AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸ್ಸಾಂ ಸಿಎಂ ಹಿಮಂತ ಶರ್ಮಾ ಅವರ ‘ಸರ್ದಾರ್ ಆಫ್ ಡುಪ್ಲಿಕೇಟ್’ ಹೇಳಿಕೆಗೆ ಕಾಂಗ್ರೆಸ್ ತರಾಟೆ

ಹಿಮಂತ ಬಿಸ್ವಾ ಶರ್ಮಾ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ವಕ್ತಾರ ಅಪೂರ್ಬಾ ಭಟ್ಟಾಚಾರ್ಯ, ಇಂತಹ ಮಾತುಗಳು ಅಸ್ಸಾಂ ಮುಖ್ಯಮಂತ್ರಿಗೆ ತಕ್ಕುದಲ್ಲ. ರಾಹುಲ್ ಜೀ ಗಾಂಧಿ ಉಪನಾಮಕ್ಕೆ ಅರ್ಹರೋ ಇಲ್ಲವೋ ಎಂದು ಪ್ರತಿಕ್ರಿಯಿಸಲು ಅವರು ಯಾರು? ಇದು ರಾಜ್ಯದ ಸಮಸ್ಯೆಗಳಿಗೆ ಯಾವುದೇ ರೀತಿಯಲ್ಲಿ ಸಂಬಂಧಿಸಿದೆ? ಒಬ್ಬರ ಉಪನಾಮವು ರಾಜ್ಯಕ್ಕೆ ಹೇಗೆ ಸಮಸ್ಯೆಯಾಗುತ್ತದೆ? ರಾಜ್ಯದಲ್ಲಿ ನಾನಾ ಸಮಸ್ಯೆಗಳಿದ್ದು, ಮುಖ್ಯಮಂತ್ರಿಗಳು ಅವುಗಳತ್ತ ಗಮನ ಹರಿಸಬೇಕು ಎಂದಿದ್ದಾರೆ.

ಅಸ್ಸಾಂ ಸಿಎಂ ಹಿಮಂತ ಶರ್ಮಾ ಅವರ ‘ಸರ್ದಾರ್ ಆಫ್ ಡುಪ್ಲಿಕೇಟ್’ ಹೇಳಿಕೆಗೆ ಕಾಂಗ್ರೆಸ್ ತರಾಟೆ
ರಶ್ಮಿ ಕಲ್ಲಕಟ್ಟ
|

Updated on: Sep 11, 2023 | 1:53 PM

Share

ದೆಹಲಿ ಸೆಪ್ಟೆಂಬರ್ 11: ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಮತ್ತು ಅವರ ಕುಟುಂಬ ಸದಸ್ಯರು ‘ಗಾಂಧಿ’ ಉಪನಾಮವನ್ನು ಬಳಸುತ್ತಿರುವ ಕಾನೂನುಬದ್ಧತೆಯನ್ನು ಪ್ರಶ್ನಿಸಿದ್ದಕ್ಕಾಗಿ ಅಸ್ಸಾಂ (Assam) ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ಹಿಮಂತ ಶರ್ಮಾ ಅವರು ಗಾಂಧಿ ಕುಟುಂಬದ ಸದಸ್ಯರನ್ನು ಸರ್ದಾರ್ ಆಫ್ ಡುಪ್ಲಿಕೇಟ್ಸ್ (ನಕಲಿಗಳ ನಾಯಕರು) ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ (Congress), ಅಸ್ಸಾಂನಲ್ಲಿ ಬಗೆಹರಿಯದ ಹಲವಾರು ಸಮಸ್ಯೆಗಳಿರುವಾಗ ನಿಮಗೆ ಸರ್ ನೇಮ್ ಬಗ್ಗೆ ಚಿಂತೆ ಯಾಕೆ? ಮೊದಲು ನಿಮ್ಮ ರಾಜ್ಯದ ಸಮಸ್ಯೆ ಪರಿಹರಿಸುವುದಕ್ಕೆ ಗಮನ ಕೊಡಿ ಎಂದು ಕಾಂಗ್ರೆಸ್ ಹೇಳಿದೆ.

