Uttar Pradesh Elections ಕೃಷಿ ಸಾಲ, ಕಬ್ಬು ಬೆಳೆಯುವ ರೈತರ ಬಾಕಿ ಮನ್ನಾ ಮಾಡುವ ಭರವಸೆ ನೀಡಿದ ಪ್ರಿಯಾಂಕಾ ಗಾಂಧಿ

“ಕೃಷಿ ಕಾನೂನುಗಳ ವಿರುದ್ಧದ ಆಂದೋಲನದಲ್ಲಿ ಸಾವನ್ನಪ್ಪಿದ ರೈತರಿಗೆ ಪ್ರಧಾನಿ ಯಾವುದೇ ಗೌರವವನ್ನು ನೀಡಲಿಲ್ಲ. ಕಬ್ಬು ಬೆಳೆಯುವ ರೈತರ ಎಲ್ಲಾ ಬಾಕಿ ಪಾವತಿಗೆ ಕೇವಲ ₹ 4,000 ಕೋಟಿ ಬೇಕಾಗುತ್ತದೆ. ಕೊವಿಡ್ -19 ಸಾಂಕ್ರಾಮಿಕದ ಮಧ್ಯೆ ಮೋದಿ ಕಳೆದ ವರ್ಷ ₹ 8,000 ಕೋಟಿಗೆ ಖಾಸಗಿ ವಿಮಾನಗಳನ್ನು ಖರೀದಿಸಿದರು

Uttar Pradesh Elections ಕೃಷಿ ಸಾಲ, ಕಬ್ಬು ಬೆಳೆಯುವ ರೈತರ ಬಾಕಿ ಮನ್ನಾ ಮಾಡುವ ಭರವಸೆ ನೀಡಿದ ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 02, 2021 | 11:08 PM

ಲಖನೌ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ (Uttar Pradesh Election) ಪೂರ್ವಭಾವಿಯಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಗುರುವಾರ ಹಲವು ಭರವಸೆಗಳನ್ನು ನೀಡಿದ್ದಾರೆ. ಕಾಂಗ್ರೆಸ್ 20 ಲಕ್ಷ ಉದ್ಯೋಗಗಳನ್ನು ನೀಡಲಿದೆ ಎಂದು ಹೇಳಿದ ಪ್ರಿಯಾಂಕಾ ಗಾಂಧಿ ಮತ್ತು ಪ್ರತಿ ಜಿಲ್ಲೆಯೂ ತಯಾರಿಕಾ ಕೇಂದ್ರ ಹೊಂದಲಿದೆ ಎಂದಿದ್ದಾರೆ. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ (Moradabad) ಪ್ರತಿಜ್ಞಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಅಭಿವೃದ್ಧಿಯ ಆಧಾರದ ಮೇಲೆ ಕಾಂಗ್ರೆಸ್ ಚುನಾವಣೆ ಎದುರಿಸಲಿದೆ. 20 ಲಕ್ಷ ಉದ್ಯೋಗ ನೀಡಲಿದ್ದೇನೆ. ಪ್ರತಿ ಜಿಲ್ಲೆಯಲ್ಲೂ ಉತ್ಪಾದನಾ ಕೇಂದ್ರಗಳನ್ನು ತೆರೆಯಲಾಗುವುದು  ಎಂದು ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 2020 ರಲ್ಲಿ ಸಂಸತ್​​ನ ಮುಂಗಾರು ಅಧಿವೇಶನದಲ್ಲಿ ಪರಿಚಯಿಸಲಾದ ಈಗ ರದ್ದಾದ ಕೃಷಿ ಕಾನೂನುಗಳ ವಿರುದ್ಧದ ಆಂದೋಲನದ ಸಮಯದಲ್ಲಿ ಸಾವನ್ನಪ್ಪಿದ ರೈತರ ಬಗ್ಗೆ ಮೋದಿ ಗೌರವವನ್ನು ತೋರಿಸಲಿಲ್ಲ ಎಂದು ಪ್ರಿಯಾಂಕಾ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

