Rajasthan Accident: ಭೀಕರ ರಸ್ತೆ ಅಪಘಾತ: ಕಾಂಗ್ರೆಸ್ ನಾಯಕ ಮನ್ವೇಂದ್ರ ಸಿಂಗ್ ಜಸೋಲ್ ಪತ್ನಿ ಚಿತ್ರಾ ಸಿಂಗ್ ಸಾವು

Manvendra Singh Jasol: ಖುಷ್ಪುರಿ ಗ್ರಾಮದ ಬಳಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ಸಂಭವಿಸಿದೆ. ಕಾಂಗ್ರೆಸ್ ನಾಯಕ ತನ್ನ ಕುಟುಂಬದೊಂದಿಗೆ ದೆಹಲಿಯಿಂದ ಜೈಪುರಕ್ಕೆ ಪ್ರಯಾಣಿಸುತ್ತಿದ್ದಾಗ ರಸ್ತೆ ಅಪಘಾತ ಸಂಭವಿಸಿದ್ದು, ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Rajasthan Accident: ಭೀಕರ ರಸ್ತೆ ಅಪಘಾತ: ಕಾಂಗ್ರೆಸ್ ನಾಯಕ ಮನ್ವೇಂದ್ರ ಸಿಂಗ್ ಜಸೋಲ್ ಪತ್ನಿ ಚಿತ್ರಾ ಸಿಂಗ್ ಸಾವು
ರಸ್ತೆ ಅಪಘಾತ
Follow us
ರಶ್ಮಿ ಕಲ್ಲಕಟ್ಟ
|

Updated on:Jan 30, 2024 | 8:19 PM

ಅಲ್ವಾರ್ ಜನವರಿ 30: ರಾಜಸ್ಥಾನದ (Rajasthan) ಅಲ್ವಾರ್ ಬಳಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಕಾಂಗ್ರೆಸ್ ನಾಯಕ ಮನ್ವೇಂದ್ರ ಸಿಂಗ್ ಜಸೋಲ್ (Manvendra Singh Jasol) ಅವರ ಪತ್ನಿ ಚಿತ್ರಾ ಸಿಂಗ್ ಸಾವಿಗೀಡಾಗಿದ್ದಾರೆ. ಅಪಘಾತದ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಅವರ ಪುತ್ರ ಸೋಲಂಕಿ ಸಿಂಗ್ ಕೂಡ ಕಾರಿನಲ್ಲಿದ್ದರು. ಇವರಿಬ್ಬರಿಗೆ ತೀವ್ರವಾಗಿ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಖುಷ್ಪುರಿ ಗ್ರಾಮದ ಬಳಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ಸಂಭವಿಸಿದೆ. ಕಾಂಗ್ರೆಸ್ ನಾಯಕ ತನ್ನ ಕುಟುಂಬದೊಂದಿಗೆ ದೆಹಲಿಯಿಂದ ಜೈಪುರಕ್ಕೆ ಪ್ರಯಾಣಿಸುತ್ತಿದ್ದಾಗ ರಸ್ತೆ ಅಪಘಾತ ಸಂಭವಿಸಿದ್ದು, ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನ್ವೇಂದ್ರ ಸಿಂಗ್ ಜಸೋಲ್ ಅವರು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಕಳೆದ ಎರಡು ವರ್ಷಗಳಿಂದ ಕೇಂದ್ರ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ ಮಾಜಿ ಬಿಜೆಪಿ ನಾಯಕ ಜಸ್ವಂತ್ ಸಿಂಗ್ ಜಸೋಲ್ ಅವರ ಪುತ್ರರಾಗಿದ್ದಾರೆ. ಮನ್ವೇಂದ್ರ ಅವರು ಬಿಜೆಪಿ ಟಿಕೆಟ್‌ನಿಂದ 2004 ಮತ್ತು 2009 ರ ನಡುವೆ ಬಾರ್ಮರ್‌ನಿಂದ ಸಂಸದರಾಗಿ ಸೇವೆ ಸಲ್ಲಿಸಿದರು. 2018 ರಲ್ಲಿ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಮುನ್ನ ಅವರು ಬಿಜೆಪಿ ತೊರೆದಿದ್ದರು.

ರಾಜಕೀಯ ಮುಖಂಡರಿಂದ ಸಂತಾಪ

ಮನ್ವೇಂದ್ರ ಸಿಂಗ್ ಜಸೋಲ್ ಅವರ ಪತ್ನಿ ನಿಧನಕ್ಕೆ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದು, ಕಾಂಗ್ರೆಸ್ ನಾಯಕರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

“ರಸ್ತೆ ಅಪಘಾತದಲ್ಲಿ ಮನ್ವೇಂದ್ರ ಸಿಂಗ್ ಜಸೋಲ್ ಅವರ ಪತ್ನಿ ಶ್ರೀಮತಿ ಚಿತ್ರಾ ಸಿಂಗ್ ಅವರ ನಿಧನದ ಸುದ್ದಿ ದುಃಖಕರವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಮತ್ತು ಕುಟುಂಬಕ್ಕೆ ಧೈರ್ಯ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ  ಮನ್ವೇಂದ್ರ ಸಿಂಗ್ ಜಸೋಲ್ ಮತ್ತು ಇತರ ಕುಟುಂಬ ಸದಸ್ಯರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಇದನ್ನೂ ಓದಿರಾಜಸ್ಥಾನ: 52 ಮಕ್ಕಳಿದ್ದ ಶಾಲಾ ಬಸ್​ ಟ್ರಕ್​ಗೆ ಡಿಕ್ಕಿ, ಇಬ್ಬರು ವಿದ್ಯಾರ್ಥಿನಿಯರು ಸಾವು

ರಸ್ತೆ ಅಪಘಾತದಲ್ಲಿ ಮಾಜಿ ಸಂಸದ ಮನ್ವೇಂದ್ರ ಜಿ ಮತ್ತು ಅವರ ಕುಟುಂಬ ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಮನ್ವೇಂದ್ರ ಸಿಂಗ್  ಜಿ ಮತ್ತು ಅವರ ಪುತ್ರ ಸೇರಿದಂತೆ ಅಪಘಾತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಮನ್ವೇಂದ್ರ ಸಿಂಗ್ ಜಸೋಲ್ ಜಿ ಅವರ ಪತ್ನಿಯರ ಸಾವಿನ ಸುದ್ದಿಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಚಿತ್ರಾ ಸಿಂಗ್ ಜೀ ಅವರಿಗೆ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ದೇವರು ಅಗಲಿದ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ಈ ನಷ್ಟವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಹಿರಿಯ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ.

“ದಿಲ್ಲಿ-ಮುಂಬೈ ಹೆದ್ದಾರಿಯಲ್ಲಿ ನೌಗಾಂವ್ (ಹರಿಯಾಣ)ದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಾರ್ಮರ್-ಜೈಸಲ್ಮೇರ್ ಮಾಜಿ ಸಂಸದ ಮನ್ವೇಂದ್ರ ಸಿಂಗ್ ಜಿ ಅವರ ಪತ್ನಿಯ ನಿಧನದ ಸುದ್ದಿಯನ್ನು ಕೇಳಲು ನನಗೆ ತುಂಬಾ ದುಃಖವಾಗಿದೆ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ. ಮನ್ವೇಂದ್ರ ಸಿಂಗ್ ಜಿ ಮತ್ತು ಅವರ ಪುತ್ರನಿಗೆ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಭಗವಾನ್ ಶ್ರೀರಾಮನಲ್ಲಿ ಪ್ರಾರ್ಥನೆ,” ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:17 pm, Tue, 30 January 24