ದೆಹಲಿ: ಮೋದಿ ‘ಸರ್ನೇಮ್’ ಕುರಿತು ಬಿಜೆಪಿ ಶಾಸಕರೊಬ್ಬರು ಸಲ್ಲಿಸಿದ ಕ್ರಿಮಿನಲ್ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿಂತೆ ಹೇಳಿಕೆ ದಾಖಲಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಗುಜರಾತ್‌ನ ಸೂರತ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.ಸೂರತ್‌ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎ.ಎನ್.ಡೇವ್ ಅವರು ರಾಹುಲ್ ಗಾಂಧಿ ಅವರಿಗೆ ಒಂದು ವಾರದ ಹಿಂದೆ ಸೂರತ್‌ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಸಲ್ಲಿಸಿದ್ದ ಪ್ರಕರಣದಲ್ಲಿ ಅಂತಿಮ ಹೇಳಿಕೆ ದಾಖಲಿಸುವಂತೆ ನಿರ್ದೇಶನ ನೀಡಿದ್ದರು.
ನ್ಯಾಯಾಲಯಕ್ಕೆ ಹಾಜರಾಗುವ ಮುಂಚೆ ರಾಹುಲ್ ಗಾಂಧಿ “ಅಸ್ತಿತ್ವದ ಸಂಪೂರ್ಣ ರಹಸ್ಯವೆಂದರೆ ಭಯ ಇಲ್ಲದೇ ಇರುವುದು ಎಂದು ಟ್ವೀಟ್ ಮಾಡಿದ್ದಾರೆ.
“The whole secret of existence is to have no fear.”
— Rahul Gandhi (@RahulGandhi) June 24, 2021
2019 ರ ಏಪ್ರಿಲ್‌ನಲ್ಲಿ ಪೂರ್ಣೇಶ್ ಮೋದಿಯವರ ದೂರು ಸಲ್ಲಿಸಿದ್ದು ಇದರ ಪ್ರಕಾರ ಕಾಂಗ್ರೆಸ್ ಸಂಸದ ರಾಹುಲ್ ಚುನಾವಣೆಗೆ ಮುನ್ನ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ “ಇಡೀ ಮೋದಿ ಸಮುದಾಯವನ್ನು ದೂಷಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅವರು ಏಪ್ರಿಲ್ 13, 2019 ರಂದು ಕರ್ನಾಟಕದ ಕೋಲಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ … ಇವರೆಲ್ಲರ ಸರ್ನೇಮ್ ಮೋದಿ. ಎಲ್ಲಾ ಕಳ್ಳರಿಗೂ ಮೋದಿ ಸರ್ನೇಮ್ ಹೇಗೆ ಬಂತು ಎಂದು ಹೇಳಿದ್ದರು.
ಆ ಸಮಯದಲ್ಲಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲಿನ ನಂತರ ಅವರು ಮೇ ತಿಂಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು
ನೀರವ್ ಮೋದಿ ಮತ್ತು ಲಲಿತ್ ಮೋದಿ ಪರಾರಿಯಾಗಿದ್ದು, ಸಾಲ ವಂಚನೆ ಮತ್ತು ಆರ್ಥಿಕ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿರುವಾಗ ಇವರಿಬ್ಬರು ಭಾರತದಿಂದ ಪರಾರಿಯಾಗಿದ್ದಾರೆ.
ರಾಹುಲ್ ಗಾಂಧಿ 2019 ಅಕ್ಟೋಬರ್ ತಿಂಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದು “ತಪ್ಪಿತಸ್ಥ ಅಲ್ಲ ” ಎಂದು ಹೇಳಿದ್ದರು. ಕಾಂಗ್ರೆಸ್ ಇದನ್ನು “ಸುಳ್ಳು ಮಾನಹಾನಿ ಪ್ರಕರಣ” ಎಂದು ಕರೆದಿದೆ.
Defamation case: Rahul Gandhi arrives at Surat airport, to appear before court today#Gujarat #TV9News pic.twitter.com/9fGeg47ma5
— tv9gujarati (@tv9gujarati) June 24, 2021
ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ನಲ್ಲಿ ತಾರಕಕ್ಕೇರಿದ ಸಿಎಂ ಗಲಾಟೆ; ಖಡಕ್ ಸೂಚನೆ ನೀಡಲು ರಾಹುಲ್ಗೆ ಹಿರಿಯ ನಾಯಕರ ಒತ್ತಾಯ