ದೆಹಲಿಯಲ್ಲಿ ಶವಾಗಾರವಾಗಿ ನಿರ್ಮಾಣಗೊಂಡ ಸಾರ್ವಜನಿಕ ಉದ್ಯಾನವನ
ಕೊವಿಡ್ ಸೋಂಕಿಗೆ ಬಲಿಯಾದವರ ಅಂತ್ಯಕ್ರಿಯೆಗೆ ಶವಾಗಾರಕ್ಕಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ಆಗ್ನೇಯ ದೆಹಲಿಯಲ್ಲಿ ಸಾರ್ವಜನಿಕ ಉದ್ಯಾನವನವನ್ನು ಶವಾಗಾರವಾಗಿ ಪರಿವರ್ತಿಸಲಾಗಿದೆ.
ದೆಹಲಿ: ಪ್ರತಿನಿತ್ಯ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದಾಗಿ ಸಾವಿನ ಸಂಖ್ಯೆಯೂ ಕೂಡಾ ಹೆಚ್ಚುತ್ತಿದೆ. ಬೇರೆ ವಿಧಿಯಿಲ್ಲದೇ ಸಾರ್ವಜನಿಕ ಉದ್ಯಾನವನಗಳನ್ನು ಶಾವಾಗಾರವಾಗಿ ನಿರ್ಮಿಸುವ ಪರಿಸ್ಥಿತಿ ಎದುರಾಗಿದೆ. ಕೊವಿಡ್ ಸೋಂಕಿಗೆ ಬಲಿಯಾದವರ ಅಂತ್ಯಕ್ರಿಯೆಗೆ ಶವಾಗಾರಕ್ಕಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ಆಗ್ನೇಯ ದೆಹಲಿಯಲ್ಲಿ ಸಾರ್ವಜನಿಕ ಉದ್ಯಾನವನವನ್ನು ಶವಾಗಾರವಾಗಿ ಪರಿವರ್ತಿಸಲಾಗಿದೆ.
ಶನಿವಾರ 27 ಕೊವಿಡ್ ಸೋಂಕಿನಿಂದ ಸಾವಿಗೀಡಾದ ದೇಹಗಳು ಇದ್ದವು. ಭಾನುವಾರ ಸಂಜೆ 5 ಗಂಟೆಯವರೆಗೆ 30ಕ್ಕಿಂತಲೂ ಹೆಚ್ಚು ದೇಹಗಳು ಬಂದಿದ್ದವು. ಕೊವಿಡ್ ಸಂಬಂಧಿಸಿದ ಸಾವುಗಳು ದಿನೇ ದಿನೇ ಹೆಚ್ಚುತ್ತಿವೆ. ನಾವು ಸ್ಥಳಾವಕಾಶವನ್ನು ಕಡಿಮೆ ಹೊಂದಿದ್ದೇವೆ. 20 ಹೊಸ ಪ್ಲಾಟ್ಫಾರ್ಮ್ಗಳೊಂದಿಗೆ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸುವ ಭರವಸೆ ನಮಗಿದೆ. ಪ್ರಸ್ತುತದಲ್ಲಿ ಬೆಳಿಗ್ಗೆ 6ರಿಂದ ಮಧ್ಯರಾತ್ರಿಯವರೆಗೆ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಸರಾಯ್ ಕೇಲ್ ಖಾನ್ ಸ್ಮಶಾನದ ಕೆಲಸಗಾರರೊಬ್ಬರು ಹೇಳಿದ್ದಾರೆ.
ಉದ್ಯಾನವನದ ಉಳಿದ ಭಾಗಗಳಲ್ಲಿ ಇನ್ನೂ 50 ಪ್ಲಾಟ್ಫಾರ್ಮ್ಗಳು ಬರಬಹುದು ಎಂದು ಫ್ಲಾಟ್ಫಾರ್ಮ್ಗಳನ್ನು ನಿರ್ಮಿಸಲು ದಕ್ಷಿಣ ನಾಗರಿಕ ಸಂಸ್ಥೆಯಿಂದ ನಿಯೋಜಿಸಲ್ಪಟ್ಟ ಗುತ್ತಿಗೆದಾರ ಶ್ಯಾಮ್ ಕುಮಾರ್ ಹೇಳಿದ್ದಾರೆ. ಶವಸಂಸ್ಕಾರದ ಮೈದಾನದಲ್ಲಿ ಸ್ಥಳಕ್ಕಾಗಿ ಜನರು ಪರದಾಡುತ್ತಿದ್ದಾರೆ. ಅನೇಕರು ಅಂತಿಮ ವಿಧಿವಿಧಾನಗಳನ್ನು ನಿರ್ವಹಿಸಲು ಆರು ಗಂಟೆಗೂ ಹೆಚ್ಚು ಕಾಯಬೇಕಾದ ಸಂದರ್ಭ ಎದುರಾಗಿದೆ ಎಂದು ತಮ್ಮ ಸೋದರ ಮಾವನ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ಸುರೇಶ್ ಭಾರತಿ ಹೇಳಿಕೆ ನೀಡಿದ್ದಾರೆ. ದೆಹಲಿಯ ಆಸ್ಪತ್ರೆಯಿಂದ ಮೂರು ಶವಗಳನ್ನು ಶವಾಗಾರಕ್ಕೆ ತಂದ ಆಂಬ್ಯಲೆನ್ಸ್ ಚಾಲಕ ಸಮತೋಷ್ ಕುಮಾರ್, ದೆಹಲಿಯ ಇತರ ಎಲ್ಲಾ ಶವಾಗಾರಗಳಲ್ಲಿಯೂ ಪರಿಸ್ಥಿತಿ ಹಿಗೆಯೇ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಕೊವಿಡ್ ಪ್ರಕರಣ ಹೆಚ್ಚಳ, ಮೇ 3ರವರೆಗೆ ಲಾಕ್ಡೌನ್ ವಿಸ್ತರಣೆ: ಅರವಿಂದ್ ಕೇಜ್ರಿವಾಲ್