ಚುನಾವಣಾ ಆಯುಕ್ತರಾಗಿ ಸರ್ಕಾರಿ ಅಧಿಕಾರಿಗಳ ನೇಮಕ ಸಲ್ಲ; ಸುಪ್ರೀಂ ಕೋರ್ಟ್
ಯಾವುದೇ ಸರ್ಕಾರಿ ಉದ್ಯೋಗಿಯೂ ಸಹ ಚುನಾವಣಾ ಆಯುಕ್ತರಾಗಿ ನೇಮಕವಾಗುವುದು ಪ್ರಜಾಪ್ರಭುತ್ವ ಪದ್ಧತಿಯಲ್ಲಿ ತಕ್ಕುದಾದ ನಡೆಯಲ್ಲ. ಪ್ರಜಾಪ್ರಭುತ್ವವಾದಿ ಆಡಳಿತದಲ್ಲಿ ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಕೊಂಚವೂ ಕಡಿಮೆಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ದೆಹಲಿ: ಸರ್ಕಾರಿ ಉದ್ಯೋಗಿ, ಅಧಿಕಾರಿಗಳನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಬಾರದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಕಳೆದ ವರ್ಷ ನಡೆದಿದ್ದ ಗೋವಾ ರಾಜ್ಯದ ಸ್ಥಳೀಯ ಪಾಲಿಕೆ ಚುನಾವಣೆಯಲ್ಲಿ ಕಾನೂನು ಕಾರ್ಯದರ್ಶಿಯನ್ನೆ ರಾಜ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದ್ದ ಗೋವಾ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ನ ಈ ತೀರ್ಪು ಹಿನ್ನೆಡೆ ಉಂಟುಮಾಡಿದೆ. ಅಲ್ಲದೇ ಗೋವಾ ಸರ್ಕಾರ ಮಾಡಿದ್ದ ನೇಮಕಾತಿ ಕಾನೂನು ಬಾಹಿರ ಎಂದಿರುವ ಸರ್ವೋಚ್ಛ ನ್ಯಾಯಾಲಯ ಚುನಾವಣಾ ಆಯುಕ್ತರ ನೇಮಕಾತಿಯನ್ನು ರದ್ದುಗೊಳಿಸಿದೆ.
ಯಾವುದೇ ಸರ್ಕಾರಿ ಉದ್ಯೋಗಿಯೂ ಸಹ ಚುನಾವಣಾ ಆಯುಕ್ತರಾಗಿ ನೇಮಕವಾಗುವುದು ಪ್ರಜಾಪ್ರಭುತ್ವ ಪದ್ಧತಿಯಲ್ಲಿ ತಕ್ಕುದಾದ ನಡೆಯಲ್ಲ. ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಪ್ರಜಾಪ್ರಭುತ್ವವಾದಿ ಆಡಳಿತದಲ್ಲಿ ಕೊಂಚವೂ ಕಡಿಮೆಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ಸರ್ಕಾರವೊಂದರ ಉದ್ಯೋಗಿಯನ್ನು ಚುನಾವಣಾ ಆಯೋಗದಲ್ಲಿ ಪ್ರಮುಖ ಹುದ್ದೆಯಾದ ಚುನಾವಣಾ ಆಯುಕ್ತರನ್ನಾಗಿ ನೇಮಿಸುವುದನ್ನು ‘ಅಪಹಾಸ್ಯ’ ಎಂದು ವ್ಯಾಖ್ಯಾನಿಸಿದೆ. ಅಲ್ಲದೆ, ಈ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೋಹಿಂಟನ್ ನಾರೀಮನ್, ಸರ್ಕಾರಿ ಉದ್ಯೋಗಿಯೋರ್ವರು ಚುನಾವಣೆ ನಡೆಸುವ ಆಯುಕ್ತರಾ್ಗಿ ನೇಮಕವಾಗಿದ್ದು ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಸಮರ್ಪಕ ಉಪಕ್ರಮವಲ್ಲ ಎಂದು ತಿಳಿಸಿದ್ದಾರೆ.
