Kannur Train Fire: ಧಗೆ ಧಗನೆ ಹೊತ್ತಿ ಉರಿದ ಆಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ ರೈಲು
ಕೇರಳದ ಕಣ್ಣೂರು ರೈಲ್ವೆ ನಿಲ್ದಾಣದಲ್ಲಿ ಭಾರಿ ಅನಾಹುತ ಸಂಭವಿಸಿದೆ, ಆಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಕೇರಳದ ಕಣ್ಣೂರು ರೈಲ್ವೆ ನಿಲ್ದಾಣದಲ್ಲಿ ಭಾರಿ ಅನಾಹುತ ಸಂಭವಿಸಿದೆ, ಆಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಡರಾತ್ರಿ 1.25ಕ್ಕೆ ಈ ಅವಘಡ ಸಂಭವಿಸಿದೆ, ಅಪಘಾತ ಸಂಭವಿಸಿದಾಗ ರೈಲು ನಿಲ್ದಾಣದ ಮೂರನೇ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿತ್ತು. ಮಾಹಿತಿ ಪಡೆದ ಅಗ್ನಿಶಾಮಕ ದಳದ ವಾಹನಗಳು ಕೂಡಲೇ ಸ್ಥಳಕ್ಕೆ ತೆರಳಿದವು. , ಮೂರು ಅಗ್ನಿಶಾಮಕ ದಳದ ತಂಡಗಳು ಬೆಂಕಿ ನಂದಿಸಲು ಗಂಟೆಗಳ ಕಾಲ ಪ್ರಯತ್ನಿಸಿದರೂ ಕೋಚ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಸ್ವಲ್ಪ ಸಮಯದ ನಂತರ ಬೆಂಕಿ ಹತೋಟಿಗೆ ತರಲಾಯಿತು.
ಆದರೆ, ಈ ಘಟನೆಯಿಂದ ಭಾರೀ ಅಹಿತಕರ ಘಟನೆ ತಪ್ಪಿದೆ. ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಘಟನೆಯ ಕುರಿತು ರೈಲ್ವೇ ಇಲಾಖೆ ತನಿಖೆಗೆ ಆದೇಶಿಸಿದ್ದು, ಬೆಂಕಿಗೆ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ.
ರೈಲಿನ ಇತರ ಭಾಗಗಳಿಗೆ ಬೆಂಕಿ ಹರಡುವುದನ್ನು ತಡೆಯಲು, ಅಧಿಕಾರಿಗಳು ಇತರ ಬೋಗಿಗಳನ್ನು ಪ್ರತ್ಯೇಕಿಸಲು ನಿರ್ಧರಿಸಿದರು. ಈ ಕ್ರಮದಿಂದ ಇಡೀ ರೈಲು ಬೆಂಕಿಗೆ ಆಹುತಿಯಾಗಿಲ್ಲ. ರೈಲು ಬೆಳಗ್ಗೆ 5.10ಕ್ಕೆ ಹೊರಡಬೇಕಿತ್ತು.
ಮತ್ತಷ್ಟು ಓದಿ: BMTC ಬಸ್ನಲ್ಲಿ ಅಗ್ನಿ ದುರಂತ, ಮಲಗಿದ್ದ ಕಂಡಕ್ಟರ್ ಸಜೀವ ದಹನ, ಡ್ರೈವರ್ ಪಾರು
ಅದೇ ಸಮಯದಲ್ಲಿ, ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಘಟನೆಯ ಮೊದಲು ಅಪರಿಚಿತ ವ್ಯಕ್ತಿಯೊಬ್ಬರು ಕ್ಯಾನ್‌ನೊಂದಿಗೆ ರೈಲಿಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಆದರೆ, ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ.
केरल: कन्नूर रेलवे स्टेशन पर अलप्पुझा-कन्नूर एक्जीक्यूटिव एक्सप्रेस में देर रात आग लग गई। आग पर काबू पा लिया गया है। किसी तरह की जनहानि की सूचना नहीं है। रेलवे ने घटना की जांच के आदेश दे दिए हैं। जांच जारी है। pic.twitter.com/gxLWeQlwy6
— ANI_HindiNews (@AHindinews) June 1, 2023
ಮಹಾರಾಷ್ಟ್ರದ ರತ್ನಗಿರಿ ರೈಲು ನಿಲ್ದಾಣದಿಂದ ಅದೇ ರೈಲಿನಲ್ಲಿ ಶಾರುಖ್ ಸೈಫಿ ಎಂಬ ವ್ಯಕ್ತಿ ಸಹ-ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ಎರಡು ತಿಂಗಳ ನಂತರ ಅಲಪ್ಪುಳ-ಕಣ್ಣೂರು ಎಕ್ಸಿಕ್ಯುಟಿವ್ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:57 am, Thu, 1 June 23