AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರತನ್ ಟಾಟಾ ಹಳೆಯ ಲವ್ ಸ್ಟೋರಿ; ಅಡ್ಡಿಯಾಗಿತ್ತು ಚೀನಾ ಗೋಡೆ; ಟಾಟಾ ಕೈತಪ್ಪಿದ್ದಕ್ಕೆ ಪರಿತಪಿಸಿದ್ದ ಅಮೆರಿಕನ್ ಚೆಲುವೆ

Ratan Tata love story: ರತನ್ ಟಾಟಾ ಅವಿವಾಹಿತರಾದರೂ ತಮ್ಮ ಜೀವನಗರ್ಭದಲ್ಲಿ ಕೊನೆಯವರೆಗೂ ಪ್ರೇಮಕಥೆಯೊಂದನ್ನು ಜೀವಂತವಾಗಿ ಉಳಿಸಿಕೊಂಡವರು. ರತನ್ ಅಮೆರಿಕದಲ್ಲಿದ್ದಾಗ ಕೆರೋಲಿನ್ ಎಮ್ಮೋನ್ಸ್ ಎಂಬಾಕೆಯನ್ನು ಪ್ರೀತಿಸಿದ್ದರು. ಅವರಿಬ್ಬರ ಲವ್ ಸ್ಟೋರಿ 1962ರ ಚೀನಾ ಯುದ್ಧದಿಂದ ಘಾಸಿಗೊಂಡಿತ್ತು. ಕೆರೋಲಿನ್ ಬೇರೆ ವ್ಯಕ್ತಿ ಜೊತೆ ವಿವಾಹವಾದರೂ, ಹಲವು ವರ್ಷಗಳ ಬಳಿಕ ಇಬ್ಬರೂ ಮತ್ತೆ ಒಡನಾಡತೊಡಗಿದ್ದರು.

ರತನ್ ಟಾಟಾ ಹಳೆಯ ಲವ್ ಸ್ಟೋರಿ; ಅಡ್ಡಿಯಾಗಿತ್ತು ಚೀನಾ ಗೋಡೆ; ಟಾಟಾ ಕೈತಪ್ಪಿದ್ದಕ್ಕೆ ಪರಿತಪಿಸಿದ್ದ ಅಮೆರಿಕನ್ ಚೆಲುವೆ
ರತನ್ ಟಾಟಾ ಲವ್ ಸ್ಟೋರಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 04, 2024 | 5:26 PM

Share

ಕಳೆದ ತಿಂಗಳು ಇಹಲೋಕ ತ್ಯಜಿಸಿದ ರತನ್ ಟಾಟಾ ಭಾರತ ಕಂಡ ಅತ್ಯಂತ ಧೀಮಂತ ಮತ್ತು ಗೌರವಾನ್ವಿತ ಉದ್ಯಮಿಗಳಲ್ಲೊಬ್ಬರು. ರತನ್ ಟಾಟಾ ಅವಿವಾಹಿತರಾಗೇ ಉಳಿದರಾದರೂ ಹಿಂದೆ ಅಪೂರ್ವ ಲವ್ ಸ್ಟೋರಿ ಅವರೊಂದಿಗಿದೆ. ರತನ್ ಟಾಟಾ ತಂದೆ ಜೆಆರ್​ಡಿ ಟಾಟಾ ಅವರು ಅಮೆರಿಕದಲ್ಲಿ ಫ್ರೆಡರಿಕ್ ಎಂಬುವವರ ಜೊತೆ ಸೇರಿ ‘ಜೋನ್ಸ್ ಅಂಡ್​ ಎಮ್ಮೋನ್ಸ್’ ಎನ್ನುವ ಆರ್ಕಿಟೆಕ್ಚರ್ ಕಂಪನಿ ನಡೆಸುತ್ತಿದ್ದರು. ಫ್ರೆಡರಿಕ್ ಅವರ ಮಗಳಾದ 19 ವರ್ಷದ ಕೆರೊಲಿನ್ ಎಮ್ಮೋನ್ಸ್ ಮತ್ತು ರತನ್ ಟಾಟಾ ಮಧ್ಯೆ ಪ್ರೇಮಾಂಕುರವಾಗುತ್ತದೆ. ಆಗ ರತನ್ ಟಾಟಾ ಅಮೆರಿಕದಲ್ಲೇ ಓದುತ್ತಿರುತ್ತಾರೆ. ಇವರಿಬ್ಬರ ಪ್ರೇಮ ಕಥೆ ಬಗ್ಗೆ ಥಾಮಸ್ ಮ್ಯಾಥ್ಯೂ ಅವರು ತಮ್ಮ ‘ರತನ್ ಟಾಟಾ: ಎ ಲೈಫ್’ ಪುಸ್ತಕದಲ್ಲಿ ಬರೆದಿದ್ದಾರೆ.

