Jitin Prasada ಕಾಂಗ್ರೆಸ್ ನಾಯಕ, ಅನುಭವಿ ರಾಜಕಾರಣಿ ಜಿತಿನ್ ಪ್ರಸಾದ ಬಿಜೆಪಿಗೆ ಸೇರ್ಪಡೆ

| Updated By: ರಶ್ಮಿ ಕಲ್ಲಕಟ್ಟ

Updated on: Jun 09, 2021 | 1:49 PM

Uttar Pradesh Assembly election 2022: ಪ್ರಸಾದ ಅವರು ಕಾಂಗ್ರೆಸ್ ಪಕ್ಷದೊಂದಿಗೆ 20 ವರ್ಷಗಳ ಒಡನಾಟ  ಹೊಂದಿದ್ದರು ಪಕ್ಷದ ಬಗ್ಗೆ ಹೊಂದಿದ್ದ ಹತಾಶೆ ರಹಸ್ಯವಾಗಿರಲಿಲ್ಲ. ಅವರು "ಜಿ -23" ಅಥವಾ 23 ಕಾಂಗ್ರೆಸ್ ನಾಯಕರ ಗುಂಪಿನ ಭಾಗವಾಗಿದ್ದರು.

Jitin Prasada ಕಾಂಗ್ರೆಸ್ ನಾಯಕ, ಅನುಭವಿ ರಾಜಕಾರಣಿ ಜಿತಿನ್ ಪ್ರಸಾದ ಬಿಜೆಪಿಗೆ ಸೇರ್ಪಡೆ
ಜಿತಿನ್ ಪ್ರಸಾದ
Follow us on

ದೆಹಲಿ:  ಮಾಜಿ ಕೇಂದ್ರ ಸಚಿವ ಜಿತಿನ್ ಪ್ರಸಾದ ಅವರು ಇಂದು ಬಿಜೆಪಿಗೆ ಸೇರಿದ್ದಾರೆ  ಮೂಲಗಳು ಹೇಳಿವೆ. ರಾಹುಲ್ ಗಾಂಧಿ ಅವರ ನಿಕಟವರ್ತಿ ಆಗಿದ್ದ ಜಿತಿನ್  ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪೀಯುಷ್ ಗೋಯಲ್ ಉಪಸ್ಥಿತಿಯಲ್ಲಿ ಬಿಜೆಪಿ ಸೇರಿದ್ದಾರೆ. ಕಳೆದ ವರ್ಷ ಜ್ಯೋತಿರಾದಿತ್ಯ ಸಿಂಧಿಯಾ ತೊರೆದ ನಂತರ ಬಿಜೆಪಿಗೆ ಸೇರುತ್ತಿರುವ ಅನುಭವಿ ನಾಯಕರಾಗಿದ್ದಾರೆ 47 ವರ್ಷದ ಜಿತಿನ್ ಪ್ರಸಾದ. ರಾಹುಲ್ ಗಾಂಧಿಯವರ ಸಹಾಯಕರಾಗಿ ಉನ್ನತ ಮಟ್ಟದಲ್ಲಿದ್ದ ಪ್ರಸಾದ ಅವರು ಅವರು ಕಾಂಗ್ರೆಸ್ ತೊರೆಯುತ್ತಿದ್ದಾರೆ ಎಂಬ ವದಂತಿಗಳನ್ನು 2019 ರಲ್ಲಿ ನಿರಾಕರಿಸಿದ್ದರು.

ಪ್ರಸಾದ ಅವರು ಕಾಂಗ್ರೆಸ್ ಪಕ್ಷದೊಂದಿಗೆ 20 ವರ್ಷಗಳ ಒಡನಾಟ  ಹೊಂದಿದ್ದರು ಪಕ್ಷದ ಬಗ್ಗೆ ಹೊಂದಿದ್ದ ಹತಾಶೆ ರಹಸ್ಯವಾಗಿರಲಿಲ್ಲ. ಅವರು “ಜಿ -23” ಅಥವಾ 23 ಕಾಂಗ್ರೆಸ್ ನಾಯಕರ ಗುಂಪಿನ ಭಾಗವಾಗಿದ್ದರು. ಅವರು ಕಳೆದ ವರ್ಷ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಪತ್ರ ಬರೆದ ಅವರು  ಸುಧಾರಣೆಗಳು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಪೂರ್ಣ ಸಮಯ ನಾಯಕತ್ವಕ್ಕೆ ಕರೆ ನೀಡಿದ್ದರು.


ಆ ಪತ್ರದ ನಂತರ ಕೆಲವೇ “ಭಿನ್ನಮತೀಯರಲ್ಲಿ” ಪ್ರಸಾದ ಕೂಡಾ ಗುರುತಿಸಿಕೊಂಡಿದ್ದರು. ಅವರು ಪಶ್ಚಿಮ  ಬಂಗಾಳದಲ್ಲಿ ಕಾಂಗ್ರೆಸ್ ಅಭಿಯಾನದ ಕಾರ್ಯವನ್ನು ನಿರ್ವಹಿಸಿದ್ದು,  ಅಲ್ಲಿಯೂ ಕಾಂಗ್ರೆಸ್ ವಿಫಲವಾಗಿತ್ತು..

