ಇಂದಿರಾ ಗಾಂಧಿ ಮತ್ತು ಜೆಆರ್​ಡಿ ಟಾಟಾ ನಡುವೆ ವಿನಿಮಯವಾಗಿದ್ದ ಪತ್ರಗಳನ್ನು ಶೇರ್​ ಮಾಡಿದ ಕಾಂಗ್ರೆಸ್​ ನಾಯಕ

ಏರ್​ ಇಂಡಿಯಾ (Air India) ಇದೀಗ ಮತ್ತೆ ಟಾಟಾ ಸನ್ಸ್ (Tata Sons)​ ಪಾಲಾಗುತ್ತಿದೆ. ಈ ಬೆನ್ನಲ್ಲೇ ಕಾಂಗ್ರೆಸ್​ ನಾಯಕ ಜೈರಾಮ್​ ರಮೇಶ್​ ಒಂದು ಪತ್ರವನ್ನು ಟ್ವಿಟರ್​​ನಲ್ಲಿ ಶೇರ್​ ಮಾಡಿದ್ದಾರೆ. ಈ ಪತ್ರದ ವಿಶೇಷತೆಯೆಂದರೆ ಇದನ್ನು ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಏರ್​ ಇಂಡಿಯಾದ ಸಂಸ್ಥಾಪಕ ಆರ್​ಜೆಡಿ ಟಾಟಾ (JRD TATA) ಅವರಿಗೆ ಬರೆದಿದ್ದರು. ಜೆಆರ್​ಡಿ ಟಾಟಾ ಏರ್ ​ಇಂಡಿಯಾದ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿದ ನಂತರ ಇಂದಿರಾಗಾಂಧಿ(Indira Gandhi) ಅವರಿಗೆ ಬರೆದ ಪತ್ರ ಇದಾಗಿದೆ.  ಇಂದಿರಾಗಾಂಧಿ […]

ಇಂದಿರಾ ಗಾಂಧಿ ಮತ್ತು ಜೆಆರ್​ಡಿ ಟಾಟಾ ನಡುವೆ ವಿನಿಮಯವಾಗಿದ್ದ ಪತ್ರಗಳನ್ನು ಶೇರ್​ ಮಾಡಿದ ಕಾಂಗ್ರೆಸ್​ ನಾಯಕ
ಇಂದಿರಾ ಗಾಂಧಿ ಮತ್ತು ಜೆಆರ್​ಡಿ ಟಾಟಾ
Follow us
TV9 Web
| Updated By: Lakshmi Hegde

Updated on: Oct 09, 2021 | 6:23 PM

ಏರ್​ ಇಂಡಿಯಾ (Air India) ಇದೀಗ ಮತ್ತೆ ಟಾಟಾ ಸನ್ಸ್ (Tata Sons)​ ಪಾಲಾಗುತ್ತಿದೆ. ಈ ಬೆನ್ನಲ್ಲೇ ಕಾಂಗ್ರೆಸ್​ ನಾಯಕ ಜೈರಾಮ್​ ರಮೇಶ್​ ಒಂದು ಪತ್ರವನ್ನು ಟ್ವಿಟರ್​​ನಲ್ಲಿ ಶೇರ್​ ಮಾಡಿದ್ದಾರೆ. ಈ ಪತ್ರದ ವಿಶೇಷತೆಯೆಂದರೆ ಇದನ್ನು ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಏರ್​ ಇಂಡಿಯಾದ ಸಂಸ್ಥಾಪಕ ಆರ್​ಜೆಡಿ ಟಾಟಾ (JRD TATA) ಅವರಿಗೆ ಬರೆದಿದ್ದರು. ಜೆಆರ್​ಡಿ ಟಾಟಾ ಏರ್ ​ಇಂಡಿಯಾದ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿದ ನಂತರ ಇಂದಿರಾಗಾಂಧಿ(Indira Gandhi) ಅವರಿಗೆ ಬರೆದ ಪತ್ರ ಇದಾಗಿದೆ.  ಇಂದಿರಾಗಾಂಧಿ ಜೆಆರ್​ಡಿ ಟಾಟಾರಿಗೆ ಬರೆದ ಪತ್ರ ಮತ್ತು ಅದಕ್ಕೆ ಪ್ರತಿಯಾಗಿ ಜೆಆರ್​ಡಿ ಟಾಟಾ ಇಂದಿರಾಗಾಂಧಿಗೆ ಬರೆದ ಪತ್ರ ಎರಡನ್ನೂ ಜೈರಾಮ್​ ರಮೇಶ್​ ಶೇರ್ ಮಾಡಿಕೊಂಡಿದ್ದಾರೆ. ಅಂದಹಾಗೆ ಇಂದಿರಾಗಾಂಧಿ ಈ ಪತ್ರ ಬರೆಯುವಾಗ ಅವರು ಪ್ರಧಾನಮಂತ್ರಿ ಹುದ್ದೆಯಲ್ಲಿ ಇರಲಿಲ್ಲ.