ಮೊದಲ ನೋಟದಲ್ಲೇ ರತನ್ ಇಷ್ಟವಾಗಿದ್ದರು ಕೆರೋಲಿನ್​ಗೆ…

‘ಮೊದಲ ನೋಟದಲ್ಲೇ ನನಗೆ ರತನ್ ಇಷ್ಟವಾಗಿಬಿಟ್ಟರು,’ ಎಂದು ಕೆರೋಲಿನ್ ಅವರು ಹೇಳಿದ್ದನ್ನು ಥಾಮಸ್ ಮ್ಯಾಥ್ಯೂ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಕುತೂಹಲ ಎಂದರೆ ಕೆರೋಲಿನ್ ಅವರ ತಂದೆ ತಾಯಿಗೂ ಕೂಡ ರತನ್ ಟಾಟಾ ಕಂಡರೆ ಇಷ್ಟವಿತ್ತಂತೆ. ದುರದೃಷ್ಟಕ್ಕೆ ಈ ಸಂಬಂಧ ಹೆಚ್ಚು ಕಾಲ ನಿಲ್ಲಲಿಲ್ಲ.

ಅಜ್ಜಿ ನೋಡಲು ರತನ್ ಭಾರತಕ್ಕೆ ಬಂದಿದ್ದೇ ಲವ್ ಸ್ಟೋರಿಗೆ ಟ್ವಿಸ್ಟ್

ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ತಮ್ಮ ಅಜ್ಜಿಯನ್ನು ನೋಡಲು ರತನ್ ಟಾಟಾ 1962ರ ಜುಲೈನಲ್ಲಿ ಭಾರತಕ್ಕೆ ಮರಳುತ್ತಾರೆ. ಆಗ ಕೆರೋಲಿನ್ ಕೂಡ ಟಾಟಾ ಜೊತೆ ಭಾರತಕ್ಕೆ ಬರಲು ಸಿದ್ಧವಿದ್ದರು. ಅಷ್ಟರಮಟ್ಟಿಗೆ ಆಕೆಯು ಪ್ರೀತಿಯಲ್ಲಿ ಮುಳುಗಿದ್ದರು. 1962ರ ಅಕ್ಟೋಬರ್ 20ರಂದು ಭಾರತ ಮತ್ತು ಚೀನಾ ಮಧ್ಯೆ ಯುದ್ಧ ಆರಂಭವಾಯಿತು. ಒಂದು ತಿಂಗಳೊಳಗೆ ಸೀಸ್​ಫೈರ್ ಘೋಷಣೆ ಆಗಿತ್ತಾದರೂ ಅಮೆರಿಕನ್ನರು ಭಾರತಕ್ಕೆ ಬರಲು ಅದೇಕೋ ಹೆದರುತ್ತಿದ್ದರು. ಇದೇ ಕಾರಣಕ್ಕೋ ಅಥವಾ ಮತ್ಯಾವುದೋ ಕಾರಣಕ್ಕೋ ರತನ್ ಮತ್ತು ಕೆರೋಲಿನ್ ತಮ್ಮ ಪ್ರೇಮ ಸಂಬಂಧವನ್ನು ಮುಂದುವರಿಸಲಿಲ್ಲ.

ಇದನ್ನೂ ಓದಿ: ಪೇಮೆಂಟ್ ಆಗಿಲ್ಲವೆಂದು ಬಾಂಗ್ಲಾದೇಶಕ್ಕೆ ಪವರ್ ಕಟ್ ಮಾಡಲು ಅದಾನಿ ಯೋಜನೆ

ರತನ್​ರಿಂದ ದೂರವಾದ ದುಃಖದ ಮಧ್ಯೆಯೂ ಕೆರೋಲಿನ್ ಸ್ವಲ್ಪ ಕಾಲದ ಬಳಿಕ ಓವನ್ ಜೋನ್ಸ್ ಎನ್ನುವ ಆರ್ಕಿಟೆಕ್ಟ್ ಮತ್ತು ಪೈಲಟ್​ರನ್ನು ಮದುವೆಯಾಗುತ್ತಾರೆ. ಕುತೂಹಲವೆಂದರೆ ಕೆರೋಲಿನ್ ಜೀವನ ಪ್ರವೇಶಿಸಿದ ಆ ಯುವಕ, ಆಕೆಯ ಕಣ್ಣಿಗೆ ರತನ್ ರೀತಿಯೇ ಕಾಣುತ್ತಿದ್ದನಂತೆ. 2006ರಲ್ಲಿ ಓವನ್ ನಿಧನರಾಗುತ್ತಾರೆ.

