AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delta Plus Variant ಭಾರತದಲ್ಲಿ ‘ಡೆಲ್ಟಾ ಪ್ಲಸ್’ ದಾಳಿಗೆ ಮೊದಲ ಬಲಿ..

ರೂಪಾಂತರಿ ವೈರಸ್ ಡೆಲ್ಟಾ ಪ್ಲಸ್ ದಾಳಿಗೆ ಭಾರತದಲ್ಲಿ ಮೊದಲ ಬಲಿಯಾಗಿದೆ. ಜಿನೋಮ್ ಟೆಸ್ಟ್ ವರದಿ ಬರುವುದಕ್ಕೂ ಮುನ್ನವೇ ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್ ಸೋಂಕಿಗೆ ಮಹಿಳೆ ಮೃತಪಟ್ಟಿದ್ದಾರೆ.

Delta Plus Variant ಭಾರತದಲ್ಲಿ ‘ಡೆಲ್ಟಾ ಪ್ಲಸ್’ ದಾಳಿಗೆ ಮೊದಲ ಬಲಿ..
ಸಾಂದರ್ಭಿಕ ಚಿತ್ರ
TV9 Web
| Edited By: ಆಯೇಷಾ ಬಾನು|

Updated on: Jun 24, 2021 | 12:55 PM

Share

ದೆಹಲಿ: ರೂಪಾಂತರಿ ವೈರಸ್ ಡೆಲ್ಟಾ ಪ್ಲಸ್ ದಾಳಿಗೆ ಭಾರತದಲ್ಲಿ ಮೊದಲ ಬಲಿಯಾಗಿದೆ. ಜಿನೋಮ್ ಟೆಸ್ಟ್ ವರದಿ ಬರುವುದಕ್ಕೂ ಮುನ್ನವೇ ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್ ಸೋಂಕಿಗೆ ಮಹಿಳೆ ಮೃತಪಟ್ಟಿದ್ದಾರೆ. ಈ ಬಗ್ಗೆ ಜೂನ್ 23ರಂದು ಬುಧವಾರ ವರದಿಯಾಗಿದೆ. ಉಜ್ಜೈನಿಯಲ್ಲಿ ಸಂಗ್ರಹಿಸಿರುವ ಸ್ಯಾಂಪಲ್ನಲ್ಲಿ ಕೊರೊನಾ ಸೋಂಕಿತೆಗೆ ಡೆಲ್ಟಾ ಪ್ಲಸ್ ಪ್ರಭೇದ ತಗುಲಿರುವುದು ಬಹಿರಂಗವಾಗಿದೆ.

ಭಾರತದಲ್ಲಿ ಎಷ್ಟು ಕೇಸ್ ಬಂದಿವೆ? ಭಾರತದಲ್ಲಿ ಇದುವರೆಗೂ 40 ಡೆಲ್ಟಾ ಪ್ಲಸ್ ಪ್ರಭೇದದ ಕೇಸ್ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ 21, ಮಧ್ಯಪ್ರದೇಶದಲ್ಲಿ 5, ಕೇರಳದಲ್ಲಿ 3, ಆಂಧ್ರ, ಜಮ್ಮು ಕಾಶ್ಮೀರದಲ್ಲಿ ತಲಾ 1 ಕೇಸ್ ಪತ್ತೆಯಾಗಿವೆ. ಹಾಗೂ ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಪತ್ತೆಯಾಗಿವೆ.

ಡೆಲ್ಟಾ ಪ್ಲಸ್ ನಿಜಕ್ಕೂ ಎಷ್ಟು ಆತಂಕಕಾರಿ? ಗುಣಲಕ್ಷಣಗಳೇನು? ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಅನ್ನು ಕೇಂದ್ರ ಸರ್ಕಾರ ಕಳವಳಕಾರಿ ಪ್ರಭೇದ ಎಂದು ಹೇಳಿದೆ. ಕಳವಳಕಾರಿ ಪ್ರಭೇದದ ವೈರಸ್ ಮೇಲೆ ತೀವ್ರ ನಿಗಾ ವಹಿಸಲಾಗುತ್ತೆ. ಡೆಲ್ಟಾ ಪ್ಲಸ್ ಪ್ರಭೇದ ವೇಗವಾಗಿ ಹರಡುತ್ತೆ ಎಂದು ಕೇಂದ್ರ ಹೇಳಿದೆ. ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಶ್ವಾಸಕೋಶಕ್ಕೆ ಹಾನಿ ಮಾಡಬಲ್ಲದು. ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ವಿರುದ್ಧ ಮಾನೋಕ್ಲೋನಲ್ ಆ್ಯಂಟಿಬಾಡಿ ಕಾಕ್ ಟೈಲ್ ಪರಿಣಾಮಕಾರಿ ಅಲ್ಲ. ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ದೇಹದಲ್ಲಿರುವ ವೈರಸ್ ವಿರುದ್ಧದ ಪ್ರತಿಕಾಯಗಳು, ಲಸಿಕೆಯಿಂದ ತಪ್ಪಿಸಿಕೊಳ್ಳಬಹುದು ಎಂದು ತಿಳಿಸಿದೆ.

ಇದನ್ನೂ ಓದಿ: Delta Plus Variant ಹಿಂದಿನ ರೂಪಾಂತರಿಗೆ ಹೋಲಿಸಿದರೆ ಡೆಲ್ಟಾ ಪ್ಲಸ್ ವೈರಸ್ ಹೆಚ್ಚು ಸಾಂಕ್ರಾಮಿಕ: ಡಾ.ರಣದೀಪ್ ಗುಲೇರಿಯಾ

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್