AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Toycathon 2021 ಸಂಪ್ರದಾಯ, ತಂತ್ರಜ್ಞಾನ ಭಾರತದ ದೊಡ್ಡ ಸಾಮರ್ಥ್ಯ: ಪ್ರಧಾನಿ ನರೇಂದ್ರ ಮೋದಿ

PM Narendra Modi: ಟಾಯ್‌ಕಥಾನ್ 2021ಗಾಗಿ ಭಾರತದಾದ್ಯಂತ ಸುಮಾರು 1.2 ಲಕ್ಷ ಭಾಗವಹಿಸುವವರು ನೋಂದಾಯಿಸಿದ್ದು  17,000 ಕ್ಕೂ ಹೆಚ್ಚು ವಿಚಾರಗಳನ್ನು ಸಲ್ಲಿಸಿದ್ದಾರೆ

Toycathon 2021 ಸಂಪ್ರದಾಯ, ತಂತ್ರಜ್ಞಾನ ಭಾರತದ ದೊಡ್ಡ ಸಾಮರ್ಥ್ಯ: ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jun 24, 2021 | 12:05 PM

Share

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ವಿಡಿಯೊ ಸಂವಾದ ಮೂಲಕ ಟಾಯ್‌ಕಥಾನ್ 2021 ರಲ್ಲಿ ಸ್ಪರ್ಧಾಳುಗಳೊಂದಿಗೆ ಸಂವಾದ ನಡೆಸಿದ್ದಾರೆ. ಟಾಯ್‌ಕಥಾನ್ 2021 ಗಾಗಿ ಭಾರತದಾದ್ಯಂತ ಸುಮಾರು 1.2 ಲಕ್ಷ ಭಾಗವಹಿಸುವವರು ನೋಂದಾಯಿಸಿದ್ದು  17,000 ಕ್ಕೂ ಹೆಚ್ಚು ವಿಚಾರಗಳನ್ನು ಸಲ್ಲಿಸಿದ್ದಾರೆ. ಅದರಲ್ಲಿ 1,567 ಆಲೋಚನೆಗಳನ್ನು ಮೂರು ದಿನಗಳ ಆನ್‌ಲೈನ್ ಟಾಯ್‌ಕಥಾನ್ ಗ್ರ್ಯಾಂಡ್ ಫಿನಾಲೆಗಾಗಿ ಶಾರ್ಟ್​ಲಿಸ್ಟ್ ಮಾಡಲಾಗಿದೆ. ಇದು ಜೂನ್ 22 ರಿಂದ ಜೂನ್ 24 ರವರೆಗೆ ನಡೆಯಲಿದೆ.

ಸಂವಾದದಲ್ಲಿ ಮೋದಿ ಸಂಪ್ರದಾಯ ಮತ್ತು ತಂತ್ರಜ್ಞಾನವು ಭಾರತದ ದೊಡ್ಡ ಸಾಮರ್ಥ್ಯಗಳಾಗಿವೆ. ಹೊಸತನವನ್ನು ಮುಂದುವರಿಸಿ, ನನ್ನ ಶುಭಾಶಯಗಳು ನಿಮ್ಮೊಂದಿಗಿದೆ  ಎಂದು ಹೇಳಿದ್ದಾರೆ.  ತಮಿಳುನಾಡು, ಉತ್ತರ ಪ್ರದೇಶ, ಹರ್ಯಾಣ ಮೊದಲಾದ ರಾಜ್ಯಗಳ ಸ್ಪರ್ಧಿಗಳನ್ನು ಶ್ಲಾಘಿಸಿದ ಮೋದಿ ಇವರು ಭಾರತದ ಇತಿಹಾಸ, ಪುರಾಣ ಮತ್ತು ಪ್ರಸ್ತುತ ನಡೆಯುತ್ತಿರುವ ಕೊರೊನಾವೈರಸ್ ಕಾಯಿಲೆ (ಕೊವಿಡ್ -19) ಸಾಂಕ್ರಾಮಿಕವನ್ನು ಆಧರಿಸಿ ತಮ್ಮ ಡಿಜಿಟಲ್ ಆಟಿಕೆ ವಿಚಾರಗಳನ್ನು ಮಂಡಿಸಿದ್ದಾರೆ ಎಂದಿದ್ದಾರೆ.

ಎಡ್ಯುಕೇಷನ್ ಇನೊವೇಷನ್ ಸೆಲ್  ಭಾಗವಹಿಸುವ 1567ತಂಡಗಳಿಗೆ 645 ಮಾರ್ಗದರ್ಶಕರು ಮತ್ತು ಮೌಲ್ಯಮಾಪಕರನ್ನು ನೀಡಿದೆ. ಶಿಕ್ಷಣ ಸಚಿವಾಲಯದ ಇನೊವೇಷನ್ ಸೆಲ್  ಮತ್ತು ತಾಂತ್ರಿಕ ಶಿಕ್ಷಣಕ್ಕಾಗಿ ಅಖಿಲ ಭಾರತ ಕೌನ್ಸಿಲ್ ಅನ್ನು ಬೆಂಬಲಿಸಲು 85 ನೋಡಲ್ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ.ಇವು ಈ ಅಂತರ್-ಸಚಿವಾಲಯ ಟಾಯ್‌ಕಥಾನ್‌ನ ಸಂಘಟನಾ ಸಂಸ್ಥೆಗಳಾಗಿವೆ.

