ಪೊಲೀಸ್ ಬೈಕ್​ನ ಪೆಟ್ರೋಲ್​ ಟ್ಯಾಂಕ್​ಗೆ ಸಕ್ಕರೆ ಹಾಕಿದ್ದ ರತನ್ ಟಾಟಾ

ಅಂದು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಇನ್ನೂ ಚಿಕ್ಕವರಾಗಿದ್ದ ರತನ್ ಟಾಟಾ ತಮ್ಮ ಮೌನ ಪ್ರತಿಭಟನೆಯನ್ನು ಹೇಗೆ ಮಾಡಿದ್ದರು ಎನ್ನುವ ಮಾಹಿತಿ ಇಲ್ಲಿದೆ.

ಪೊಲೀಸ್ ಬೈಕ್​ನ ಪೆಟ್ರೋಲ್​ ಟ್ಯಾಂಕ್​ಗೆ ಸಕ್ಕರೆ ಹಾಕಿದ್ದ ರತನ್ ಟಾಟಾ
ರತನ್ ಟಾಟಾ
Follow us
|

Updated on: Nov 07, 2024 | 9:43 AM

ಖ್ಯಾತ ಉದ್ಯಮಿ ರತನ್ ಟಾಟಾ ನಿಧನದ ನಂತರ ಅವರ ಬಗೆಗಿನ ಸಾಕಷ್ಟು ಕುತೂಹಲಕರ ಸಂಗತಿಗಳು ಹೊರಬರುತ್ತಿವೆ. ರತನ್ ಟಾಟಾ ಗ್ರೂಪ್ಸ್​ನ ಎಮೆರಿಟಸ್​ನ ಅಧ್ಯಕ್ಷರಾಗಿದ್ದರು. ಇದು ಜಾಗತಿಕ ಬಹುರಾಷ್ಟ್ರೀಯ ನಿಗಮವಾಗಿ ರೂಪಾಂತರಗೊಂಡಿತು. ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಿಗೆ ಕೊಡುಗೆ ನೀಡಿದ ದೂರದೃಷ್ಟಿಯ ನಾಯಕರಾಗಿದ್ದರು. ರತನ್ ಟಾಟಾ ಅವರ ನೈತಿಕ ತತ್ವಗಳು, ಲೋಕೋಪಕಾರಕ್ಕೆ ಹೆಸರುವಾಸಿಯಾಗಿದ್ದರು.

ರತನ್ ಟಾಟಾ ಪೊಲೀಸ್ ಬೈಕ್‌ಗೆ ಸಕ್ಕರೆ ಹಾಕಿದ್ದೇಕೆ?

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ರತನ್ ಟಾಟಾ ಅವರ ಕೊಡುಗೆಯೂ ಇದೆ ಎಂದರೆ ತಪ್ಪಾಗಲಾರದು. ಟಾಟಾ ಅವರ ಮನೆ ಟಾಟಾ ಅವರ ಪ್ರಸಿದ್ಧ ಕೇಂದ್ರ ಕಚೇರಿ ಬಾಂಬೆ ಹೌಸ್ ಮುಂಬೈನ ಆಜಾದ್ ಮೈದಾನದ ಬಳಿ ಇತ್ತು. ಸ್ವಾತಂತ್ರ್ಯ ರ್ಯಾಲಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಬ್ರಿಟಿಷರು, ಪೊಲೀಸರ ವಾಹನಗಳ ಪೆಟ್ರೋಲ್​ ಟ್ಯಾಂಕ್​ಗೆ ಸಕ್ಕರೆ ಹಾಕಿದ್ದರು, ಇದು ಅವರ ಮೌನ ಪ್ರತಿಭಟನೆಯಾಗಿತ್ತು. ಬೈಕ್​ ಇಲ್ಲದ ಕಾರಣ ಪ್ರತಿಭಟಿಸುವಾಗ, ಪೊಲೀಸರು ವೇಗವಾಗಿ ಇವರನ್ನು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ,