ಕೆರೋಲಿನ್ ಸ್ಮರಣೆಯಿಂದ ಮಾಸದ ರತನ್

ಗಂಡ ಸತ್ತ ಬಳಿಕ ಕೆರೋಲಿನ್ ತನ್ನ ಸ್ನೇಹಿತರ ಜೊತೆ ‘ದಾರ್ಜೀಲಿಂಗ್ ಲಿಮಿಟೆಡ್’ ಎನ್ನುವ ಸಿನಿಮಾ ನೋಡುತ್ತಾರೆ. ಅದು ಮೂವರು ಸಹೋದರರು ಭಾರತಕ್ಕೆ ಪ್ರವಾಸ ಹೋಗುವ ಘಟನೆಯ ಕಥೆ ಹಂದರ ಇರುವ ಚಿತ್ರ. ಸಿನಿಮಾ ನೋಡಿದ ಬಳಿಕ ಕೆರೋಲಿನ್​ಗೆ ಭಾರತಕ್ಕೆ ಹೋಗುವ ಆಸೆ ಹುಟ್ಟಿತಂತೆ. ಆಗ ಆಕೆಗೆ ನೆನಪಾಗಿದ್ದು ರತನ್ ಟಾಟಾ.

ತನ್ನ ಹಳೆಯ ಪ್ರಿಯಕರನ ಬಗ್ಗೆ ಕೆರೋಲಿನ್ ಆನ್​ಲೈನ್​ನಲ್ಲಿ ಮಾಹಿತಿ ಹುಡುಕುತ್ತಿದ್ದಾಗ, ಆತ ದೊಡ್ಡ ಉದ್ಯಮಿ ಆಗಿರುವುದು, ಟಾಟಾ ಸನ್ಸ್ ಛೇರ್ಮನ್ ಆಗಿರುವ ಸಂಗತಿ ತಿಳಿಯುತ್ತದೆ. ಇಮೇಲ್ ಮೂಲಕ ಆಕೆ ರತನ್​ರನ್ನು ಸಂಪರ್ಕಿಸಿ, ಭಾರತಕ್ಕೆ ತಾನು ಬರುತ್ತಿರುವ ಪ್ಲಾನ್ ತಿಳಿಸುತ್ತಾರೆ. ಅಲ್ಲಿಂದ ಅವರಿಬ್ಬರ ಒಡನಾಟ ಹೆಚ್ಚುತ್ತಾ ಹೋಗುತ್ತದೆ.

ಇದನ್ನೂ ಓದಿ: ಜಿಯೋ, ಏರ್ಟೆಲ್ ಮುಟ್ಟದ ಜಾಗಕ್ಕೆ ನುಗ್ಗುತ್ತಿರುವ ಬಿಎಸ್ಸೆನ್ನೆಲ್; ಕಾವೇರಿದೆ ಟೆಲಿಕಾಂ ಪೈಪೋಟಿ

ನಿಯಮಿತವಾಗಿ ಭೇಟಿಯಾಗುತ್ತಿದ್ದ ಪ್ರೇಮ ಹಕ್ಕಿಗಳು…

ರತನ್ ಟಾಟಾ ಮತ್ತು ಕೆರೋಲಿನ್ ಸಮಯ ಸಂದರ್ಭ ಸಿಕ್ಕಾಗೆಲ್ಲಾ ಭೇಟಿಯಾಗುತ್ತಿರುತ್ತಾರೆ. ರತನ್ ಅಮೆರಿಕಕ್ಕೆ ಹೋದಾಗೆಲ್ಲಾ ಕೆರೋಲಿನ್​ರನ್ನು ಡಿನ್ನರ್​ಗೆ ಕರೆದುಕೊಂಡು ಹೋಗುತ್ತಿದ್ದರು. ಕೆರೋಲಿನ್ ಕೂಡ ಆಗಾಗ್ಗೆ ಭಾರತಕ್ಕೆ ಬಂದು ರತನ್​​ರನ್ನು ಕಂಡು ಹೋಗುತ್ತಿದ್ದರು. ಕೊನೆಯವರೆಗೂ ಅವರಿಬ್ಬರ ಬಾಂಧವ್ಯ ಗಟ್ಟಿಯಾಗಿಯೇ ಉಳಿದಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!