ಚುನಾವಣಾ ಆಯೋಗದ ಸ್ವಾತಂತ್ರ್ಯ, ಸ್ವಾಯತ್ತತೆಗಳಲ್ಲಿ ಸರ್ಕಾರಗಳು ಮೂಗು ತೂರಿಸಬಾರದು. ಅಲ್ಲದೇ ಯಾವುದೇ ಸರ್ಕಾರದ ಸೇವೆಯಲ್ಲಿ ನಿರತರಾಗಿರುವ ಅಧಿಕಾರಿಗಳನ್ನು ಚುನಾವಣಾ ಆಯೋಗದ ಆಯುಕ್ತರನ್ನಾಗಿ ನೇಮಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ವಿವರಿಸುತ್ತದೆ.
ಪ್ರಕರಣದ ಹಿನ್ನೆಲೆಯೇನು? ಕಳೆದ ವರ್ಷ ನಡೆದಿದ್ದ ಗೋವಾ ರಾಜ್ಯದ ಸ್ಥಳೀಯ ಪಾಲಿಕೆ ಚುನಾವಣೆಯಲ್ಲಿ ಕಾನೂನು ಕಾರ್ಯದರ್ಶಿಯನ್ನೇ ರಾಜ್ಯ ಚುನಾವಣಾ ಆಯುಕ್ತರನ್ನಾಗಿ ಗೋವಾ ರಾಜ್ಯ ಸರ್ಕಾರ ನೇಮಿಸಿತ್ತು. 5 ಸ್ಥಳೀಯ ಪಾಲಿಕೆಗಳ ಘಟಕಗಳಿಗೆ ನಡೆದಿದ್ದ ಚುನಾವಣೆಯನ್ನು ರದ್ದುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಗೋವಾ ರಾಜ್ಯ ಸರ್ಕಾರ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿತ್ತು.
ಮಾರ್ಗೋವಾ, ಮೊಪುಸಾ, ಮೋರ್ಮಗಾಂವ್ ಸೇರಿ ಒಟ್ಟು 5 ಸ್ಥಳೀಯ ಪಾಲಿಕೆಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಮೀಸಲು ಇಟ್ಟಿರಲಿಲ್ಲ. ಚುನಾವಣಾ ಆಯೋಗದ ಈ ನಿರ್ಧಾರದ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದನ್ನು ಆಲಿಸಿದ್ದ ಹೈಕೋರ್ಟ್ ಈ ಚುನಾವಣೆಗಳನ್ನು ರದ್ದುಗೊಳಿಸುವಂತೆ ಆದೇಶ ನೀಡಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀ ಗೋವಾ ರಾಜ್ಯ ಸರ್ಕಾರ ಸರ್ವೋಚ್ಛ ನ್ಯಾಯಾಲಯದ ಮೊರೆ ಹೊಗಿತ್ತು. ಇದೀಗ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಪ್ರಕಾರ ಸರ್ಕಾರಿ ಉದ್ಯೋಗಿ, ಅಧಿಕಾರಿಗಳನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಬಾರದ. ಹೀಗಾಗಿ, ಅಂದಿನ ಗೋವಾ ಚುನಾವಣಾ ಆಯುಕ್ತರಾಗಿ ಕೆಲನ ನಿರ್ವಹಿಸಿದ್ದ ಕಾನೂನು ಕಾರ್ಯದರ್ಶಿ ಅವರ ಚುನಾವಣಾ ಆಯುಕ್ತ ಸ್ಥಾನ ರದ್ದುಗೊಂಡಂತಾಗಿದೆ.
ಇದನ್ನೂ ಓದಿ: Reservation: ಶೇ. 50ಕ್ಕಿಂತ ಹೆಚ್ಚು ಮೀಸಲಾತಿ ಬೇಕಾ? ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಪ್ರಶ್ನೆ
Published On - 3:20 pm, Fri, 12 March 21