ಕಾಂಗ್ರೆಸ್‌ನ ಈ ಗ್ಯಾರಂಟಿ ಸೂತ್ರಗಳು ದೇಶವನ್ನು ದಿವಾಳಿಯೆಡೆಗೆ ತಳ್ಳಬಹುದು: ಪ್ರಧಾನಿ ಮೋದಿ
ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹೆಣೆದಿದ್ದ ಗ್ಯಾರಂಟಿ ಸೂತ್ರಗಳು ದೇಶವನ್ನು ದಿವಾಳಿಯೆಡೆಗೆ ತಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹೆಣೆದಿದ್ದ ಗ್ಯಾರಂಟಿ ಸೂತ್ರಗಳು ದೇಶವನ್ನು ದಿವಾಳಿಯೆಡೆಗೆ ತಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಎಚ್ಚರಿಕೆ ನೀಡಿದ್ದಾರೆ. ಇದೇ ಸೂತ್ರಗಳು ಬೇರೆ ಎಲ್ಲಾ ಕಡೆ ಇದೇ ಸೂತ್ರವನ್ನು ಬಳಕೆ ಮಾಡಿದ್ದಲ್ಲಿ, ದೇಶವು ದಿವಾಳಿಯಾಗಲಿದೆ ಎಂದಿದ್ದಾರೆ. ಬುಧವಾರ ರಾಜಸ್ಥಾನದ ಅಜ್ಮೇರ್ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ರಾಜ್ಯ ಚುನಾವಣೆಗಳಿಗಾಗಿ ಗ್ಯಾರಂಟಿ ಸೂತ್ರಗಳನ್ನು ಸೃಷ್ಟಿಸಿದೆ. ಆದರೆ ಅವರು ತಾವು ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುತ್ತಾರಾ? ಕಲ್ಯಾಣಕ್ಕಾಗಿ ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂಬುದು ಜನ ಪ್ರಶ್ನೆಯಾಗಿದೆ.
ಚುನಾವಣೆಗೆ ಕೇವಲ ಐದು ತಿಂಗಳಿರುವಾಗ, ಅಶೋಕ್ ಗೆಹ್ಲೋಟ್ ಆಡಳಿತವು ಉಚಿತ ವಿದ್ಯುತ್ ಮತ್ತು ಅಗ್ಗದ ಅಡುಗೆ ಅನಿಲ ಸೇರಿದಂತೆ ಕೆಲವು ಕಲ್ಯಾಣ ಯೋಜನೆಗಳನ್ನು ಪರಿಚಯಿಸಿದೆ. ಬಡವರನ್ನು ವಂಚಿತರನ್ನಾಗಿ ಮಾಡುವುದು ಕಾಂಗ್ರೆಸ್‌ನ ನೀತಿಯಾಗಿದೆ ಎಂದು ಆರೋಪಿಸಿದ ಪ್ರಧಾನಿ, ರಾಜಸ್ಥಾನದ ಜನರು ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದಿದ್ದಾರೆ.
ಮತ್ತಷ್ಟು ಓದಿ: GDP Growth: ಜಿಡಿಪಿ ಬೆಳವಣಿಗೆ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ; ಜಾಗತಿಕ ಸವಾಲುಗಳ ನಡುವೆ ಭಾರತದ ಆರ್ಥಿಕತೆ ಸ್ಥಿರ
50 ವರ್ಷಗಳ ಹಿಂದೆ ಕಾಂಗ್ರೆಸ್ ದೇಶದಲ್ಲಿ ಬಡತನ ತೊಡೆದುಹಾಕುತ್ತದೆ ಎಂದು ಭರವಸೆ ನೀಡಿತ್ತು. ಆದರೆ ಬಡವರ ದಾರಿ ತಪ್ಪಿಸುವುದು ಮತ್ತು ಅವರನ್ನು ವಂಚಿತರನ್ನಾಗಿ ಮಾಡುವುದು ಕಾಂಗ್ರೆಸ್‌ನ ನೀತಿಯಾಗಿದೆ. ಇದರಿಂದ 2014 ಕ್ಕೂ ಮುನ್ನ ಭ್ರಷ್ಟಾಚಾರದ ವಿರುದ್ಧ ಜನರು ಬೀದಿಗಿಳಿದಿದ್ದರು. ಪ್ರಮುಖ ನಗರಗಳಲ್ಲಿ ಭಯೋತ್ಪಾದಕ ದಾಳಿಗಳು ನಡೆದಿದ್ದರೂ ಕಾಂಗ್ರೆಸ್ ರಿಮೋಟ್ ಕಂಟ್ರೋಲ್ ಮೂಲಕ ಸರ್ಕಾರವನ್ನು ನಡೆಸುತ್ತಿತ್ತು.
ಕಾಂಗ್ರೆಸ್ ದೇಶದ ರಕ್ತವನ್ನು ಹೀರುವ ಮತ್ತು ಅಭಿವೃದ್ಧಿಗೆ ಅಡ್ಡಿಪಡಿಸುವ ಭ್ರಷ್ಟ ವ್ಯವಸ್ಥೆಯನ್ನು ಸೃಷ್ಟಿಸಿದೆ ಎಂದು ವಾಗ್ದಾಳಿ ನಡೆಸಿದರು. ಈಗ ದೇಶದಲ್ಲಿ ಬಿಜೆಪಿ ಸರ್ಕಾರದಿಂದಾಗಿ ಜಗತ್ತು ಭಾರತದ ಬಗ್ಗೆ ಮಾತನಾಡುತ್ತಿದೆ. ಕಳೆದ 9 ವರ್ಷಗಳಲ್ಲಿ ತಮ್ಮ ಸರ್ಕಾರ ಜನರ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ಸಮರ್ಪಿತವಾಗಿದೆ. ಬಡತನವನ್ನು ಅಂತ್ಯಗೊಳಿಸಲು ಭಾರತ ಹತ್ತಿರದಲ್ಲಿದೆ ಎಂದರು.