ಬಿಜೆಪಿಯ ಮಹಿಳಾ ಮೋರ್ಚಾದ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾರೋಪ ದಿನವನ್ನು ಉದ್ದೇಶಿಸಿ ಮಾತನಾಡಿದ ಶರ್ಮಾ, “ನೀವು ‘ನಕಲಿಗಳ ಸರದಾರ’ ಎಂದು ನಾನು ಅವರಿಗೆ (ಗಾಂಧಿಗಳಿಗೆ) ಹೇಳಿದ್ದೇನೆ. (ಮಹಾತ್ಮ) ಗಾಂಧೀಜಿ ನಮಗೆ ಸ್ವಾತಂತ್ರ್ಯ ನೀಡಿದರು. ಅವರು ಉಪನಾಮವನ್ನು ಪಡೆದರು. ಎಲ್ಲರೂ ನಕಲಿ ಗಾಂಧಿಗಳು. “ಇಂದಿರಾ, ರಾಹುಲ್, ರಾಜೀವ್ ಮತ್ತು ಪ್ರಿಯಾಂಕಾ ಯಾವ ಸೂತ್ರದಿಂದ ಗಾಂಧಿಯಾದರು ಎಂದು ನಾನು ಬಹಳ ಕಾಲ ಸಂಶೋಧನೆ ನಡೆಸಿದೆ. ಆದರೆ ನನಗೆ ಅದನ್ನು ಕಂಡುಹಿಡಿಯಲಾಗಲಿಲ್ಲ. ಭಾರತದ ಮೊದಲ ಹಗರಣ ಅವರ ಉಪನಾಮದಿಂದ ಆಗಿತ್ತು ಎಂದು ಶರ್ಮಾ ಆರೋಪಿಸಿದ್ದಾರೆ.

ಕೆಲವು ಡಕಾಯಿತರು ಗಾಂಧಿ ಉಪನಾಮವನ್ನು ಬಳಸಿದರೆ, ಅದು ಅವರನ್ನು ಋಷಿಯನ್ನಾಗಿ ಮಾಡುವುದಿಲ್ಲ. “ರಾಹುಲ್ ಗಾಂಧಿ ಜೀ ಅವರಿಗೆ ನನ್ನ ವಿನಮ್ರ ವಿನಂತಿ, ದಯವಿಟ್ಟು ನಿಮ್ಮ ನಕಲಿ ಉಪನಾಮವನ್ನು ಬಿಟ್ಟುಬಿಡಿ, ಏಕೆಂದರೆ ಅದು ಮೂಲವಲ್ಲ” ಎಂದು ಶರ್ಮಾ ಹೇಳಿದ್ದರು. ಹಿಮಂತ ಬಿಸ್ವ ಶರ್ಮಾ 2015 ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ವಕ್ತಾರ ಅಪೂರ್ಬಾ ಭಟ್ಟಾಚಾರ್ಯ, ಇಂತಹ ಮಾತುಗಳು ಮುಖ್ಯಮಂತ್ರಿಗೆ ತಕ್ಕುದಲ್ಲ. ರಾಹುಲ್ ಜೀ ಗಾಂಧಿ ಉಪನಾಮಕ್ಕೆ ಅರ್ಹರೋ ಇಲ್ಲವೋ ಎಂದು ಪ್ರತಿಕ್ರಿಯಿಸಲು ಅವರು ಯಾರು? ಇದು ರಾಜ್ಯದ ಸಮಸ್ಯೆಗಳಿಗೆ ಯಾವುದೇ ರೀತಿಯಲ್ಲಿ ಸಂಬಂಧಿಸಿದೆ? ಒಬ್ಬರ ಉಪನಾಮವು ರಾಜ್ಯಕ್ಕೆ ಹೇಗೆ ಸಮಸ್ಯೆಯಾಗುತ್ತದೆ? ರಾಜ್ಯದಲ್ಲಿ ನಾನಾ ಸಮಸ್ಯೆಗಳಿದ್ದು, ಮುಖ್ಯಮಂತ್ರಿಗಳು ಅವುಗಳತ್ತ ಗಮನ ಹರಿಸಬೇಕು ಎಂದಿದ್ದಾರೆ.

