ಚುನಾವಣೆಯನ್ನು ಮುಂದೂಡಲು ಬಯಸಿದ್ದೆವು, ಕೊನೆಗೆ ಅದರ ವಿರುದ್ಧ ನಡೆ ಸ್ವೀಕರಿಸಿದೆವು: ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್

Election Commissioner Rajiv Kumar: ಮದ್ರಾಸ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಬೇಕಿದ್ದ ಈ ಕರಡು ಅಫಿಡವಿಟ್‌ನಲ್ಲಿ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಚುನಾವಣೆಯ ಹಂತಗಳನ್ನು ಮುಂದೂಡಿದರೆ ರಾಷ್ಟ್ರಪತಿಗಳ ಆಡಳಿತದಲ್ಲಿ ಅವುಗಳನ್ನು ನಡೆಸುವಂತಹ ಪರಿಸ್ಥಿತಿಗೆ ಕಾರಣವಾಗಬಹುದೆಂದು ಹೇಳಿದ್ದಾರೆ.

ಚುನಾವಣೆಯನ್ನು ಮುಂದೂಡಲು ಬಯಸಿದ್ದೆವು, ಕೊನೆಗೆ ಅದರ ವಿರುದ್ಧ ನಡೆ ಸ್ವೀಕರಿಸಿದೆವು: ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್
ರಾಜೀವ್ ಕುಮಾರ್
Follow us
ರಶ್ಮಿ ಕಲ್ಲಕಟ್ಟ
|

Updated on: May 09, 2021 | 6:02 PM

ದೆಹಲಿ: ಚುನಾವಣಾ ಆಯೋಗವು ಕೊರೊನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲು ಬಯಸಿದ್ದೆವು. ಕೊನೆಗೆ ಅದರ ವಿರುದ್ಧದ ನಡೆ ತೀರ್ಮಾನಿಸಿದೆವು ಎಂದು ಕರಡು ಅಫಿಡವಿಟ್ ನಲ್ಲಿ ಹೇಳಲಾಗಿದೆ. ಮದ್ರಾಸ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಬೇಕಿದ್ದ ಈ ಕರಡು ಅಫಿಡವಿಟ್‌ನಲ್ಲಿ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಚುನಾವಣೆಯ ಹಂತಗಳನ್ನು ಮುಂದೂಡಿದರೆ ರಾಷ್ಟ್ರಪತಿಗಳ ಆಡಳಿತದಲ್ಲಿ ಅವುಗಳನ್ನು ನಡೆಸುವಂತಹ ಪರಿಸ್ಥಿತಿಗೆ ಕಾರಣವಾಗಬಹುದೆಂದು ಹೇಳಿದ್ದಾರೆ.

ಹೀಗೆ ಮಾಡಿದ್ದರೆ ಚುನಾವಣಾ ಆಯೋಗ ಒಂದು ಪಕ್ಷದ ವಿರುದ್ಧ ಮತ್ತು ಮತ್ತೊಂದು ಪಕ್ಷದ ಪರವಾಗಿ ಒಲವು ತೋರಿದ್ದೇವೆ ಎಂಬ ಆರೋಪಗೊಳಗಾಗುತ್ತಿದ್ದೆವು ಎಂದು ಹೇಳಿರುವುದಾಗಿ ನ್ಯೂಸ್ 18 ವರದಿ ಮಾಡಿದೆ.

ಕಡೇಪಕ್ಷ ಜನರು ಹೆಚ್ಚು ದೊಡ್ಡದಾಗಿ ಅವಹೇಳನಕಾರಿ ಪದಗಳಲ್ಲಿ ಆರೋಪಗಳನ್ನು ಮಾಡಲು ಪ್ರಾರಂಭಿಸಬಾರದು ಎಂಬ ನಿಟ್ಟಿನಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಅದರ ಮೇಲೆ ಬೀರುವ ಅನುಮಾನಗಳನ್ನು ಪರಿಹರಿಸಬೇಕಾಗಿದೆ ಎಂದು ಹೇಳಿದ ರಾಜೀವ್ ಕುಮಾರ್ ರಾಜೀನಾಮೆ ನೀಡಲು ಮುಂದೆ ಬಂದಿದ್ದಾರೆ.

