Election Commissioner: ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ಅನೂಪ್​ ಚಂದ್ರ ಪಾಂಡೆ ನೇಮಕ

Anup Chandra Pandey: ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿದ್ದ ಸುನಿಲ್​ ಅರೋರಾ ಏಪ್ರಿಲ್ 12ರಂದು ನಿವೃತ್ತರಾಗಿದ್ದರು. ಬಳಿಕ ಅವರ ಹುದ್ದೆಗೆ ಆಯುಕ್ತರಾಗಿದ್ದ ಸುಶೀಲ್ ಚಂದ್ರ ಆಯ್ಕೆಯಾಗಿದ್ದರು. ಇಬ್ಬರು ಚುನಾವಣಾ ಆಯುಕ್ತರ ಪೈಕಿ ರಾಜೀವ್ ಕುಮಾರ್ ಒಂದು ಹುದ್ದೆಯನ್ನು ನಿರ್ವಹಿಸುತ್ತಿದ್ದು, ಇನ್ನೋರ್ವ ಆಯುಕ್ತರ ಹುದ್ದೆ ಖಾಲಿ ಉಳಿದಿತ್ತು.

Election Commissioner: ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ಅನೂಪ್​ ಚಂದ್ರ ಪಾಂಡೆ ನೇಮಕ
ಅನೂಪ್​ ಚಂದ್ರ ಪಾಂಡೆ
Follow us
TV9 Web
| Updated By: Skanda

Updated on: Jun 09, 2021 | 7:39 AM

ದೆಹಲಿ: ಉತ್ತರ ಪ್ರದೇಶ ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಅನೂಪ್​ ಚಂದ್ರ ಪಾಂಡೆ ಅವರನ್ನು ನಿನ್ನೆ (ಜೂನ್ 8) ಚುನಾವಣಾ ಆಯೋಗದ ನೂತನ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಉತ್ತರ ಪ್ರದೇಶ ಕೇಡರ್​ನ ನಿವೃತ್ತ ಐಎಎಸ್​ ಅಧಿಕಾರಿಯೂ ಆಗಿರುವ ಅನೂಪ್​ ಚಂದ್ರ ಪಾಂಡೆ ಅವರನ್ನು ಚುನಾವಣಾ ಆಯೋಗದ ಆಯುಕ್ತ ಹುದ್ದೆಗೆ ರಾಷ್ಟ್ರಪತಿಯವರು ನೇಮಕ ಮಾಡಿದ್ದು, ಸುಶೀಲ್​ ಚಂದ್ರ ಅವರು ಮುಖ್ಯ ಆಯುಕ್ತರಾದ ನಂತರ ಖಾಲಿ ಉಳಿದಿದ್ದ ಆಯುಕ್ತ ಜಾಗಕ್ಕೆ ಪಾಂಡೆ ಬಂದಿದ್ದಾರೆ.

ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿದ್ದ ಸುನಿಲ್​ ಅರೋರಾ ಏಪ್ರಿಲ್ 12ರಂದು ನಿವೃತ್ತರಾಗಿದ್ದರು. ಬಳಿಕ ಅವರ ಹುದ್ದೆಗೆ ಆಯುಕ್ತರಾಗಿದ್ದ ಸುಶೀಲ್ ಚಂದ್ರ ಆಯ್ಕೆಯಾಗಿದ್ದರು. ಇಬ್ಬರು ಚುನಾವಣಾ ಆಯುಕ್ತರ ಪೈಕಿ ರಾಜೀವ್ ಕುಮಾರ್ ಒಂದು ಹುದ್ದೆಯನ್ನು ನಿರ್ವಹಿಸುತ್ತಿದ್ದು, ಇನ್ನೋರ್ವ ಆಯುಕ್ತರ ಹುದ್ದೆ ಖಾಲಿ ಉಳಿದಿತ್ತು. ಇದೀಗ ಉತ್ತರ ಪ್ರದೇಶ ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಅನೂಪ್​ ಚಂದ್ರ ಪಾಂಡೆ ಆ ಸ್ಥಾನಕ್ಕೆ ಆಗಮಿಸಿದ್ದಾರೆ.

1984ರ ಬ್ಯಾಚ್​ನ ಐಎಎಸ್ ಅಧಿಕಾರಿಯಾಗಿರುವ ಅನೂಪ್ ಚಂದ್ರ ಪಾಂಡೆ ಅವರನ್ನು ಚುನಾವಣಾ ಆಯೋಗದ ನೂತನ ಆಯುಕ್ತರನ್ನಾಗಿ ನೇಮಕ ಮಾಡುತ್ತಿರುವ ಕುರಿತು ನಿನ್ನೆ ಸೂಚನೆ ಹೊರಡಿಸಲಾಗಿದೆ. ಚುನಾವಣಾ ಆಯುಕ್ತರ ಹುದ್ದೆಯು ಆರು ವರ್ಷಗಳ ಕಾಲಾವಧಿಯದ್ದಾಗಿರಲಿದೆ ಅಥವಾ ಕಾಲಾವಧಿ ಪೂರ್ಣಗೊಳಿಸುವ ಮುನ್ನವೇ ಆಯುಕ್ತರ ವಯಸ್ಸು 65 ವರ್ಷ ದಾಟಿದರೆ ಮತ್ತೆ ಹೊಸಬರ ಆಯ್ಕೆ ಆಗಲಿದೆ.

ಅನೂಪ್​ ಚಂದ್ರ ಪಾಂಡೆ ಯಾರು? ಉತ್ತರ ಪ್ರದೇಶ ಕೇಡರ್​ನ 1984ನೇ ಬ್ಯಾಚ್​ ಐಎಎಸ್ ಅಧಿಕಾರಿಯಾಗಿರುವ ಅನೂಪ್​ ಚಂದ್ರ ಪಾಂಡೆ ಈ ಹಿಂದೆ ಭಾರತೀಯ ರಕ್ಷಣಾ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಹಾಗೂ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಾಚೀನ ಇತಿಹಾಸ ವಿಷಯದಲ್ಲಿ ಪಿಹೆಚ್​ಡಿ ಪಡೆದಿರುವ ಅವರು ಉತ್ತರ ಪ್ರದೇಶದಲ್ಲಿ ವಿವಿಧ ಸರ್ಕಾರಿ ಹುದ್ದೆಯನ್ನೂ ನಿಭಾಯಿಸಿದ್ದರು.

(UP IAS Anup Chandra Pandey appointed as Election Commissioner of India) ಇದನ್ನೂ ಓದಿ: ಚುನಾವಣಾ ಆಯುಕ್ತರಾಗಿ ಸರ್ಕಾರಿ ಅಧಿಕಾರಿಗಳ ನೇಮಕ ಸಲ್ಲ; ಸುಪ್ರೀಂ ಕೋರ್ಟ್ 

ಚುನಾವಣೆಯನ್ನು ಮುಂದೂಡಲು ಬಯಸಿದ್ದೆವು, ಕೊನೆಗೆ ಅದರ ವಿರುದ್ಧ ನಡೆ ಸ್ವೀಕರಿಸಿದೆವು: ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್