ಭಾರತೀಯ ಸೆಕ್ಯುಲರ್ ಫ್ರಂಟ್‌ನೊಂದಿಗೆ ತಮ್ಮದ ಪಕ್ಷದ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಅವರು ಟೀಕಿಸಿದ್ದರು. ಪಕ್ಷ ಮತ್ತು ಕಾರ್ಯಕರ್ತರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮೈತ್ರಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಮತದಾನದ ವ್ಯಾಪ್ತಿಯ ರಾಜ್ಯಗಳಲ್ಲಿ ಕಾಂಗ್ರೆಸ್ ಭವಿಷ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಕೆಲಸ ಮಾಡುವ ಸಮಯ ಇದೀಗ ಎಂದು  ಪ್ರಸಾದ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ಧೌರಾಹ್ರಾ ಮೂಲದ ಮಾಜಿ ಲೋಕಸಭಾ ಸಂಸದರು ಭಾರತದ ಅತ್ಯಂತ ರಾಜಕೀಯವಾಗಿ ಮಹತ್ವದ ರಾಜ್ಯದ ಕಾಂಗ್ರೆಸ್ಸಿನ ಉನ್ನತ ನಾಯಕರಲ್ಲಿ ಒಬ್ಬರಾಗಿದ್ದಾರೆ ಪ್ರಸಾದ. ಇವರು ಪಕ್ಷ ತೊರೆದು ಬಿಜೆಪಿ  ಸೇರುತ್ತಿರುವುದು ಕಾಂಗ್ರೆಸ್ ಪಾಲಿಗೆ ದೊಡ್ಡ ನಷ್ಟವಾಗಲಿದೆ.

ಪ್ರಸಾದ ಅವರು ಪತ್ರ ಬರೆದ ನಂತರಉತ್ತರಪ್ರದೇಶದ ಕಾಂಗ್ರೆಸ್ ಘಟಕವು ಜಿ -23 ವಿರುದ್ಧ ಕ್ರಮ ಕೈಗೊಳ್ಳಲು ಕರೆ ನೀಡಿತ್ತು. ಗಾಂಧೀ  ಕುಟುಂಬದೊಂದಿಗೆ ಹಲವಾರು ವರ್ಷಗಳಿಂಜ ಪ್ರಸಾದ ಅವರ ಕುಟುಂಬ ನಿಕಟ ಸಂಪರ್ಕದಲ್ಲಿತ್ತು.

ಜಿತಿನ್ ಪ್ರಸಾದ ಅವರ ಅಪ್ಪ ಕಾಂಗ್ರೆಸ್  ಪಕ್ಷದ  ಹಿರಿಯ ನಾಯಕರಾಗಿದ್ದ ಜಿತೇಂದ್ರ ಪ್ರಸಾದ ಅವರು 1999 ರಲ್ಲಿ ಸೋನಿಯಾ ಗಾಂಧಿಯವರ ನಾಯಕತ್ವ ಪ್ರಶ್ನಿಸಿದ್ದರು ಮತ್ತು ಪಕ್ಷದ ಮುಖ್ಯಸ್ಥ ಹುದ್ದೆಗೆ ಅವರ ವಿರುದ್ಧ ಸ್ಪರ್ಧಿಸಿದ್ದರು. ಜಿತೇಂದ್ರ ಪ್ರಸಾದ ಅವರು 2002 ರಲ್ಲಿ ನಿಧನರಾದರು.

ರಾಹುಲ್ ಗಾಂಧಿಯವರ ಆಂತರಿಕ ವಲಯದಲ್ಲಿದ್ದ ಜಿತಿನ್ ಪ್ರಸಾದ ಅವರು ಮನಮೋಹನ್ ಸಿಂಗ್ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದರು.


ಬಿಜೆಪಿ ಸೇರಿದ ನಂತರ ಜಿತಿನ್ ಪ್ರತಿಕ್ರಿಯೆ

ನನಗೆ ಕಾಂಗ್ರೆಸ್ ಜೊತೆ ಮೂರು ತಲೆಮಾರಿನ ಸಂಪರ್ಕವಿದೆ, ಹಾಗಾಗಿ ಸಾಕಷ್ಟು ಚರ್ಚೆಯ ನಂತರ ನಾನು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡೆ. ಕಳೆದ 8-10 ವರ್ಷಗಳಲ್ಲಿ ನಿಜವಾದ ರಾಷ್ಟ್ರೀಯವಾದ ಒಂದು ಪಕ್ಷ ಇದ್ದರೆ ಅದು ಬಿಜೆಪಿ ಎಂದು ನಾನು ಭಾವಿಸಿದ್ದೇನೆ. ಇತರ ಪಕ್ಷಗಳು ಪ್ರಾದೇಶಿಕ ಆದರೆ ಇದು ರಾಷ್ಟ್ರೀಯ ಪಕ್ಷ. ನಮ್ಮ ದೇಶವು ಸಾಗುತ್ತಿರುವ ಪರಿಸ್ಥಿತಿಯನ್ನು ಗಮನಿಸಿದರೆ ಇಂದು ಯಾವುದೇ ರಾಜಕೀಯ ಪಕ್ಷ ಅಥವಾ ರಾಷ್ಟ್ರದ ಹಿತಾಸಕ್ತಿಗಾಗಿ ಒಬ್ಬ ನಾಯಕ ಇದ್ದರೆ, ಅದು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಎಂದು   ಬಿಜೆಪಿಗೆ ಸೇರಿದ ನಂತರ ಜಿತಿನ್ ಪ್ರಸಾದ ಹೇಳಿದ್ದಾರೆ.

ಇದನ್ನೂ ಓದಿ:  Election Commissioner: ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ಅನೂಪ್​ ಚಂದ್ರ ಪಾಂಡೆ ನೇಮಕ

 

Published On - 1:36 pm, Wed, 9 June 21