ಹೊಸ ಸಂಸತ್ ಭವನ ನಿರ್ಮಾಣ ವಿರೋಧಿಸಿದ ಕಾಂಗ್ರೆಸ್ ದ್ವಂದ್ವ ನಿಲುವು ಬಯಲಾಯ್ತು; ಏನಿದೆ ಆ ಪತ್ರದಲ್ಲಿ?

ಹೊಸ ಸಂಸತ್ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ವಿರೋಧಿಸಿ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಟೀಕಿಸಿತ್ತು. ಈಗ ಲಭ್ಯವಾಗಿರುವ ಪತ್ರದ ಮಾಹಿತಿಯಂತೆ ಕಾಂಗ್ರೆಸ್ ಕೂಡ 2012ರಲ್ಲಿ ಹೊಸ ಸಂಸತ್ ಭವನ ನಿರ್ಮಿಸುವ ಯೋಜನೆ ಹಾಕಿಕೊಂಡಿತ್ತು.

ಹೊಸ ಸಂಸತ್ ಭವನ ನಿರ್ಮಾಣ ವಿರೋಧಿಸಿದ ಕಾಂಗ್ರೆಸ್ ದ್ವಂದ್ವ ನಿಲುವು ಬಯಲಾಯ್ತು; ಏನಿದೆ ಆ ಪತ್ರದಲ್ಲಿ?
ಹೊಸ ಸಂಸತ್ ಭವನದ ನೀಲಿನಕ್ಷೆ
TV9kannada Web Team

| Edited By: ganapathi bhat

Apr 07, 2022 | 10:46 AM

ಹೊಸ ಸಂಸತ್ ಭವನ ಕಟ್ಟಡ ನಿರ್ಮಾಣಕ್ಕೆ ಕಾಂಗ್ರೆಸ್​ ವಿರೋಧ ವ್ಯಕ್ತಪಡಿಸಿತ್ತು. ಆದರೆ ಈ ಮೊದಲು ಕಾಂಗ್ರೆಸ್​​ ಅಧಿಕಾರದಲ್ಲಿ ಇದ್ದಾಗ ಹೊಸ ಸಂಸತ್ ಕಟ್ಟಡ ನಿರ್ಮಿಸುವ ಯೋಜನೆ ಹೊಂದಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

ಕಾಂಗ್ರೆಸ್​ ನಾಯಕಿ ಹಾಗೂ  ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ 2012ರಲ್ಲಿ ಹೊಸ ಸಂಸತ್​ ಭವನ ನಿರ್ಮಾಣ ಮಾಡಲು ಅನುಮೋದನೆ ನೀಡಿದ್ದರು. ಈ ವಿಚಾರ ಟೈಮ್ಸ್ ನೌಗೆ ಲಭ್ಯವಾಗಿದೆ.

ಸರ್ಕಾರಿ ಅಧಿಕಾರಿಯೊಬ್ಬರು ಲೋಕಸಭಾ ಸ್ಪೀಕರ್​ಗೆ ಜುಲೈ 13, 2012ರಂದು ಬರೆದ ಪತ್ರದಲ್ಲಿ, ಸಂಸತ್ ಭವನವು 1920ರಲ್ಲಿ ಕಟ್ಟಿದ್ದಾಗಿದೆ. 1927ರಿಂದ ಬಳಕೆಯಲ್ಲಿದೆ. ಭವನವು ಪ್ರಥಮ ದರ್ಜೆಯ ಹೆರಿಟೇಜ್ ಕಟ್ಟಡ ಎಂದೂ ಕರೆಸಿಕೊಂಡಿದೆ. ಕಳೆದ ಅಷ್ಟೂ ವರ್ಷಗಳಿಂದ ಬಳಕೆಯಲ್ಲಿರುವ ಈ ಕಟ್ಟಡವು ಶಿಥಿಲಗೊಳ್ಳುವ ಹಂತದಲ್ಲಿದೆ. ಜೊತೆಗೆ, ಲೋಕಸಭಾ ಮತ್ತು ರಾಜ್ಯಸಭಾ ಸ್ಥಾನಗಳು 2026ರ ವೇಳೆಗೆ ಏರಿಕೆಯಾಗುವ ಸಾಧ್ಯತೆ ಇದ್ದು ಹೆಚ್ಚು ಜನರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿರುವ ಹೊಸ ಸಂಸತ್ ಭವನದ ಅವಶ್ಯಕತೆ ಇದೆ ಎಂದು ಹೇಳಿದ್ದರು.

ಹೀಗಾಗಿ, ಮೀರಾ ಕುಮಾರಿ ಹೊಸ ಸಂಸತ್​ ಭವನ ನಿರ್ಮಾಣಕ್ಕೆ ಅನುಮೋದನೇ ನೀಡಿದ್ದರು ಎನ್ನುವ ವಿಚಾರ ವರದಿಯಿಂದ ಬಹಿರಂಗವಾಗಿದೆ.

Photo Gallery | ಹೇಗಿತ್ತು ಗೊತ್ತಾ ಹೊಸ ಸಂಸತ್ತು ಶಂಕುಸ್ಥಾಪನಾ ಕಾರ್ಯಕ್ರಮ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada