Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ರಾಸ್​ ಹೈಕೋರ್ಟ್ ಅಭಿಪ್ರಾಯದ ವಿರುದ್ಧ ಸುಪ್ರೀಂ ಕೋರ್ಟ್​ ಮೊರೆಹೊಕ್ಕ ಚುನಾವಣಾ ಆಯೋಗ

ಮಾಧ್ಯಮಗಳು ಕೊರ್ಟು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಮತ್ತು ಆದೇಶಗಳಿಗೆ ಮಾತ್ರ ತಮ್ಮ ವರದಿಗಾರಿಕೆಯನ್ನು ಸೀಮಿತಗೊಳಿಸಿಕೊಂಡು ವಿಚಾರಣೆ ಸಮಯದಲ್ಲಿ ಮಾಡಲಾಗುವ ಮೌಖಿಕ ಹೇಳಿಕೆಗಳನ್ನು ವರದಿ ಮಾಡದಂತಿರಲು ನಿರ್ದೇಶನ ನೀಡಬೇಕೆಂದು ಆಯೋಗವು ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಮದ್ರಾಸ್​ ಹೈಕೋರ್ಟ್ ಅಭಿಪ್ರಾಯದ ವಿರುದ್ಧ ಸುಪ್ರೀಂ ಕೋರ್ಟ್​ ಮೊರೆಹೊಕ್ಕ ಚುನಾವಣಾ ಆಯೋಗ
ಸುಪ್ರೀಂಕೋರ್ಟ್​
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 01, 2021 | 11:34 PM

ನವದೆಹಲಿ: ಭಾರತದಲ್ಲಿ ಈಗ ತಲೆದೋರಿರುವ ಕೊವಿಡ್​-19 ಬಿಕ್ಕಟ್ಟಿಗೆ ಭಾರತದ ಚುನಾವಣಾ ಆಯೋಗವೇ ಏಕಮಾತ್ರ ಕಾರಣ, ಚುನಾವಣಾ ಸಮಾವೇಶಗಳು ನಡೆಯುವಾಗ ಅದು ರಾಜಕೀಯ ಪಕ್ಷಗಳಿಗೆ ಮತ್ತು ನಾಯಕರಿಗೆ ಕೊವಿಡ್​-19 ನಿಯಮಾವಳಿಗಳನ್ನು ಪಾಲಿಸಲು ಹೇಳದಿರುವುದರ ಹಿನ್ನೆಲೆಯಲ್ಲಿ ಆಯೋಗದ ವಿರುದ್ಧ ಪ್ರಾಯಶ: ಕೊಲೆ ಪ್ರಕರಣಗಳನ್ನು ದಾಖಲಿಸಬಹುದಾಗಿದೆ ಎಂದು ಏಪ್ರಿಲ್ 26ರಂದು ಮದ್ರಾಸ್ ಹೈಕೋರ್ಟ್​ ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಹೈಕೋರ್ಟ್​ ವಿರುದ್ಧ ಸುಪ್ರೀಮ್ ಕೋರ್ಟಿನ ಮೊರೆ ಹೊಕ್ಕಿದೆ.

ಹಾಗೆಯೇ, ಮಾಧ್ಯಮಗಳು ಕೊರ್ಟು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಮತ್ತು ಆದೇಶಗಳಿಗೆ ಮಾತ್ರ ತಮ್ಮ ವರದಿಗಾರಿಕೆಯನ್ನು ಸೀಮಿತಗೊಳಿಸಿಕೊಂಡು ವಿಚಾರಣೆ ಸಮಯದಲ್ಲಿ ಮಾಡಲಾಗುವ ಮೌಖಿಕ ಹೇಳಿಕೆಗಳನ್ನು ವರದಿ ಮಾಡದಂತಿರಲು ನಿರ್ದೇಶನ ನೀಡಬೇಕೆಂದು ಆಯೋಗವು ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ ನೇತೃತ್ವದ ಸುಪ್ರೀಮ್ ಕೋರ್ಟ್​ ಪೀಠವೊಂದು ಈ ಪ್ರಕರಣದ ವಿಚಾರಣೆಯನ್ನು ಮೇ 3 ರಂದು ನಡೆಸಲಿದೆ.

ಇದಕ್ಕೆ ಮೊದಲು ಆಯೋಗವು ಇದೇ ಮನವಿಯನ್ನು ಮದ್ರಾಸ್​ ಹೈಕೊರ್ಟ್​ಗೂ ಸಲ್ಲಿಸಿತು. ಆದರೆ, ಮುಖ್ಯ ನ್ಯಾಯಾಧೀಶ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಕುಮಾರ್ ಅವರನ್ನೊಳಗೊಂಡ ಪೀಠವು ಆಯೋಗದ ಮನವಿಗಳನ್ನು ಪರಿಗಣಿಸಲಿಲ್ಲ.

ಕೊವಿಡ್ ಪಿಡುಗು ಸೃಷ್ಟಿಸಿರುವ ಹಾಹಾಕಾರದ ನಡುವೆ ಚುನಾವಣೆಗಳನ್ನು ನಡೆಸುವ ಕಠಿಣ ಜವಾಬ್ದಾರಿ ಎನ್ನುವ ಅಂಶದೆಡೆ ನ್ಯಾಯಾಲಯದ ಗಮನ ಸೆಳೆದು ಮಾಧ್ಯಮಗಳಿಗೆ ನಿರ್ದೇಶನ ನೀಡಬೇಕೆಂದು ಅಯೋಗದ ಪರ ವಕೀಲರು ಮನವಿ ಮಾಡಿದರು.

