Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ 2ನೇ ಅಲೆಗೆ ಚುನಾವಣಾ ಆಯೋಗವೇ ಹೊಣೆ; ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು: ಮದ್ರಾಸ್ ಹೈಕೋರ್ಟ್

Madras High Court: ರಾಜಕಾರಣಿಗಳು ಬೃಹತ್ ಮೆರವಣಿಗೆ, ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವಾಗ ಅದನ್ನು ತಡೆಯದೇ ಇರುವುದಕ್ಕೆ ಮದ್ರಾಸ್ ಹೈಕೋರ್ಟ್ ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದಿದೆ. ದೇಶ ಈಗ ಎದುರಿಸುತ್ತಿರುವ ಪರಿಸ್ಥಿತಿಗೆ ಏಕೈಕ ಜವಾಬ್ದಾರರು ಚುನಾವಣಾ ಆಯೋಗ. ದೇಶದಲ್ಲಿ ಎರಡನೇ ಅಲೆ ಇಷ್ಟೊಂದು ತೀವ್ರವಾಗಲು ಆಯೋಗವೇ ಕಾರಣ ಎಂದು ಹೈಕೋರ್ಟ್ ಹೇಳಿದೆ.

ಕೊವಿಡ್ 2ನೇ ಅಲೆಗೆ ಚುನಾವಣಾ ಆಯೋಗವೇ ಹೊಣೆ; ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು: ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್
Follow us
ರಶ್ಮಿ ಕಲ್ಲಕಟ್ಟ
|

Updated on:Apr 26, 2021 | 2:15 PM

ಚೆನ್ನೈ: ರಾಜಕೀಯ ಪಕ್ಷಗಳು ಕೊವಿಡ್ ನಿರ್ಬಂಧ ಮತ್ತು ನಿಯಮಾವಳಿಗಳನ್ನು ಉಲ್ಲಂಘಿಸಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವಾಗ ಅದಕ್ಕೆ ತಡೆಯೊಡ್ಡದಿರುವುದಕ್ಕೆ ಭಾರತೀಯ ಚುನಾವಣಾ ಆಯೋಗವನ್ನು ಮದ್ರಾಸ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ದೇಶದಲ್ಲಿ ಕೊವಿಡ್ ಎರಡನೇ ಅಲೆ ಉಲ್ಬಣವಾಗಲು ಚುನಾವಣಾ ಆಯೋಗವೇ ಜವಾಬ್ದಾರರು. ಆಯೋಗದ ವಿರುದ್ದ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಹೈಕೋರ್ಟ್ ಗುಡುಗಿದೆ. ರಾಜಕಾರಣಿಗಳು ಬೃಹತ್ ಮೆರವಣಿಗೆ, ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವಾಗ ಅದನ್ನು ತಡೆಯದೇ ಇರುವುದಕ್ಕೆ ಮದ್ರಾಸ್ ಹೈಕೋರ್ಟ್ ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದಿದೆ. ದೇಶ ಈಗ ಎದುರಿಸುತ್ತಿರುವ ಪರಿಸ್ಥಿತಿಗೆ ಏಕೈಕ ಜವಾಬ್ದಾರರು ಚುನಾವಣಾ ಆಯೋಗ. ದೇಶದಲ್ಲಿ ಎರಡನೇ ಅಲೆ ಇಷ್ಟೊಂದು ತೀವ್ರವಾಗಲು ಆಯೋಗವೇ ಕಾರಣ ಎಂದು ಹೈಕೋರ್ಟ್ ಹೇಳಿದೆ.

ರಾಜಕೀಯ ಪಕ್ಷಗಳು ಕೊವಿಡ್ ನಿರ್ಬಂಧಗಳನ್ನು ಗಾಳಿಗೆ ತೂರುತ್ತಿರುವಾಗ ಚುನಾವಣಾ ಆಯೋಗ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಎಂದಿದೆ ಹೈಕೋರ್ಟ್. ಹಾಗಾಗಿ ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ತಮ್ಮ ಕೆಲಸಗಳನ್ನು ಸರಿಯಾಗಿ ನಿರ್ವಹಿಸಲು ವಿಫಲವಾಗಿರುವುದಕ್ಕೆ ವಿಚಾರಣೆಗೊಳಪಡಿಸಬೇಕು ಎಂದಿದೆ.

ತಮಿಳುನಾಡು ವಿಧಾನಸಭೆ ಚುನಾವಣೆಯ ಮತ ಎಣಿಕೆ ದಿನ ಅಂದರೆ ಮೇ 2ರಂದು ಯಾವ ರೀತಿಯಲ್ಲಿ ಕೊವಿಡ್ ನಿಯಮಾವಳಿಗಳನ್ನು ಪಾಲಿಸಲಾಗುವುದು ಎಂಬುದರ ಬಗ್ಗೆ ನೀಲನಕ್ಷೆ ಸಲ್ಲಿಸುವಂತೆ ಹೈಕೋರ್ಟ್ ತಮಿಳುನಾಡಿನ ಮುಖ್ಯ ಚುನಾವಣಾ ಅಧಿಕಾರಿಗೆ ಹೇಳಿದೆ.

ಒಂದು ವೇಳೆ ನೀಲಿ ನಕ್ಷೆ ಸಲ್ಲಿಸಲು ಚುನಾವಣಾ ಆಯೋಗ ವಿಫಲವಾದರೆ ತಮಿಳುನಾಡಿನಲ್ಲಿ ಮತಎಣಿಕೆ ಪ್ರಕ್ರಿಯೆಯನ್ನೇ ನಿಲ್ಲಿಸುತ್ತೇವೆ ಎಂದು ಮದ್ರಾಸ್ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಆದಾಗ್ಯೂ, ತಮಿಳುನಾಡು ಸರ್ಕಾರ ರಾಜ್ಯದಲ್ಲಿ ಕೊವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಆಕ್ಸಿಜನ್ ಕೊರತೆ ಇರುವುದರ ಬಗ್ಗೆಯೂ ವರದಿಯಾಗಿದೆ. ಭಾನುವಾರ ತಮಿಳುನಾಡಿನಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ 15,000 ದಾಟಿದ್ದು , ಪ್ರಕರಣಗಳ ಸಂಖ್ಯೆ 10.81 ಲಕ್ಷಕ್ಕೇರಿದೆ. ಒಂದೇ ದಿನ 82 ಸಾವು ಪ್ರಕರಣ ವರದಿ ಆಗಿದ್ದು ಈವರೆಗೆ 13,557 ಮಂದಿ ಮೃತಪಟ್ಟಿದ್ದಾರೆ. 15,659 ಹೊಸ ಪ್ರಕರಣಗಳು ಇಲ್ಲಿ ಇಂದು ವರದಿ ಆಗಿದ್ದು 11,065 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ 9,63,251 ಮಂದಿ ಚೇತರಿಕೆ ಕಂಡಿದ್ದಾರೆ.

(Election Commission single handedly responsible for second COVID wave it should be booked for murder says Madras High Court |)

ಇದನ್ನೂ ಓದಿ:  Tamil Nadu Assembly polls: ಸ್ಟಾಲಿನ್ ಪುತ್ರ ಉದಯನಿಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಎರಡೆರಡು ದೂರುಗಳು

ಚುನಾವಣಾ ಆಯೋಗದ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರಲಿದ್ದಾರಾ ಮಮತಾ ಬ್ಯಾನರ್ಜಿ?

Published On - 1:59 pm, Mon, 26 April 21