ಪತ್ರವನ್ನು ಶೇರ್​ ಮಾಡಿರುವ ಜೈರಾಮ್​ ರಮೇಶ್​, 1978ರ ಫೆಬ್ರವರಿಯಲ್ಲಿ ಜನತಾ ಪಾರ್ಟಿಯ ಮುರಾರ್ಜಿ ದೇಸಾಯಿ ಸರ್ಕಾರ ಏರ್​ ಇಂಡಿಯಾ ಮುಖ್ಯಸ್ಥ ಜೆಆರ್​ಡಿ ಟಾಟಾರನ್ನು ಹುದ್ದೆಯಿಂದ ಕೆಳಗೆ ಇಳಿಸಿತು. 1953ರಿಂದಲೂ ಏರ್​ ಇಂಡಿಯಾ ಅಧ್ಯಕ್ಷರಾಗಿದ್ದ ಅವರು 1978ರಲ್ಲಿ ಹುದ್ದೆಯಿಂದ ಕೆಳಗೆ ಇಳಿದಾಗ ಇಂದಿರಾ ಗಾಂಧಿ ಪತ್ರ ಬರೆದಿದ್ದರು. ಅವರು ತಮ್ಮ ಕೈಬರಹದಲ್ಲಿ ಬರೆದ ಪತ್ರವಾಗಿತ್ತು. ಅದಕ್ಕೆ ಪ್ರತಿಯಾಗಿ ಜೆಆರ್​ಡಿ ಟಾಟಾ ಕೂಡ ಪತ್ರ ಬರೆದಿದ್ದರು ಎಂದು ಕ್ಯಾಪ್ಷನ್​ ಬರೆದಿದ್ದಾರೆ.

1978ರ ಫೆಬ್ರವರಿ 1ರಂದು ಮುರಾರ್ಜಿ ದೇಸಾಯಿ ಸರ್ಕಾರ ಜೆಆರ್​ಡಿ ಟಾಟಾ ಅವರನ್ನು ಏರ್​ ಇಂಡಿಯಾ ಮತ್ತು ಇಂಡಿಯನ್ ಏರ್​ಲೈನ್ಸ್​ಗಳ ಮಂಡಳಿಗಳಿಂದ ತೆಗೆದುಹಾಕಿತು. ಅದಾದ ನಂತರ 1980ರಲ್ಲಿ ಮತ್ತೆ ಪ್ರಧಾನಿಯಾದ ಇಂದಿರಾಗಾಂಧಿ, ಮತ್ತೆ ಮಂಡಳಿಗಳಿಗೆ ಪುನಃ ನೇಮಕ ಮಾಡಿದರಾದರೂ ಜೆಆರ್​ಡಿ ಟಾಟಾ ಅಧ್ಯಕ್ಷರಾಗಲಿಲ್ಲ.  ಅದಕ್ಕೂ ಮೊದಲು ಜೆಆರ್​ಡಿ ಟಾಟಾ 1978ರಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿದಾಗ ಪತ್ರ ಬರೆದಿದ್ದ ಇಂದಿರಾ ಗಾಂಧಿ ಈ ಬಗೆಗಿನ ತಮ್ಮ ನೋವು ವ್ಯಕ್ತಪಡಿಸಿದ್ದರು. ‘ನೀವು ಕೇವಲ ಏರ್​ ಇಂಡಿಯಾದ ಅಧ್ಯಕ್ಷರಾಗಿರಲಿಲ್ಲ. ಅದರ ಸಂಸ್ಥಾಪಕರಾಗಿ, ಏರ್​ ಇಂಡಿಯಾ ಬಗ್ಗೆ ವೈಯಕ್ತಿಕವಾಗಿ ತುಂಬ ಕಾಳಜಿ ವಹಿಸಿ, ಅದನ್ನು ಪೋಷಿಸಿದ್ದಿರಿ. ಏರ್​ ಇಂಡಿಯಾವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವಲ್ಲಿ ನಿಮ್ಮ ಪಾತ್ರ ದೊಡ್ಡದು. ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ’ ಎಂಬಂಥ ಮೆಚ್ಚುಗೆಯ ಮಾತುಗಳನ್ನು ಇಂದಿರಾಗಾಂಧಿ ತಮ್ಮ ಪತ್ರದಲ್ಲಿ ಬರೆದಿದ್ದರು.

