ಪೇಮೆಂಟ್ ಆಗಿಲ್ಲವೆಂದು ಬಾಂಗ್ಲಾದೇಶಕ್ಕೆ ಪವರ್ ಕಟ್ ಮಾಡಲು ಅದಾನಿ ಯೋಜನೆ

Adani vs Bangladesh: ಬಾಂಗ್ಲಾದೇಶಕ್ಕೆ ಅರ್ಧದಷ್ಟು ವಿದ್ಯುತ್ ಸರಬರಾಜು ನಿಲ್ಲಿಸಿರುವ ಅದಾನಿ ಪವರ್ ಸಂಸ್ಥೆ ಈಗ ಪೂರ್ಣವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲು ಮುಂದಾಗಿದೆ. ಅದಾನಿ ಗ್ರೂಪ್​ನಿಂದ ವಿದ್ಯುತ್ ಸರಬರಾಜು ಪಡೆಯುತ್ತಿರುವ ಬಾಂಗ್ಲಾದೇಶ ಸುಮಾರು 846 ಮಿಲಿಯನ್ ಡಾಲರ್​ನಷ್ಟು ಬಿಲ್ ಹಣ ಬಾಕಿ ಉಳಿಸಿಕೊಂಡಿದೆ. ಅದು ಪೂರ್ಣವಾಗಿ ಪಾವತಿಸದಿದ್ದರೆ ವಿದ್ಯುತ್ ಸರಬರಾಜು ಕಟ್ ಮಾಡುವುದಾಗಿ ಎಪಿಜೆಎಲ್ ಹೇಳಿದೆ.

ಪೇಮೆಂಟ್ ಆಗಿಲ್ಲವೆಂದು ಬಾಂಗ್ಲಾದೇಶಕ್ಕೆ ಪವರ್ ಕಟ್ ಮಾಡಲು ಅದಾನಿ ಯೋಜನೆ
ಅದಾನಿ ಪವರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 04, 2024 | 11:30 AM

ನವದೆಹಲಿ, ನವೆಂಬರ್ 4: ಬಾಂಗ್ಲಾದೇಶದಿಂದ ತನಗೆ ಬರಬೇಕಿರುವ ವಿದ್ಯುತ್ ಬಿಲ್ ಇನ್ನೂ ಸಾಕಷ್ಟು ಬಾಕಿ ಇರುವ ಹಿನ್ನೆಲೆಯಲ್ಲಿ ಅದಾನಿ ಸಂಸ್ಥೆ ವಿದ್ಯುತ್ ಸರಬರಾಜು ನಿಲ್ಲಿಸಲು ನಿರ್ಧರಿಸಿದೆ. ಅದಾನಿ ಗ್ರೂಪ್​ಗೆ ಸೇರಿದ ಎಪಿಜೆಎಲ್ ಸಂಸ್ಥೆ ಹಾಗೂ ಬಾಂಗ್ಲಾದೇಶ ಸರ್ಕಾರದ ಮಧ್ಯೆ ವಿದ್ಯುತ್ ಸರಬರಾಜಿಗೆ ಒಪ್ಪಂದವಾಗಿದೆ. ಆದರೆ, 846 ಮಿಲಿಯನ್ ಡಾಲರ್​ನಷ್ಟು ಹಣ ಬಾಕಿ ಉಳಿಸಿಕೊಂಡಿದೆ ಎಂದು ಅದಾನಿ ಪವರ್ ಸಂಸ್ಥೆ ಹೇಳುತ್ತಿದೆ. ಅದು ಪಾವತಿ ಆಗುವವರೆಗೂ ಬಾಂಗ್ಲಾದೇಶಕ್ಕೆ ಪವರ್ ಸಪ್ಲೈ ನಿಲ್ಲಿಸುವುದಾಗಿ ಎಪಿಜೆಎಲ್ ಎಚ್ಚರಿಕೆ ನೀಡಿದೆ. ಈಗಾಗಲೇ ವಿದ್ಯುತ್ ಸರಬರಾಜು ಪ್ರಮಾಣವನ್ನು ಅರ್ಧದಷ್ಟು ಕಡಿಮೆ ಮಾಡಿದೆ ಎನ್ನಲಾಗುತ್ತಿದೆ.