ಟಾಟಾ ಕುಟುಂಬವು ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ಬೆಂಬಲಿಸಿತ್ತು, ಅವರು ಮಹಾತ್ಮ ಗಾಂಧಿ ಮತ್ತು ಗೋಪಾಲ ಕೃಷ್ಣ ಗೋಖಲೆಯಂತಹ ನಾಯಕರಿಗೆ ಆರ್ಥಿಕ ಸಹಾಯವನ್ನೂ ನೀಡಿದ್ದರು. ಟಾಟಾ ಗ್ರೂಪ್ ಗಾಂಧಿಯವರ ಯೋಜನೆಗಳಿಗೆ 125,000 ರೂ. ಕ್ಕಿಂತ ಹೆಚ್ಚು ಕೊಡುಗೆ ನೀಡಿತು, ಇದು ಫೀನಿಕ್ಸ್ ಸೆಟ್ಲ್‌ಮೆಂಟ್, ಟಾಲ್‌ಸ್ಟಾಯ್ ಫಾರ್ಮ್ ಮತ್ತು ಇಂಡಿಯನ್ ಒಪಿನಿಯನ್ ಪತ್ರಿಕೆಯನ್ನು ಉಳಿಸಿಕೊಳ್ಳಲು ಅತ್ಯಗತ್ಯವಾಗಿತ್ತು.

ಮತ್ತಷ್ಟು ಓದಿ: ರತನ್ ಟಾಟಾ ಹಳೆಯ ಲವ್ ಸ್ಟೋರಿ; ಅಡ್ಡಿಯಾಗಿತ್ತು ಚೀನಾ ಗೋಡೆ; ಟಾಟಾ ಕೈತಪ್ಪಿದ್ದಕ್ಕೆ ಪರಿತಪಿಸಿದ್ದ ಅಮೆರಿಕನ್ ಚೆಲುವೆ

ಭಾರತವು ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾಗ ರತನ್ ಟಾಟಾ ತುಂಬಾ ಚಿಕ್ಕವನಾಗಿದ್ದರು, ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಮೌನ ಪ್ರತಿಭಟನೆಯನ್ನು ಮಾಡಿದ್ದರು.

ಜೆಆರ್​ಡಿ ಟಾಟಾ ಅವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಸ್ವತಂತ್ರ ಪಕ್ಷವನ್ನು ಬೆಂಬಲಿಸುವಂತೆ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಪತ್ರ ಬರೆದರು.

