Mulayam Singh Yadav ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

82ರ ಹರೆಯದ ಮುಲಾಯಂ ಸಿಂಗ್ ಸೋಮವಾರದವರೆಗೆ ಕ್ರಿಟಿಕಲ್ ಕೇರ್ ಯುನಿಟ್​​ನಲ್ಲಿದ್ದರು. ಮುಲಾಯಂಸಿಂಗ್ ಅವರ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದ್ದು ಅವರನ್ನು...

Mulayam Singh Yadav ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ
ಮುಲಾಯಂ ಸಿಂಗ್ ಯಾದವ್
Updated By: ರಶ್ಮಿ ಕಲ್ಲಕಟ್ಟ

Updated on: Oct 04, 2022 | 7:09 PM

ಲಖನೌ: ಸಮಾಜವಾದಿ ಪಕ್ಷದ(Samajwadi Party) ಮುಖ್ಯಸ್ಥ ಮುಲಾಯಂ ಸಿಂಗ್ (Mulayam Singh Yadav) ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು ಅವರನ್ನು ಮೇದಾಂತ ಆಸ್ಪತ್ರೆಯ ಐಸಿಯುಗೆ ಶಿಫ್ಟ್ ಮಾಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ. 82ರ ಹರೆಯದ ಮುಲಾಯಂ ಸಿಂಗ್ ಸೋಮವಾರದವರೆಗೆ ಕ್ರಿಟಿಕಲ್ ಕೇರ್ ಯುನಿಟ್​​ನಲ್ಲಿದ್ದರು. ಮುಲಾಯಂಸಿಂಗ್ ಅವರ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದ್ದು ಅವರನ್ನು ಮೇದಾಂತ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ತಜ್ಞರ ಸಮಗ್ರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಮೇದಾಂತ ಆಸ್ಪತ್ರೆ ಹೊರಡಿಸಿದ ಆರೋಗ್ಯ ಬುಲೆಟ್ ನಲ್ಲಿ ಹೇಳಿದೆ. ಇದನ್ನು ಸಮಾಜವಾದಿ ಪಕ್ಷ ಟ್ವೀಟ್ ಮಾಡಿದೆ.


ಅವರು ಬೇಗನೆ ಚೇತರಿಸಿಕೊಳ್ಳಲಿ, ದೀರ್ಘಕಾಲ ಬದುಕಲಿ ಎಂದು ಸಮಾಜವಾದಿ ಪಕ್ಷ ಹೇಳಿದೆ.
ಮುಲಾಯಂ ಸಿಂಗ್ ಯಾದವ್ ಅವರು ಆಗಸ್ಟ್ 22 ರಿಂದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂಲಗಳ ಪ್ರಕಾರ ಸಮಾಜವಾದಿ ಪಕ್ಷದ ಹಿರಿಯ ನಾಯಕ ಸಿಂಗ್ ಜುಲೈನಲ್ಲಿಯೂ ಆಸ್ಪತ್ರೆಗೆ ದಾಖಲಾಗಿದ್ದರು.