‘ಮತ್ತೆ ಪ್ರಧಾನಿ ಮೋದಿಯವರಿಗೆ ಹತ್ತಿರವಾಗೋಣ..ಇಲ್ಲಿದಿದ್ದರೆ ಪಕ್ಷಕ್ಕೆ ಉಳಿಗಾಲವಿಲ್ಲ..’: ಉದ್ಧವ್​ಠಾಕ್ರೆಗೆ ಶಿವಸೇನೆ ಶಾಸಕನ ಒತ್ತಾಯ

| Updated By: Lakshmi Hegde

Updated on: Jun 20, 2021 | 6:06 PM

ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಶಾಶ್ವತವಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ ಸ್ವತಂತ್ರ್ಯವಾಗಿ ಸ್ಪರ್ಧಿಸುತ್ತದೆ ಎಂದು ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಹೇಳಿಕೆ ನೀಡಿದ ಬೆನ್ನಲ್ಲೇ ಥಾಣೆ ಎಂಎಲ್​ಎ ಪ್ರತಾಪ್​ ಸರ್​ನಾಯಕ್​ ಉದ್ಧವ್ ಠಾಕ್ರೆಯವರಿಗೆ ಹೀಗೆಂದು ಪತ್ರ ಬರೆದಿದ್ದಾರೆ.

‘ಮತ್ತೆ ಪ್ರಧಾನಿ ಮೋದಿಯವರಿಗೆ ಹತ್ತಿರವಾಗೋಣ..ಇಲ್ಲಿದಿದ್ದರೆ ಪಕ್ಷಕ್ಕೆ ಉಳಿಗಾಲವಿಲ್ಲ..’: ಉದ್ಧವ್​ಠಾಕ್ರೆಗೆ ಶಿವಸೇನೆ ಶಾಸಕನ ಒತ್ತಾಯ
ಪ್ರತಾಫ್ ಸರ್​ನಾಯಕ್​
Follow us on

ಕಾಂಗ್ರೆಸ್​ ಹಾಗೂ ಎನ್​ಸಿಪಿ ಪಕ್ಷಗಳಿಂದಾಗಿ ನಮ್ಮ ಪಕ್ಷ ದುರ್ಬಲವಾಗುತ್ತಿವೆ. ಹಾಗಾಗಿ ಪ್ರಧಾನಿ ಮೋದಿಯವರಿಗೆ ಇನ್ನಷ್ಟು ಹತ್ತಿರವಾಗಿ..ಬಿಜೆಪಿಯೊಂದಿಗೆ ಮತ್ತೆ ಸಂಬಂಧ ಬಲಪಡಿಸಿಕೊಳ್ಳಿ ಎಂದು ಶಿವ ಸೇನೆ ಶಾಸಕ ಪ್ರತಾಪ್​ ಸರ್​ನಾಯಕ್​ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಯವರಿಗೆ ಪತ್ರ ಬರೆದಿದ್ದಾರೆ. ಮತ್ತೊಮ್ಮೆ ಶಿವಸೇನಾ ಮತ್ತು ಬಿಜೆಪಿ ಒಟ್ಟಾದರೆ ನಮ್ಮ ಪಕ್ಷ ಹಾಗೂ ಕಾರ್ಯಕರ್ತರಿಗೆ ತುಂಬ ಅನುಕೂಲವಾಗುತ್ತದೆ. ನಮಗೆ ನಿಮ್ಮಲ್ಲಿ ಹಾಗೂ ನಿಮ್ಮ ನಾಯಕತ್ವದಲ್ಲಿ ನಂಬಿಕೆ ಇದೆ. ಆದರೆ ನಮ್ಮ ತಪ್ಪಿಲ್ಲದೆ ಇದ್ದರೂ ಕೇಂದ್ರೀಯ ತನಿಖಾ ದಳಗಳು ನಮ್ಮನ್ನು ಟಾರ್ಗೆಟ್ ಮಾಡುತ್ತಿವೆ. ಮತ್ತೆ ನೀವು ಪ್ರಧಾನಿ ನರೇಂದ್ರ ಮೋದಿಯವರಿಗೆ ಹತ್ತಿರವಾದರೆ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಶಾಶ್ವತವಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ ಸ್ವತಂತ್ರ್ಯವಾಗಿ ಸ್ಪರ್ಧಿಸುತ್ತದೆ ಎಂದು ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಹೇಳಿಕೆ ನೀಡಿದ ಬೆನ್ನಲ್ಲೇ ಥಾಣೆ ಎಂಎಲ್​ಎ ಪ್ರತಾಪ್​ ಸರ್​ನಾಯಕ್​ ಉದ್ಧವ್ ಠಾಕ್ರೆಯವರಿಗೆ ಹೀಗೆಂದು ಪತ್ರ ಬರೆದಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಬದಿಗಿರಿಸಿ ಅಧಿಕಾರ ಹಿಡಿಯಲು ಶಿವಸೇನೆ ಕಾಂಗ್ರೆಸ್​ ಮತ್ತು ಎನ್​ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದರೆ ಅಲ್ಲಿ ಸರ್ಕಾರ ಅಧಿಕಾರ ನಡೆಸಲು ಶುರುವಾದಾಗಿನಿಂದಲೂ ಪರಸ್ಪರ ಹೊಂದಾಣಿಕೆಯಿಲ್ಲ ಎಂಬುದು ಆಗಾಗ ಬೆಳಕಿಗೆ ಬರುತ್ತಲೇ ಇದೆ. ಅದರ ಬೆನ್ನಲ್ಲೇ ಇತ್ತೀಚೆಗೆ ನಾನಾ ಪಟೋಲೆ ಪ್ರತ್ಯೇಕ ಸ್ಪರ್ಧೆಯ ಬಗ್ಗೆ ಪದೇಪದೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಯಾಗುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  Radhika Pandit: ರಾಕಿಂಗ್​ ಸ್ಟಾರ್​ ಯಶ್ ಬಗ್ಗೆ ವಿಶೇಷ ಮಾತುಗಳನ್ನು ಆಡಿದ ರಾಧಿಕಾ ಪಂಡಿತ್​