ಕಾರ್ಯವಿಧಾನದ ಕಾರಣಗಳಿಂದಾಗಿ ಈ ಕರಡು ಅಫಿಡವಿಟ್ ಅನ್ನು ಪ್ರಕಟಿಸಲಾಗಲಿಲ್ಲ. ಆದಾಗ್ಯೂ, ಮೂಲಗಳ ಪ್ರಕಾರ, ಕೊವಿಡ್ ಪ್ರಕರಣಗಳ ಉಲ್ಬಣಕ್ಕೆ ಚುನಾವಣಾ ಆಯೋಗ ಏಕೈಕ ಕಾರಣವಾಗಿದೆ. ಹಾಗಾಗಿ ಅದರ ಜವಾಬ್ದಾರಿಯುತ ಅಧಿಕಾರಿಗಳ ಮೇಲೆ ಕೊಲೆ ಆರೋಪಗಳನ್ನು ಹೊರಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಟೀಕೆಗೆ ಪ್ರತಿಕ್ರಿಯೆಯಾಗಿ ಕುಮಾರ್ ಈ ಅಫಿಡವಿಟ್ ಸಲ್ಲಿಸಲು ಪ್ರಸ್ತಾಪಿಸಿದ್ದರು.

ಈ ಅಫಿಡವಿಟ್ ಮದ್ರಾಸ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಭಾರತದ ಚುನಾವಣಾ ಆಯೋಗದ ಅರ್ಜಿಯ ಮತ್ತು ಹೈಕೋರ್ಟ್ ಮಾಡಿದ ಟೀಕೆಗಳನ್ನು ವಿಸ್ತರಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಮನವಿಯ ಭಾಗವಾಗಿರಲಿಲ್ಲ.

ಆದಾಗ್ಯೂ, ಮೌಖಿಕ ಅವಲೋಕನಗಳು ಅಧಿಕೃತ ನ್ಯಾಯಾಂಗ ದಾಖಲೆಯ ಭಾಗವಲ್ಲ ಮತ್ತು ಆದ್ದರಿಂದ ಅವುಗಳನ್ನು ಹೊರಹಾಕುವ ಪ್ರಶ್ನೆಯೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಸಲಹೆಗಾರರ ಸಲಹೆಯಂತೆ ಕುಮಾರ್ ಅವರ ಹೆಚ್ಚುವರಿ ಅಫಿಡವಿಟ್ ಆ ಸಮಯದಲ್ಲಿ ತಾಂತ್ರಿಕವಾಗಿ ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗದ ಮೂಲವೊಂದು ನ್ಯೂಸ್ 18ಗೆ ತಿಳಿಸಿರುವುದಾಗಿ ವರದಿ ಹೇಳಿದೆ.

ಮದ್ರಾಸ್ ಹೈಕೋರ್ಟ್​ನ ಟೀಕೆ ಕಟುವಾಗಿರಬಹುದು ಆದರೆ ತೆಗೆದುಹಾಕಲಾಗದು ಎಂದಿತ್ತು ಸುಪ್ರೀಂಕೋರ್ಟ್ 

ಕೊವಿಡ್ ಸಾಂಕ್ರಾಮಿಕದ ಪರಿಸ್ಥಿತಿಯನ್ನು ರಾಜ್ಯ ಸರ್ಕಾರಗಳು ಯಾವ ರೀತಿ ನಿಭಾಯಿಸುತ್ತವೆ ಎಂಬುದರ ಮೇಲೆ ಕಣ್ಣಿಟ್ಟಿರುವ ಹೈಕೋರ್ಟ್​ಗಳ  ಕಾರ್ಯವನ್ನು ಸುಪ್ರೀಂಕೋರ್ಟ್ ಶ್ಲಾಘಿಸಿದ್ದು, ದೇಶದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗಲು ಚುನಾವಣಾ ಆಯೋಗವೇ ಕಾರಣ ಎಂದು ಹೇಳಿದ್ದ ಮದ್ರಾಸ್ ಹೈಹೋರ್ಟ್ ವಿಮರ್ಶಾತ್ಮಕ ಟೀಕೆಗಳನ್ನು ನ್ಯಾಯಾಂಗದ ಆದೇಶದಿಂದ ತೆಗೆದು ಹಾಕಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಅದೇ ವೇಳೆ ಮಾಧ್ಯಮಗಳು ನ್ಯಾಯಾಂಗ ವಿಚಾರಣೆ ಕುರಿತ ಅವಲೋಕನಗಳನ್ನು ವರದಿ ಮಾಡದಂತೆ ನಿರ್ಬಂಧ ಹೇರಬೇಕು ಎಂಬ ಮನವಿಯನ್ನು ಗುರುವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಮದ್ರಾಸ್ ಹೈಕೋರ್ಟ್ ನೀಡಿರುವ ಪ್ರತಿಕ್ರಿಯೆ ಕಟುವಾಗಿರಬಹುದು. ಆದರೆ, ಆ ಪ್ರತಿಕ್ರಿಯೆಗಳು ನ್ಯಾಯಾಂಗದ ಆದೇಶದ ಭಾಗವಾಗಿದ್ದು, ಅವುಗಳನ್ನು ಆದೇಶದಿಂದ ತೆಗೆದು ಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ.