ಶರ್ಮಾ, ಸಿಎಂ ಜೊತೆಗೆ ಗೃಹ ಖಾತೆಯನ್ನೂ ಹೊಂದಿದ್ದಾರೆ. ಪೊಲೀಸರು ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಬಗ್ಗೆ ಮಾತನಾಡುತ್ತಿರುವಾಗ, ಅದರ ಎಸ್ಪಿ ಮಟ್ಟದ ಅಧಿಕಾರಿಯನ್ನು ದುಷ್ಕೃತ್ಯಗಳಿಗಾಗಿ ಬಂಧಿಸಲಾಗುತ್ತಿದೆ. ಮುಖ್ಯಮಂತ್ರಿಗಳು ಮೊದಲು ರಾಜ್ಯದ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸಬೇಕು. ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರಗಳಲ್ಲಿ ತೊಡಗಬಾರದು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಆಪಾದಿತ ಸುಲಿಗೆ ಪ್ರಕರಣದ ತನಿಖೆ ನಡೆಸುತ್ತಿರುವಾಗ, ಅಸ್ಸಾಂ ಸಿಐಡಿ ಇತ್ತೀಚೆಗೆ ಬಜಾಲಿ ಜಿಲ್ಲೆಯಲ್ಲಿ ಎಸ್ಪಿ ಮತ್ತು ಡಿಎಸ್ಪಿ ಮಟ್ಟದ ಪೊಲೀಸ್ ಅಧಿಕಾರಿಗಳು ಸೇರಿದಂತೆ 10 ಜನರನ್ನು ಬಂಧಿಸಿದೆ.

ಶರ್ಮಾ ಅವರ ಹೇಳಿಕೆಯ ವಿಡಿಯೊ ಕ್ಲಿಪ್ ಅನ್ನು ಹಂಚಿಕೊಂಡ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು “ಇಲ್ಲಿ, ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು  ಗಾಂಧಿ ಉಪನಾಮವನ್ನು ಹೊಂದಲು ವರುಣ್ ಗಾಂಧಿ ಅವರ ಹಕ್ಕನ್ನು ಪ್ರಶ್ನಿಸುತ್ತಿದ್ದಾರೆ ಎಂದು ಕಿಚಾಯಿಸಿದ್ದಾರೆ.

ಇದನ್ನೂ ಓದಿ: ‘ಜವಾನ್’ ಪೋಸ್ಟರ್​ನಿಂದ ರಸ್ತೆ ಸುರಕ್ಷತೆ ಜಾಗೃತಿ; ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ  

ಮತ್ತೊಬ್ಬ ಕಾಂಗ್ರೆಸ್ ವಕ್ತಾರ ಸುಪ್ರಿಯಾ ಶ್ರಿನೇಟ್ ಕೂಡ ಇದೇ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ನಿಮ್ಮ ತಂದೆ ಕೈಲಾಶ್ ನಾಥ್ ಶರ್ಮಾ ಜಿ ಅವರಿಂದ ನಿಮ್ಮ ಹೆಸರನ್ನು ಪಡೆದುಕೊಂಡಿದ್ದೀರಿ, ಅಲ್ಲವೇ? ಅದೇ ರೀತಿ, ರಾಜೀವ್ ಜಿ ಅವರ ತಂದೆ ಫಿರೋಜ್ ಗಾಂಧಿಯವರೊಂದಿಗೆ ಸಂಬಂಧ ಹೊಂದಿದ್ದರು. ಅವರ ಮೊಮ್ಮಗನ ವಿಷಯದಲ್ಲೂ ಅದೇ ಸಂಭವಿಸಿತು ಎಂದಿದ್ದಾರೆ.

ಏತನ್ಮಧ್ಯೆ, ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ‘ಇಂಡಿಯಾ’ ಪದವನ್ನು ಬಳಸಿದ್ದಕ್ಕಾಗಿ ಶರ್ಮಾ ಕಾಂಗ್ರೆಸ್ ಅನ್ನು ಟೀಕಿಸಿದ್ದು, ಹಳೆಯ ಪಕ್ಷವು ತನ್ನ ರಾಜಕೀಯ ಅನುಕೂಲಕ್ಕಾಗಿ ಇಂಡಿಯಾ ಮತ್ತು ಭಾರತವನ್ನು ಬಳಸುತ್ತಿದೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