ಸ್ವಾತಂತ್ರ್ಯ ಚಳವಳಿಗೆ ಟಾಟಾ ಅವರ ಬದ್ಧತೆಯು ಸಾಮಾಜಿಕ ನ್ಯಾಯ ಮತ್ತು ರಾಷ್ಟ್ರೀಯ ಪ್ರಗತಿಗೆ ಕುಟುಂಬದ ಸಮರ್ಪಣೆಯನ್ನು ತೋರಿಸುತ್ತದೆ, ರತನ್ ಟಾಟಾ ಅವರು ತಮ್ಮ ಜೀವಿತಾವಧಿಯಲ್ಲಿ ಇದೇ ಪರಂಪರೆಯನ್ನು ಮುಂದುವರೆಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮೋಕ್ಷಿತಾ ಪ್ರಶ್ನೆಗೆ ನಡುಗಿ ಕಣ್ಣೀರು ಹಾಕಿದ ಧನರಾಜ್
ಮೋಕ್ಷಿತಾ ಪ್ರಶ್ನೆಗೆ ನಡುಗಿ ಕಣ್ಣೀರು ಹಾಕಿದ ಧನರಾಜ್
ಕನಸಿನಲ್ಲಿ ದೇವರು, ದೇವಾಲಯಗಳು ಬಂದ್ರೆ ಏನರ್ಥ? ಇಲ್ಲಿದೆ ವಿವರ
ಕನಸಿನಲ್ಲಿ ದೇವರು, ದೇವಾಲಯಗಳು ಬಂದ್ರೆ ಏನರ್ಥ? ಇಲ್ಲಿದೆ ವಿವರ
ಈ ಒಂದು ರಾಶಿಯವರಿಗಿಂದು ಆರೋಗ್ಯ ಭಾಗ್ಯ, 12 ರಾಶಿಗಳ ದಿನಭವಿಷ್ಯ ಇಲ್ಲಿದೆ
ಈ ಒಂದು ರಾಶಿಯವರಿಗಿಂದು ಆರೋಗ್ಯ ಭಾಗ್ಯ, 12 ರಾಶಿಗಳ ದಿನಭವಿಷ್ಯ ಇಲ್ಲಿದೆ
ಬೆಂಗಳೂರಿನಲ್ಲಿ ಬಸ್ ಓಡಿಸುವಾಗಲೇ ಹೃದಯಾಘಾತದಿಂದ ಬಿಎಂಟಿಸಿ ಚಾಲಕ ಸಾವು
ಬೆಂಗಳೂರಿನಲ್ಲಿ ಬಸ್ ಓಡಿಸುವಾಗಲೇ ಹೃದಯಾಘಾತದಿಂದ ಬಿಎಂಟಿಸಿ ಚಾಲಕ ಸಾವು
ಯಾವುದೇ ಭಯವಿಲ್ಲದೆ ಕೈಯಲ್ಲಿ ಹಾವು ಹಿಡಿದ ಯುವತಿ
ಯಾವುದೇ ಭಯವಿಲ್ಲದೆ ಕೈಯಲ್ಲಿ ಹಾವು ಹಿಡಿದ ಯುವತಿ
ಮುಂಬೈ ರೈಲಿನಲ್ಲಿ ನೇತಾಡುತ್ತಾ ಯುವಕನ ನೃತ್ಯ; ಮಿಸ್ ಮಾಡದೆ ನೋಡಿ
ಮುಂಬೈ ರೈಲಿನಲ್ಲಿ ನೇತಾಡುತ್ತಾ ಯುವಕನ ನೃತ್ಯ; ಮಿಸ್ ಮಾಡದೆ ನೋಡಿ
ಶಿಗ್ಗಾವಿ ಅಭ್ಯರ್ಥಿಯನ್ನು ನಮ್ಮಣ್ಣ ಪಠಾಣ ಒಬ್ಬ ಪೈಲ್ವಾನ ಎಂದ ಹೆಬ್ಬಾಳ್ಕರ್
ಶಿಗ್ಗಾವಿ ಅಭ್ಯರ್ಥಿಯನ್ನು ನಮ್ಮಣ್ಣ ಪಠಾಣ ಒಬ್ಬ ಪೈಲ್ವಾನ ಎಂದ ಹೆಬ್ಬಾಳ್ಕರ್
ಬಣ್ಣ ಬಣ್ಣದ ಸುಳ್ಳು ಹೇಳಿದ ಸುರೇಶ್; ಆದ್ರೆ ಹನುಮಂತನ ಮುಂದೆ ನಡೆಯಲಿಲ್ಲ ಆಟ
ಬಣ್ಣ ಬಣ್ಣದ ಸುಳ್ಳು ಹೇಳಿದ ಸುರೇಶ್; ಆದ್ರೆ ಹನುಮಂತನ ಮುಂದೆ ನಡೆಯಲಿಲ್ಲ ಆಟ
ಇಬ್ಬರು ಮುತ್ಸದ್ದಿಗಳಿಂದ ಪ್ರಚಾರ ಮಾಡಿಸಿಕೊಳ್ಳುತ್ತಿರುವ ನಿಖಿಲ್ ಅದೃಷ್ಟವಂತ
ಇಬ್ಬರು ಮುತ್ಸದ್ದಿಗಳಿಂದ ಪ್ರಚಾರ ಮಾಡಿಸಿಕೊಳ್ಳುತ್ತಿರುವ ನಿಖಿಲ್ ಅದೃಷ್ಟವಂತ
ಗೆಲುವಿನ ಖುಷಿಯಲ್ಲಿ ಬಘೀರ ಚಿತ್ರತಂಡ; ಶ್ರೀಮುರಳಿ ಸಕ್ಸಸ್ ಮೀಟ್; ಲೈವ್ ನೋಡಿ
ಗೆಲುವಿನ ಖುಷಿಯಲ್ಲಿ ಬಘೀರ ಚಿತ್ರತಂಡ; ಶ್ರೀಮುರಳಿ ಸಕ್ಸಸ್ ಮೀಟ್; ಲೈವ್ ನೋಡಿ