ನ್ಯಾಯಮೂರ್ತಿ ಎಂ .ಆರ್. ಶಾ ಅವರನ್ನೊಳಗೊಂಡ ನ್ಯಾಯಪೀಠವು ನ್ಯಾಯಾಂಗ ವಿಚಾರಣೆಯ ಕುರಿತ ಅವಲೋಕನಗಳನ್ನು ವರದಿಗಳನ್ನು ಮಾಡಬಾರದು ಎಂದು ಮಾಧ್ಯಮಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ನ್ಯಾಯಾಲಯಗಳು ಮಾಧ್ಯಮದ ವಿಕಾಸದ ತಂತ್ರಜ್ಞಾನದೊಂದಿಗೆ ಸಕ್ರಿಯವಾಗಿರಬೇಕು. ನ್ಯಾಯಾಂಗ ವಿಚಾರಣೆಯನ್ನು ವರದಿ ಮಾಡುವುದನ್ನು ತಡೆಯುವುದಾದರೆ ಅದು ಒಳ್ಳೆಯದಲ್ಲ ಎಂದು ಹೇಳಿದೆ.

ಕಳೆದ ತಿಂಗಳು ನಾಲ್ಕು ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಪ್ರಚಾರದ ಪ್ರಚಾರ ಕಾರ್ಯಕ್ರಮಗಳಲ್ಲಿ ಕೊವಿಡ್ ಮಾರ್ಗಸೂಚಿ ಉಲ್ಲಂಘಿಸದಂತೆ ರಾಜಕೀಯ ಪಕ್ಷಗಳನ್ನು ತಡೆಯದೇ ಇದ್ದುದಕ್ಕೆ ಚುನಾವಣಾ ಆಯೋಗದ ಕಿಡಿಕಾರಿದ ಮದ್ರಾಸ್ ಹೈಕೋರ್ಟ್ ಚುನಾವಣಾ ಆಯೋಗದ ಮೇಲೆ ಕೊಲೆ ಆರೋಪಗಳನ್ನು ವಿಧಿಸಬೇಕೆಂದು ಹೇಳಿತ್ತು.

ರಾಜಕಾರಣಿಗಳು ಬೃಹತ್ ಮೆರವಣಿಗೆ, ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವಾಗ ಅದನ್ನು ತಡೆಯದೇ ಇರುವುದಕ್ಕೆ ಮದ್ರಾಸ್ ಹೈಕೋರ್ಟ್ ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದಿದೆ. ದೇಶ ಈಗ ಎದುರಿಸುತ್ತಿರುವ ಪರಿಸ್ಥಿತಿಗೆ ಏಕೈಕ ಜವಾಬ್ದಾರರು ಚುನಾವಣಾ ಆಯೋಗ. ದೇಶದಲ್ಲಿ ಈ ಪರಿಸ್ಥಿತಿ ಬರುವುದಕ್ಕೆ ಚುನಾವಣಾ ಆಯೋಗವೇ ಏಕೈಕ ಜವಾಬ್ದಾರರು ಎಂದು ಮದ್ರಾಸ್ ಹೈಕೋರ್ಟ್ ಹೇಳಿತ್ತು.

ಇದನ್ನೂ ಓದಿ: ಮದ್ರಾಸ್ ಹೈಕೋರ್ಟ್​ನ ಟೀಕೆ ಕಟುವಾಗಿರಬಹುದು ಆದರೆ ತೆಗೆದುಹಾಕಲಾಗದು: ಸುಪ್ರೀಂಕೋರ್ಟ್

ಮದ್ರಾಸ್​ ಹೈಕೋರ್ಟ್ ಅಭಿಪ್ರಾಯದ ವಿರುದ್ಧ ಸುಪ್ರೀಂ ಕೋರ್ಟ್​ ಮೊರೆಹೊಕ್ಕ ಚುನಾವಣಾ ಆಯೋಗ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