವ್
|

Updated on: Nov 07, 2024 | 12:15 PM

Share

ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಲೇಖನ ತೀವ್ರ ರಾಜಕೀಯ ಕೋಲಾಹಲವನ್ನು ಸೃಷ್ಟಿಸಿದೆ. ಹಲವು ಬಿಜೆಪಿ ನಾಯಕರು, ರಾಜವಂಶಸ್ಥರು ಅವರ ಲೇಖನವನ್ನು ತೀವ್ರವಾಗಿ ಟೀಕಿಸಿದ್ದಾರೆ ಮತ್ತು ಅವರನ್ನು ಗುರಿಯಾಗಿಸಿದ್ದಾರೆ. ಹಾಗಾದರೆ ರಾಹುಲ್ ಗಾಂಧಿ ಲೇಖನದಲ್ಲಿ ಏನಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಈಸ್ಟ್ ಇಂಡಿಯಾ ಕಂಪನಿಯು ಭಾರತದ ರಾಜಮನೆತನವನ್ನು ಬೆದರಿಸಿ ಲಂಚ ನೀಡಿ ಭಾರತವನ್ನು ಆಳಿತು ಎನ್ನುವ ಸಾಲು ತೀವ್ರ ಕೋಲಾಹಲ ಸೃಷ್ಟಿಸಿದೆ. ಈಸ್ಟ್ ಇಂಡಿಯಾ ಕಂಪನಿ ಈಗಿಲ್ಲ ಆದರೆ ಅದು ಸೃಷ್ಟಿಸಿದ ಭಯ ಮತ್ತೆ ಕಾಣಿಸಿಕೊಳ್ಳಲಾರಂಭಿಸಿದೆ. ಹೊಸ ಪೀಳಿಗೆಯ ಏಕಸ್ವಾಮ್ಯವು ಅದರ ಸ್ಥಾನವನ್ನು ಪಡೆದುಕೊಂಡಿದೆ ಎಂದು ಬರೆದಿದ್ದಾರೆ.

ಇದಲ್ಲದೇ ಇನ್ನೂ ಹಲವು ವಿಷಯಗಳ ಬಗ್ಗೆ ರಾಹುಲ್ ಈ ಲೇಖನದಲ್ಲಿ ಮಾತನಾಡಿದ್ದಾರೆ. ರಾಹುಲ್ ಗಾಂಧಿಯವರ ಈ ಲೇಖನವನ್ನು ರಾಜಮನೆತನಕ್ಕೆ ಸೇರಿದ ಹಲವು ಬಿಜೆಪಿ ನಾಯಕರು ಖಂಡಿಸಿದ್ದಾರೆ.

ರಾಜಮನೆತನದ ಮರ್ಯಾದಿ ತೆಗೆದಿದ್ದಾರೆ: ದಿಯಾ ಕುಮಾರಿ ಭಾರತದ ರಾಜಮನೆತನವನ್ನು ದೂಷಿಸಿದ ರಾಹುಲ್ ಹೇಳಿಕೆಯನ್ನು ಖಂಡಿಸುತ್ತೇನೆ ಭಾರತದ ಹಿಂದಿನ ರಾಜ ಮನೆತನಗಳ ಪರಮ ತ್ಯಾಗದಿಂದಲೇ ಏಕೀಕೃತ ಭಾರತದ ಕನಸು ಸಾಧ್ಯವಾಯಿತು. ಐತಿಹಾಸಿಕ ಸತ್ಯಗಳ ಅಪೂರ್ಣ ವ್ಯಾಖ್ಯಾನದ ಆಧಾರದ ಮೇಲೆ ಮಾಡಿದ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಎಂದು ಬರೆದಿದ್ದಾರೆ.

ಈ ಲೇಖನವು ರಾಹುಲ್ ಅವರ ಅಜ್ಞಾನವನ್ನು ತೋರಿಸುತ್ತದೆ – ಸಿಂಧಿಯಾ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಈ ಲೇಖನಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದ್ವೇಷ ಹುಟ್ಟುಹಾಕುವವರಿಗೆ ಭಾರತೀಯ ಹೆಮ್ಮೆ ಮತ್ತು ಇತಿಹಾಸದ ಬಗ್ಗೆ ಉಪನ್ಯಾಸ ನೀಡುವ ಹಕ್ಕು ಇಲ್ಲ ಎಂದರು. ಭಾರತ ಮಾತೆಯನ್ನು ಅವಮಾನಿಸುವುದನ್ನು ಬಿಟ್ಟು ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಿಜವಾದ ಭಾರತೀಯರಾದ ಮಹದ್ಜಿ ಸಿಂಧಿಯಾ, ಯುವರಾಜ್ ಬಿರ್ ಟಿಕೇಂದ್ರಜಿತ್, ಕಿತ್ತೂರು ಚೆನ್ನಮ್ಮ ಮತ್ತು ರಾಣಿ ವೇಲು ನಾಚಿಯಾರ್ ಬಗ್ಗೆ ತಿಳಿದುಕೊಳ್ಳಿ ಎಂದರು. ಭಾರತದ ಇತಿಹಾಸವನ್ನು ಗೌರವಿಸಿ, ಇಲ್ಲದಿದ್ದರೆ ಟೀಕಿಸಬೇಡಿ ಎಂದರು.

ಮೈಸೂರು ಸಂಸದ ಯದುವೀರ್ ಒಡೆಯರ್ ಹೇಳಿದ್ದೇನು? ನಮ್ಮ ರಾಜ ಮಹಾರಾಜರು ತಮ್ಮ ಸ್ವಾಭಿಮಾನ ಮತ್ತು ದೇಶದ ಅಸ್ಮಿತೆಯೊಂದಿಗೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ ಎಂದು ಯದುವೀರ ಒಡೆಯರ್ ಹೇಳಿದ್ದಾರೆ.ಯಾರು ಲಂಚ ತೆಗೆದುಕೊಂಡಿದ್ದಾರೆ ಎಂಬುದನ್ನು ಸಾರ್ವಜನಿಕವಾಗಿ ಹೇಳಬೇಕು, ಇಲ್ಲದಿದ್ದರೆ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಮೈಸೂರು ಮಹಾರಾಜ ಯದುವೀರ್ ಒಡೆಯರ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