‘ಚುನಾವಣಾ ಆಯೋಗದ ಮೇಲೆ ಕಠಿಣ ಮತ್ತು ಗುರುತರವಾದ ಜವಾಬ್ದಾರಿಯಿದೆ…….ಮಾಧ್ಯಮದವರು ವಿಷಯವನ್ನು ಭಾವೋದ್ರೇಕತೆಯ ವರದಿಗಳನ್ನು ಮಾಡಬಾರದು ಎಂದು ವಕೀಲರು,’ ಮನವಿ ಮಾಡಿದರು.

‘ಭಾರತದಲ್ಲಿ ಈಗ ತಲೆದೋರಿರುವ ಕೊವಿಡ್​-19 ಬಿಕ್ಕಟ್ಟಿಗೆ ಭಾರತದ ಚುನಾವಣಾ ಆಯೋಗವೇ ಏಕಮಾತ್ರ ಕಾರಣ, ಚುನಾವಣಾ ಱಲಿಗಳು ನಡೆಯುವಾಗ ಅದು ರಾಜಕೀಯ ಪಕ್ಷಗಳಿಗೆ ಮತ್ತು ನಾಯಕರಿಗೆ ಕೊವಿಡ್​-19 ನಿಯಮಾವಳಿಗಳನ್ನು ಪಾಲಿಸಲು ಹೇಳದಿರುವುದರ ಹಿನ್ನೆಲೆಯಲ್ಲಿ ಆಯೋಗದ ವಿರುದ್ಧ ಪ್ರಾಯಶ: ಕೊಲೆ ಪ್ರಕರಣಗಳನ್ನು ದಾಖಲಿಸಬಹುದಾಗಿದೆ ಎಂದು ಏಪ್ರಿಲ್ 26ರಂದು ಮದ್ರಾಸ್ ಹೈಕೋರ್ಟ್​ ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಆಯೋಗದ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದ ಎಫ್​ಐಆರ್​ಗಳು ದಾಖಲಾಗಿವೆ,’ ಎಂದು ವಕೀಲರು ನ್ಯಾಯಾಲಯಕ್ಕೆ ವಿವರಿಸಿದರು.

‘ಮಾನ್ಯ ನ್ಯಾಯಮೂರ್ತಿಗಳು ನಮ್ಮ ಕಾರ್ಯ ವೈಖರಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬಹದಾಗಿತ್ತು, ನಾವು ಅಪರಾಧಿಗಳು ಎಂದು ದೂಷಿಸುವ ಅಗತ್ಯವಿರಲಿಲ್ಲ. ನಮಗೆ ಅಭಿಪ್ರಾಯ ಬೇಕಿತ್ತು,’ ಎಂದು ಅವರು ಹೇಳಿದರು. ‘ವಿವೇಚನೆರಹಿತ ದೂರುಗಳ ಬಗ್ಗೆ ಕೋರ್ಟ್​ ಗಮನಹರಿಸುವುದು.’ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.

ಸುವೋ ಮೋಟೊ ವ್ಯಾಜ್ಯದಲ್ಲಿ ಪೀಠಕ್ಕೆ ದೈನಂದಿನ ಆದೇಶವನ್ನು ನಿರ್ದೇಶಿಸುತ್ತಾ ಕೋರ್ಟು ಹೀಗೆ ಹೇಳಿತು:

‘ನಾವಿಲ್ಲಿ ಎರಡು ಅಂಶಗಳನ್ನು ಗಮನಿಸಬೇಕಿದೆ- ಸೋಂಕಿನ ಪ್ರಕರಣಗಳ ಹೆಚ್ಚಳ ಅನಿರೀಕ್ಷಿತಾದದ್ದು ಮತ್ತು ಸಿದ್ಧತೆಯ ಕ್ರಮಗಳನ್ನು ಬಹಳ ಮೊದಲು ತೆಗೆದುಕೊಳ್ಳಲಾಗಿತ್ತು ಎಂದು ಕೇಂದ್ರ ಸರ್ಕಾರ ಹೇಳುತ್ತರುವುದು ಮೊದಲನೆಯದಾದರೆ ಎರಡನೇಯದ್ದು ವಿಷಯವನ್ನು ಭಾವೋದ್ರೋಕಗೊಳಿಸಲಾಗುತ್ತದೆ ಎಂಬ ಚುನಾವಣಾ ಆಯೋಗದ ಕಳವಳ. ಈ ಎರಡು ಸಂಗತಿಗಳ ಪೋಸ್ಟ್ ಮಾರ್ಟಮ್ ಈಗಿನ ಕಳವಳಕಾರಿ ಸ್ಥಿತಿಯಲ್ಲಿ ಮಾಡಲಾಗದು, ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕು.’

ಇದನ್ನೂ ಓದಿ: ದೇಶಕ್ಕೆ ಕಷ್ಟ ಬಂದಾಗ ಸುಮ್ಮನೇ ಕೈಕಟ್ಟಿಕೊಂಡು ಕೂರಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್ 

Published On - 11:34 pm, Sat, 1 May 21

ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್