ಹ್ಯಾಕಥಾನ್ ಅನ್ನು ಆರಂಭದಲ್ಲಿ ಫಿಸಿಕಲ್ ಮತ್ತು ಡಿಜಿಟಲ್ ಮೋಡ್‌ನಲ್ಲಿ ಕಲ್ಪಿಸಲಾಗಿತ್ತು. ಕೊವಿಡ್ ಸಾಂಕ್ರಾಮಿಕದ ನಡುವೆ ಭಾಗವಹಿಸುವವರ ಸುರಕ್ಷತೆಯ ಕಾರಣದಿಂದಾಗಿ ಫಿಸಿಲ್ ಆವೃತ್ತಿಯನ್ನು ಮುಂದೂಡಲಾಗಿದೆ. ಈಗ ಕೇವಲ ಡಿಜಿಟಲ್ ಆವೃತ್ತಿಯನ್ನು ಜೂನ್ 22 ರಿಂದ 2021 ರ ಜೂನ್ 24 ರವರೆಗೆ ನಡೆಸಲಾಗುತ್ತಿದೆ.

ಟಾಯ್‌ಕಥಾನ್ 2021 ಅನ್ನು ಶಿಕ್ಷಣ ಸಚಿವಾಲಯ, ಡಬ್ಲ್ಯುಸಿಡಿ ಸಚಿವಾಲಯ, ಎಂಎಸ್‌ಎಂಇ ಸಚಿವಾಲಯ, ಡಿಪಿಐಐಟಿ, ಜವಳಿ ಸಚಿವಾಲಯ, ಮಾಹಿತಿ ಮತ್ತು ಪ್ರಸಾರಾಂಗ ಸಚಿವಾಲಯ ಮತ್ತು ಎಐಸಿಟಿಇ ಜಂಟಿಯಾಗಿ ಜನವರಿ 5, 2021 ರಂದು ಜನಸಮೂಹ ಮೂಲದ ನವೀನ ಆಟಿಕೆಗಳು ಮತ್ತು ಆಟಗಳ ವಿಚಾರಗಳಿಗಾಗಿ ಪ್ರಾರಂಭಿಸಿದೆ ಎಂದು ಪ್ರಧಾನಿ ಕಚೇರಿ ಹೇಳಿದೆ.

ಭಾರತದ ದೇಶೀಯ ಮಾರುಕಟ್ಟೆ, ಮತ್ತು ಜಾಗತಿಕ ಆಟಿಕೆ ಮಾರುಕಟ್ಟೆ ನಮ್ಮ ಉತ್ಪಾದನಾ ಕ್ಷೇತ್ರಕ್ಕೆ ಒಂದು ದೊಡ್ಡ ಅವಕಾಶವನ್ನು ನೀಡುತ್ತದೆ. ಜಾಗತಿಕವಾಗಿ, ಆಟಿಕೆ ತಯಾರಿಕೆಯು 10000 ಕೋಟಿ  ಡಾಲರ್ ಉದ್ಯಮವಾಗಿದ್ದು, ಚೀನಾ, ಯುಎಸ್ಎ, ಜರ್ಮನಿ ಮತ್ತು ಜಪಾನ್ ಪ್ರಮುಖ ದೇಶಗಳಾಗಿವೆ. ಭಾರತ ತನ್ನ ವಾರ್ಷಿಕ 150 ಕೋಟಿ ಡಾಲರ್  ಬಿಲಿಯನ್ ಆಟಿಕೆ ಮಾರುಕಟ್ಟೆಯಲ್ಲಿ ಶೇ 80 ರಿಂದ 85 ರಷ್ಟು ಆಮದು ಮಾಡಿಕೊಳ್ಳುತ್ತದೆ.

ದೊಡ್ಡ ದೈತ್ಯರಿಗೆ ಹೋಲಿಸಿದರೆ, ಭಾರತೀಯ ಆಟಿಕೆಗಳು ಜಾಗತಿಕ ಮಾರುಕಟ್ಟೆಯಲ್ಲಿ ಕಡಿಮೆ ಇರುವಿಕೆಯನ್ನು ಹೊಂದಿವೆ. ಟಾಯ್‌ಕಥಾನ್ 2021 ಆಟಿಕೆ ಮಾರುಕಟ್ಟೆಯ ವ್ಯಾಪಕ ಪಾಲನ್ನು ಸೆರೆಹಿಡಿಯಲು ಸಹಾಯ ಮಾಡಲು ಭಾರತದಲ್ಲಿ ಆಟಿಕೆ ಉದ್ಯಮವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ನರೇಂದ್ರ ಮೋದಿ ಪ್ರಕಟಿಸಿದ್ದ ಉಚಿತ ಪಡಿತರ ವಿತರಣೆ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಸಚಿವ ಸಂಪುಟ

(Prime Minister Narendra Modi held an interaction with the participants of Toycathon 2021)

Published On - 11:44 am, Thu, 24 June 21

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