“ಕೃಷಿ ಕಾನೂನುಗಳ ವಿರುದ್ಧದ ಆಂದೋಲನದಲ್ಲಿ ಸಾವನ್ನಪ್ಪಿದ ರೈತರಿಗೆ ಪ್ರಧಾನಿ ಯಾವುದೇ ಗೌರವವನ್ನು ನೀಡಲಿಲ್ಲ. ಕಬ್ಬು ಬೆಳೆಯುವ ರೈತರ ಎಲ್ಲಾ ಬಾಕಿ ಪಾವತಿಗೆ ಕೇವಲ ₹ 4,000 ಕೋಟಿ ಬೇಕಾಗುತ್ತದೆ. ಕೊವಿಡ್ -19 ಸಾಂಕ್ರಾಮಿಕದ ಮಧ್ಯೆ ಮೋದಿ ಕಳೆದ ವರ್ಷ ₹ 8,000 ಕೋಟಿಗೆ ಖಾಸಗಿ ವಿಮಾನಗಳನ್ನು ಖರೀದಿಸಿದರು. ಸಂಸತ್ ಸುಂದರಗೊಳಿಸಲು  ಕೇಂದ್ರವು ₹ 20,000 ಕೋಟಿ ಪಾವತಿಸುತ್ತಿದೆ. ಆದರೆ ನಿಮ್ಮ ಬಾಕಿಯನ್ನು ಪಾವತಿಸಲು ಹಣವಿಲ್ಲ ಎಂದು ಪ್ರಿಯಾಂಕಾ ಕೇಂದ್ರ ಸರ್ಕಾರ ಮತ್ತು ಯೋಗಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಚಳಿಗಾಲದ ಬಿತ್ತನೆ ಅವಧಿಗೆ ಮುಂಚಿತವಾಗಿ ರಸಗೊಬ್ಬರಗಳನ್ನು ಪಡೆಯಲು ರೈತರು ಹೆಣಗಾಡುತ್ತಿರುವ ವಿಷಯದ ಬಗ್ಗೆ ಪ್ರಿಯಾಂಕಾ ಗಾಂಧಿ ಸರ್ಕಾರವನ್ನು ಟೀಕಿಸಿದರು. ದೇಶದ ವಿವಿಧ ಭಾಗಗಳ ರೈತರು ಪ್ರಮುಖ ಬೆಳೆ ಪೋಷಕಾಂಶಗಳನ್ನು ಖರೀದಿಸಬೇಕಾಗಿದೆ ಎಂದು ಆರೋಪಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ ವಿಶೇಷವಾಗಿ ಡಿಎಪಿ (ಡೈಅಮೋನಿಯಂ ಫಾಸ್ಫೇಟ್) ಮತ್ತು ಮ್ಯೂರಿಯೇಟ್ ಆಫ್ ಪೊಟ್ಯಾಶ್ (ಎಂಪಿಒ) ಐದು ವರ್ಷಗಳ ಕನಿಷ್ಠ ಮಟ್ಟವನ್ನು ತಲುಪಿದೆ. ಚಳಿಗಾಲದಲ್ಲಿ ಬಿತ್ತಿದ ಗೋಧಿಗೆ ಡಿಎಪಿ ಅತ್ಯಗತ್ಯ ಪೋಷಕಾಂಶವಾಗಿದೆ. ಹಿಂದೂಸ್ತಾನ್ ಟೈಮ್ಸ್ ನ ಮತ್ತೊಂದು ವರದಿಯು ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಲಲಿತ್‌ಪುರದಲ್ಲಿ ರಸಗೊಬ್ಬರವನ್ನು ಖರೀದಿಸಲು ಸರದಿಯಲ್ಲಿ ಕಾಯುತ್ತಿದ್ದಾಗ ಒಬ್ಬ ರೈತ ಸಾವನ್ನಪ್ಪಿದ್ದಾನೆ ಎಂದು ಹೇಳಿದೆ.

”ಗೊಬ್ಬರದ ತೀವ್ರ ಕೊರತೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೃತ ರೈತರಿಬ್ಬರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದೇನೆ. ರೈತರಿಂದ ಭತ್ತ ಮತ್ತು ಗೋಧಿಯನ್ನು ಕ್ವಿಂಟಲ್‌ಗೆ ₹ 2500 ಮತ್ತು ಕಬ್ಬನ್ನು ₹ 400 ದರದಲ್ಲಿ ಖರೀದಿಸುತ್ತೇವೆ. ನಾವು ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಪ್ರಿಯಾಂಕಾ ಹೇಳಿದರು.

ಇದನ್ನೂ ಓದಿ:ಕೊವಿಡ್ ಎದುರಿಸಿದ ರೀತಿ ಒಮಿಕ್ರಾನ್ ನಿಭಾಯಿಸುತ್ತೇವೆ: ಸಿಎಂ ಬಸವರಾಜ ಬೊಮ್ಮಾಯಿ