Natwar Singh: ಕೇಂದ್ರದ ಮಾಜಿ ವಿದೇಶಾಂಗ ಸಚಿವ ಕೆ. ನಟವರ್ ಸಿಂಗ್ ನಿಧನ
ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ 2004-05ರ ಅವಧಿಯಲ್ಲಿ ನಟವರ್ ಸಿಂಗ್ ಭಾರತದ ವಿದೇಶಾಂಗ ಸಚಿವರಾಗಿದ್ದರು. ಅವರು ತಮ್ಮ ರಾಜಕೀಯ ವೃತ್ತಿಜೀವನಕ್ಕೆ ರಾಜತಾಂತ್ರಿಕತೆಯ ಅನುಭವವನ್ನು ತಂದರು. ರಾಷ್ಟ್ರಕ್ಕೆ ಅವರ ಸೇವೆಗಾಗಿ 1984ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು.
ನವದೆಹಲಿ: ಮಾಜಿ ವಿದೇಶಾಂಗ ಸಚಿವ ಕೆ. ನಟವರ್ ಸಿಂಗ್ ಅವರು ದೀರ್ಘಕಾಲದ ಅನಾರೋಗ್ಯದ ನಂತರ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 93 ವರ್ಷದ ನಟವರ್ ಸಿಂಗ್ ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅಲ್ಲಿ ಅವರು ಕಳೆದ ಎರಡು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.
“ನಟವರ್ ಸಿಂಗ್ ಅವರ ಮಗ ಆಸ್ಪತ್ರೆಯಲ್ಲಿದ್ದಾರೆ. ಅವರ ಅನೇಕ ಕುಟುಂಬ ಸದಸ್ಯರು ದೆಹಲಿಯಲ್ಲಿ ಅಂತಿಮ ವಿಧಿವಿಧಾನಗಳಿಗಾಗಿ ದೆಹಲಿಗೆ ಬರುತ್ತಿದ್ದಾರೆ. ಸ್ವಲ್ಪ ಸಮಯದಿಂದ ಅವರ ಆರೋಗ್ಯ ಹದಗೆಟ್ಟಿತ್ತು” ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರು ಶನಿವಾರ ತಡರಾತ್ರಿ ನಿಧನರಾದರು ಎಂದು ಮೂಲಗಳು ತಿಳಿಸಿವೆ.
Pained by the passing away of Shri Natwar Singh Ji. He made rich contributions to the world of diplomacy and foreign policy. He was also known for his intellect as well as prolific writing. My thoughts are with his family and admirers in this hour of grief. Om Shanti. pic.twitter.com/7eIR1NHXgJ
— Narendra Modi (@narendramodi) August 11, 2024
ಇದನ್ನೂ ಓದಿ: Wayanad landslide: ವಯನಾಡಿನಲ್ಲಿ ಪ್ರಕೃತಿ ತನ್ನ ಉಗ್ರ ಸ್ವರೂಪವನ್ನು ತೋರಿಸಿದೆ, ಇಡೀ ದೇಶವು ಸಂತ್ರಸ್ತರೊಂದಿಗಿದೆ: ಮೋದಿ
ನಟವರ್ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ನಟವರ್ ಸಿಂಗ್ ಅವರ ನಿಧನದಿಂದ ಬಹಳ ನೋವಾಗಿದೆ. ಅವರು ರಾಜತಾಂತ್ರಿಕತೆ ಮತ್ತು ವಿದೇಶಾಂಗ ನೀತಿಯ ಬಹಳ ಕೊಡುಗೆಗಳನ್ನು ನೀಡಿದ್ದಾರೆ. ಅವರು ತಮ್ಮ ಬುದ್ಧಿವಂತಿಕೆ ಮತ್ತು ಸಮೃದ್ಧ ಬರವಣಿಗೆಗೆ ಹೆಸರುವಾಸಿಯಾಗಿದ್ದರು ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
पूर्व विदेश मंत्री नटवर सिंह जी के निधन का समाचार दुखद है ।
ईश्वर उनके परिजनों को यह क्षति सहने की शक्ति दे और दिवंगत आत्मा को सदगति प्रदान करें। pic.twitter.com/WAP3HQJlgF
— Randeep Singh Surjewala (@rssurjewala) August 10, 2024
ಮಾಜಿ ಕಾಂಗ್ರೆಸ್ ಸಂಸದ ನಟವರ್ ಸಿಂಗ್, ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-1 ಸರ್ಕಾರದಲ್ಲಿ 2004-05ರ ಅವಧಿಯಲ್ಲಿ ಭಾರತದ ವಿದೇಶಾಂಗ ಸಚಿವರಾಗಿದ್ದರು.
Deeply saddened by the passing away of K Natwar Singh, distinguished diplomat and former External Affairs Minister.
His many contributions include a vital role in the July 2005 India – US nuclear deal. His writings, especially on China, provided valuable insights into our… pic.twitter.com/HsMXzI2WtF
— Dr. S. Jaishankar (@DrSJaishankar) August 11, 2024
ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೂ ಮೊದಲು ಬಿಜೆಪಿಯಿಂದ ಭಾರತದಾದ್ಯಂತ ‘ಹರ್ ಘರ್ ತಿರಂಗ’ ಅಭಿಯಾನ
ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ 1931ರಲ್ಲಿ ಜನಿಸಿದ ನಟವರ್ ಸಿಂಗ್ ಅವರು ಹಿರಿಯ ರಾಜತಾಂತ್ರಿಕರಾಗಿದ್ದರು. ಅವರು ತಮ್ಮ ರಾಜಕೀಯ ಜೀವನಕ್ಕೆ ರಾಜತಾಂತ್ರಿಕತೆಯ ಅನುಭವ ತಂದರು. ಅವರು ‘ದಿ ಲೆಗಸಿ ಆಫ್ ನೆಹರು: ಎ ಮೆಮೋರಿಯಲ್ ಟ್ರಿಬ್ಯೂಟ್’ ಮತ್ತು ‘ಮೈ ಚೀನಾ ಡೈರಿ 1956-88’ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಆತ್ಮಕಥೆಗೆ ‘ಒಂದು ಜೀವನವೇ ಸಾಕಾಗುವುದಿಲ್ಲ’ (ಒನ್ ಲೈಫ್ ಈಸ್ ನಾಟ್ ಎನಫ್) ಎಂದು ಹೆಸರಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