ಅದಕ್ಕೆ ಪ್ರತಿಯಾಗಿ ಜೆಆರ್​ಡಿ ಟಾಟಾ ಪತ್ರ ಬರೆದು, ‘ನಿಮ್ಮ ಮಾತುಗಳಿಂದ ತುಂಬ ಸಂತೋಷವಾಯಿತು. ವಿಮಾನಯಾನ ಸಂಸ್ಥಾಪನೆಯಲ್ಲಿ ನನ್ನ ಪಾತ್ರವನ್ನು ಉಲ್ಲೇಖಿಸಿ ಬರೆದಿದ್ದು, ನಿಜಕ್ಕೂ ನನ್ನ ಮನಸಿಗೆ ಹತ್ತಿರವೆನಿಸಿತು. ನನ್ನ ಸಹೋದ್ಯೋಗಿಗಳು, ಸಿಬ್ಬಂದಿಯ ನಿಷ್ಠೆಯಿಂದ ನನಗೆ ಯಶಸ್ಸು ಸಿಕ್ಕಿತು. ಹಾಗೇ ಸರ್ಕಾರದಿಂದಲೂ ನನಗೆ ಬೆಂಬಲ ಸಿಕ್ಕಿದೆ. ಇವರೆಲ್ಲ ಸಹಕಾರವಿಲ್ಲದೆ ನಾನು ಏನನ್ನೂ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದ್ದರು. 1932ರಲ್ಲಿ ಟಾಟಾ ಏರ್​ಲೈನ್​​ ಸ್ಥಾಪನೆಗೊಂಡಿತ್ತು. ಅದನ್ನು 1953ರಲ್ಲಿ ಕೇಂದ್ರ ಸರ್ಕಾರ ನಿಯಂತ್ರಣಕ್ಕೆ ತೆಗೆದುಕೊಂಡು ಏರ್​ ಇಂಡಿಯಾ ಆಯಿತು. ಅದೀಗ ಮತ್ತೆ ಟಾಟಾ ಸಮೂಹಕ್ಕೇ ಸಿಕ್ಕಿದೆ.

ಇದನ್ನೂ ಓದಿ: ‘ತಾಯಿ ಆಗಲು ಬಯಸಿದ್ರು ಸಮಂತಾ, ಆದರೆ..’; ನಾಗ ಚೈತನ್ಯ ಜತೆಗಿನ ಡಿವೋರ್ಸ್​ ಬಳಿಕ ನಿರ್ಮಾಪಕಿ ಅಚ್ಚರಿ ಹೇಳಿಕೆ

ಕೊವಿಡ್ ಪರಿಹಾರ ಪಡೆಯಲು ಸ್ವಂತ ಡೆತ್ ಸರ್ಟಿಫಿಕೇಟ್ ನೀಡಿದ ಭೂಪ; ಪೊಲೀಸರಿಂದ ಪಾರಾಗಲೂ ಯೋಜನೆ ರೂಪಿಸಿದ್ದ

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