ಹಿಮಾಚಲ ಕೈ ಭಿನ್ನಮತ ಸುಖಾಂತ್ಯ: ಸುಖ್ವಿಂದರ್ ಸಿಂಗ್ ಸಿಎಂ, ಮುಕೇಶ್ ಅಗ್ನಿಹೋತ್ರಿಗೆ ಉಪಮುಖ್ಯಮಂತ್ರಿ ಸ್ಥಾನ
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಹೈಡ್ರಾಮಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಸಿಎಂ ಅಭ್ಯರ್ಥಿಯನ್ನು ಘೋಷಿಸಿದೆ.
ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ (Himachal Pradesh Election 2022) 40 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸರಳ ಬಹುಮತ ಪಡೆದುಕೊಂಡಿದೆ. ಆದ್ರೆ, ಸಿಎಂ ಆಯ್ಕೆ ವಿಚಾರದಲ್ಲಿ ದೊಡ್ಡ ಹೈಡ್ರಾಮವೇ ನಡೆದಿದೆ. ಇದರ ಮಧ್ಯೆ ಇದೀಗ ಕಾಂಗ್ರೆಸ್ (Congress) ಹೈಕಮಾಂಡ್, ಅಂತಿಮವಾಗಿ ಸಿಎಂ ಹುದ್ದೆಗೆ ಸುಖ್ವಿಂದರ್ ಸುಖು (Sukhwinder Singh Sukhu) ಹೆಸರು ಘೋಷಿಸಿದೆ. ಅದರಂತೆಯೇ ಇಂದು(ಡಿ.10) ಶಿಮ್ಲಾದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಸುಖ್ವಿಂದರ್ ಅವರನ್ನೇ ಆಯ್ಕೆ ಮಾಡಲಾಯ್ತು. ಇನ್ನು ಉಪಮುಖ್ಯಮಂತ್ರಿ ಹುದ್ದಗೆ ಮಾಜಿ ಸಿಎಂ, ದಿವಂಗತ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಅವರ ಆಪ್ತ ಮುಖೇಶ್ ಅಗ್ನಿಹೋತ್ರಿ ಅವರನ್ನ ಆಯ್ಕೆ ಮಾಡಲಾಗಿದೆ.
ಶಿಮ್ಲಾದಲ್ಲಿ ನಡೆದ ಸಭೆಯಲ್ಲಿ ಹಿಮಾಚಲ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಶುಕ್ಲಾ, ಸುಖ್ವಿಂದರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದ್ದು, ಮುಖೇಶ್ ಅಗ್ನಿಹೋತ್ರಿ ಅವರನ್ನು ಡೆಪ್ಯೂಟಿ ಸಿಎಂ ಆಗಿ ಅಂತಿಮಗೊಳಿಸಲಾಗಿದ್ದು, ನಾಳಯೇ (ಡಿ.11) ಬೆಳಗ್ಗೆ 11ಕ್ಕೆ ಸುಖ್ವಿಂದರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದರು. ಅಲ್ಲದೇ ನಿನ್ನೆ(ಡಿಸೆಂಬರ್ 09) ನಡೆದ ಕಾಂಗ್ರೆಸ್ ಸಭೆಗೂ ಮುನ್ನ ಪ್ರತಿಭಾ ಸಿಂಗ್ ಮಾಧ್ಯಮಗಳ ಮೂಲಕ ತಮ್ಮ ಸಿಎಂ ಬೇಡಿಕೆಯನ್ನು ಮುಂದಿಟ್ಟಿದ್ದರು. ಆದ್ರೆ, ಇದೀಗ ಸಿಎಂ ಹುದ್ದೆಗೆ ಸುಖ್ವಿಂದರ್ ಸಿಂಗ್ ಸುಖು ಹೆಸರನ್ನು ಅಂತಿಮಗೊಳಿಸಲಾಗಿದೆ. ಇನ್ನು ಪ್ರತಿಭಾ ಸಿಂಗ್ ಅವರನ್ನು ಸಮಾಧಾನಪಡಿಸಲು ಮುಖೇಶ್ ಅಗ್ನಿಹೋತ್ರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ.
Congress leader Sukhwinder Singh Sukhu to be CM of Himachal Pradesh and Mukesh Agnihotri to be Deputy CM. Oath ceremony will take place tomorrow at 11 am: Chhattisgarh CM Bhupesh Baghel pic.twitter.com/k5esMKURZB
— ANI (@ANI) December 10, 2022
ಹಮೀರ್‌ಪುರ ಜಿಲ್ಲೆಯ ನಾದೌನ್‌ನಿಂದ ಮೂರನೇ ಬಾರಿಗೆ ಶಾಸಕರಾಗಿರುವ ಸುಖ್ವಿಂದರ್ ಸಿಂಗ್ ಸುಖು ಅವರು ಕಾಂಗ್ರೆಸ್ ವಿಂಗ್ ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ನಿಂದ ಶ್ರೇಯಾಂಕಗಳ ಮೂಲಕ ಬಂದವರಾಗಿದ್ದಾರೆ.