ಕಳೆದ ಗುರುವಾರ ರಾತ್ರಿ ಬಾಂಗ್ಲಾದೇಶಕ್ಕೆ 1,600 ಮೆಗಾವ್ಯಾಟ್​ಗೂ ಹೆಚ್ಚು ಮೊತ್ತದ ವಿದ್ಯುತ್ ಕೊರತೆ ಎದುರಾಗಿತ್ತು ಎಂಬುದು ಬಾಂಗ್ಲಾದೇಶದ ಪವರ್ ಗ್ರಿಡ್ ದತ್ತಾಂಶದಿಂದ ತಿಳಿದುಬಂದಿದೆ. ಅದೇ ವೇಳೆ ಜಾರ್ಖಂಡ್​ನಲ್ಲಿ ಇರುವ ಅದಾನಿ ಪವರ್​ನ 1,496 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕದಲ್ಲಿ 700 ಮೆಗಾವ್ಯಾಟ್ ಮಾತ್ರವೇ ವಿದ್ಯುತ್ ಉತ್ಪಾದನೆ ಆಗುತ್ತಿದೆ.

ಇದನ್ನೂ ಓದಿ: ಜಿಯೋ, ಏರ್ಟೆಲ್ ಮುಟ್ಟದ ಜಾಗಕ್ಕೆ ನುಗ್ಗುತ್ತಿರುವ ಬಿಎಸ್ಸೆನ್ನೆಲ್; ಕಾವೇರಿದೆ ಟೆಲಿಕಾಂ ಪೈಪೋಟಿ

ಅದಾನಿ ಕಂಪನಿಯ ಪವರ್ ರೇಟ್ ಹೆಚ್ಚಾಯ್ತು ಎನ್ನುವ ಬಾಂಗ್ಲಾದೇಶದ ಹೊಸ ಸರ್ಕಾರ

ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡು ಹೊಸ ಹಂಗಾಮಿ ಸರ್ಕಾರ ಸ್ಥಾಪನೆಯಾದಾಗಿನಿಂದ ಅದಾನಿ ಕಂಪನಿ ಜೊತೆ ಸರ್ಕಾರ ತಗಾದೆ ತೆಗೆಯುತ್ತಲೇ ಇದೆ. ಅದಾನಿ ಕಂಪನಿ ದುಬಾರಿ ಬೆಲೆಗೆ ವಿದ್ಯುತ್ ನೀಡುತ್ತಿದೆ ಎಂಬುದು ಆಕ್ಷೇಪ. ಗುತ್ತಿಗೆಯನ್ನು ಮರುಪರಿಶೀಲಿಸುವುದಾಗಿ ಸರ್ಕಾರ ಹೇಳುತ್ತಿದೆ.

ಅದಾನಿ ಕಂಪನಿ ಸರಬರಾಜು ಮಾಡುವ ವಿದ್ಯುತ್​ನ ದರವು ಕಲ್ಲಿದ್ದಲು ಬೆಲೆ ಪ್ರಕಾರ ಬದಲಾಗುತ್ತದೆ. ಇಂಡೋನೇಷ್ಯನ್ ಕೋಲ್ ಇಂಡೆಕ್ಸ್ ಮತ್ತು ಆಸ್ಟ್ರೇಲಿಯನ್ ನ್ಯೂಕ್ಯಾಸಲ್ ಇಂಡೆಕ್ಸ್​ನಲ್ಲಿನ ಸರಾಸರಿ ಪ್ರಕಾರ ಕಲ್ಲಿದ್ದಲು ದರವನ್ನು ಲೆಕ್ಕ ಮಾಡಲಾಗುತ್ತದೆ.

ಇದನ್ನೂ ಓದಿ: ಇದು ‘ಬೋಸ್’ ಕಥೆ..! ಬ್ರಿಟಿಷರಿಂದ ತಪ್ಪಿಸಿಕೊಂಡು ಅಮೆರಿಕಕ್ಕೆ ಎಸ್ಕೇಪ್ ಆಗಿದ್ದ ಅಪ್ಪ; 30,000 ಕೋಟಿ ರೂ ಉದ್ಯಮ ಕಟ್ಟಿದ ಮಗ

ಬಾಕಿ ಹಣ ಪಾವತಿಯಾಗದಿದ್ದರೆ ಕ್ರಮ: ಅದಾನಿ ಎಚ್ಚರಿಕೆ

ತನಗೆ ಬರಬೇಕಿರುವ ವಿದ್ಯುತ್ ಬಿಲ್ ಬಾಕಿ ಹಣವನ್ನು ಬಾಂಗ್ಲಾದೇಶ ಸರ್ಕಾರ ಪಾವತಿಸಬೇಕು. ಇಲ್ಲದಿದ್ದರೆ ವಿದ್ಯುತ್ ಸರಬರಾಜು ಪೂರ್ಣ ನಿಲ್ಲಿಸಲಾಗುವುದು. ಜೊತೆಗೆ, ವಿದ್ಯುತ್ ಖರೀದಿ ಒಪ್ಪಂದದ (ಪಿಪಿಎ) ಅನುಸಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಜಿಜೆಎಲ್ ಎಚ್ಚರಿಕೆ ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್