ಸಮಾಧಾನಪಡಿಸಲು ಪುತ್ರನಿಗೆ ಸಚಿವ ಸ್ಥಾನ
ಪ್ರಬಲ ಆಕಾಂಕ್ಷಿಯಾಗಿದ್ದ ಪ್ರತಿಭಾ ಸಿಂಗ್ ಅವರಿಗೆ ಕೊನೆಗೂ ಸಿಎಂ ಕುರ್ಚಿ ಒಲಿಯಲಿಲ್ಲ. ಹೈಕಮಾಂಡ್ ಸುಖ್ವಿಂದರ್ ಸಿಂಗ್ ಸುಖು ಮಣೆ ಹಾಕಿದೆ. ಇದೀಗ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಪ್ರತಿಭಾ ಸಿಂಗ್ ಅವರನ್ನು ಸಮಾಧಾನಪಡಿಸಲು ಪುತ್ರ ವಿಕ್ರಮಾದಿತ್ಯನಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲು ಹೈಕಮಾಂಡ್ ತೀರ್ಮಾನಿಸಿದೆ.
ಇದನ್ನೂ ಓದಿ: ಸಿಎಂ ಆಯ್ಕೆ ಕಗ್ಗಂಟ್ಟು: ಹಿಮಾಚಲ ಪ್ರದೇಶ ಕಾಂಗ್ರೆಸ್ ಪಾಳಯದಲ್ಲಿ ಮಹತ್ವದ ಬೆಳವಣಿಗೆ
ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆಯಾರುವ ಪ್ರತಿಭಾ ಸಿಂಗ್ ಚುನಾವಣೆ ಸಂದರ್ಭದಲ್ಲಿ ರಾಜ್ಯಾದ್ಯಂತ ಸುತ್ತಾಡಿ ಬಿರುಸಿನ ಪ್ರಚಾರ ಮಾಡಿದ್ದರು. ಸಂಸದೆಯಾಗಿರುವ ಪ್ರತಿಭಾ ಸಿಂಗ್ ಅವರು ರಾಜಮನೆತದವರು ಕೂಡ ಹೌದು. ಈ ಹಿನ್ನಲೆಯಲ್ಲಿ ಪ್ರತಿಭಾ ಸಿಂಗ್ ಅವರಿಗೆ ಸಿಎಂ ಪಟ್ಟ ಒಲಿಯಲಿದೆ ಎನ್ನುವ ಮಾತುಗಳು ಜೋರಾಗಿ ಕೇಳಿಬಂದಿದ್ದವು. ಆದ್ರೆ, ಕೊನೆಗಳಿಗೆಯಲ್ಲಿ ಪ್ರತಿಭಾ ಸಿಂಗ್ ಅವರಿಗೆ ಸಿಎಂ ಸ್ಥಾನದ ಕೈತಪ್ಪಿದೆ.
ಭುಗಿಲೆದ್ದ ಅಸಮಾಧಾನ
ಅತ್ತ ಕಾಂಗ್ರೆಸ್ ಹೈಕಮಾಂಡ್ ಸಿಎಂ ಹುದ್ದಗೆ ಸುಖ್ವಿಂದರ್ ಸುಖು ಹೆಸರು ಪ್ರಕಟಿಸುತ್ತಿದ್ದಂತೆಯೇ ಇತ್ತ ಹಿಮಾಚಲ ಪ್ರದೇಶದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಪ್ರತಿಭಾ ಸಿಂಗ್‌ಗೆ ಸಿಎಂ ಹುದ್ದೆ ಕೈತಪ್ಪಿದ್ದಕ್ಕೆ ಅವರ ಬೆಂಬಲಿಗರು ಶಿಮ್ಲಾದಲ್ಲಿ ಪ್ರತಿಭಟನೆಗಿಳಿದಿದ್ದು, ಕಾಂಗ್ರೆಸ್ ನಾಯಕರಿದ್ದ ಹೋಟೆಲ್‌ಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲದೇ ಪ್ರತಿಭಾ ಸಿಂಗ್‌ಗೆ ಸಿಎಂ ಹುದ್ದೆ ನೀಡುವಂತೆ ಬೆಂಬಲಿಗರು ಒತ್ತಾಯಿಸಿದ್ದಾರೆ.
#WATCH | Supporters of Himachal Pradesh Congress president Pratibha Virbhadra Singh raise slogans in Shimla pic.twitter.com/zfeh5vODwp
— ANI (@ANI) December 10, 2022
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 5:17 pm, Sat, 10 December 22