ದೆಹಲಿ/ವಾಷಿಂಗ್ಟನ್: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ (Lok Sabha Election) ನಂತರ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಸಂಯುಕ್ತ ಪ್ರತಿಪಕ್ಷದ ಸಾಮರ್ಥ್ಯದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಗುರುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ನಿನ್ನೆ ವಾಷಿಂಗ್ಟನ್‌ನ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ (National Press Club) ಪತ್ರಕರ್ತರೊಂದಿಗೆ ನಡೆಸಿದ ಸಂವಾದದಲ್ಲಿ ಈ ಮಾತು ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವ ಉತ್ತಮ ಪ್ರದರ್ಶನ ನೀಡಲಿದೆ ಎಂದು ನಾನು ಭಾವಿಸುತ್ತೇನೆ. ಇದು ಜನರಿಗೆ ಆಶ್ಚರ್ಯವನ್ನುಂಟು ಮಾಡಲಿದೆ. ಲೆಕ್ಕಾಚಾರ ಮಾಡಿ ನೋಡಿ, ಒಗ್ಗಟ್ಟಿನ ಪ್ರತಿಪಕ್ಷವು ಬಿಜೆಪಿಯನ್ನು ಸೋಲಿಸುತ್ತದೆ ಎಂದಿದ್ದಾರೆ ರಾಹುಲ್. ಸಂಸತ್ ಚುನಾವಣೆಗೆ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಿದ್ದು, ಕಾಂಗ್ರೆಸ್ ಇತರ ವಿರೋಧ ಪಕ್ಷಗಳೊಂದಿಗೆ ನಿಯಮಿತವಾಗಿ ಮಾತುಕತೆ ನಡೆಸುತ್ತಿದೆ ಎಂದು ಹೇಳಿದರು.
ಪ್ರತಿಪಕ್ಷಗಳು ಒಗ್ಗಟ್ಟಾಗಿವೆ. ನಾವು ಎಲ್ಲಾ ಪ್ರತಿಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಅಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಿವೆ ಎಂದು ನಾನು ಭಾವಿಸುತ್ತೇನೆ. ಇದು ಸಂಕೀರ್ಣವಾದ ಚರ್ಚೆಯಾಗಿದೆ ಏಕೆಂದರೆ ನಾವು ಪ್ರತಿಪಕ್ಷಗಳೊಂದಿಗೆ ಸ್ಪರ್ಧಿಸುವ ಸ್ಥಳಗಳಿವೆ. ಆದ್ದರಿಂದ ಸ್ವಲ್ಪ ಕೊಡುವ ಮತ್ತು ತೆಗೆದುಕೊಳ್ಳುವ ಅಗತ್ಯವಿದೆ ಅವರು ಹೇಳಿದರು. ಅಲ್ಲಿ ಮಹಾ ವಿರೋಧ ಪಕ್ಷದ ಮೈತ್ರಿಸಂಭವಿಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದರು.
ಸರ್ಕಾರವು ಸಂಸ್ಥೆಗಳನ್ನು ವಶಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಈ ಹಿಂದೆ ವಿವಿಧ ವಿರೋಧ ಪಕ್ಷದ ನಾಯಕರು ಇದನ್ನೇ ಆರೋಪಿಸಿದ್ದಾರೆ. ಇದನ್ನು ಆಡಳಿತ ಪಕ್ಷ ನಿರಾಕರಿಸಿದೆ,
ಏತನ್ಮಧ್ಯೆ, ಗಾಂಧಿಯವರ ಅಮೆರಿಕ ಪ್ರವಾಸವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ರಾಹುಲ್ ಗಾಂಧಿಗೆ ವಿದೇಶದಲ್ಲಿ ಮಾತನಾಡಲು ಏಕೆ ಆಹ್ವಾನವಿದೆ, ಆದರೆ ದೇಶದ ಸಂಘಟನೆಗಳಿಂದ ಇಲ್ಲ, ಇದನ್ನು ನೀವೇ ಯೋಚಿಸಿ ಎಂದಿದೆ.
ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾಗಿ ಸಂಸತ್ತಿನ ಸದಸ್ಯತ್ವವನ್ನು ಕಳೆದುಕೊಂಡಿರುವ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಇದರಿಂದ ನನಗೆ ಅನುಕೂಲ ಆಗಿದೆ ಎಂದಿದ್ದಾರೆ. ಇದು ನನ್ನನ್ನು ಸಂಪೂರ್ಣವಾಗಿ ಮರು ವ್ಯಾಖ್ಯಾನಿಸಲು ಅನುವು ಮಾಡಿಕೊಡುತ್ತದೆ. ಅವರು ನನಗೆ ಉಡುಗೊರೆ ನೀಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ ರಾಹುಲ್. ಅದೇ ವೇಳೆ
ನಾನು ಜೀವ ಬೆದರಿಕೆಗಳಿಂದ ಹಿಂದೆ ಸರಿಯುವುದು ಇಲ್ಲ ಎಂದು ರಾಹುಲ್ ಹೇಳಿದ್ದಾರೆ.
ಹತ್ಯೆ ಬೆದರಿಕೆಗಳ ಬಗ್ಗೆ ನಾನು ಚಿಂತಿಸುವುದಿಲ್ಲ. ಎಲ್ಲರೂ ಸಾಯಬೇಕು. ಅಂತಹ ಕಾರಣದಿಂದ ನೀವು ಹಿಂದೆ ಸರಿಯಬೇಡಿ ಎಂಬುದನ್ನು ನಾನು ನನ್ನ ಅಜ್ಜಿ ಮತ್ತು ತಂದೆಯಿಂದ ಕಲಿತಿದ್ದೇನೆ ಎಂದಿದ್ದಾರೆ ರಾಹುಲ್.
ರಾಹುಲ್ ಅವರ ಅಜ್ಜಿ ಇಂದಿರಾ ಗಾಂಧಿ ಅವರನ್ನು 1984 ರಲ್ಲಿ ಅವರ ಅಂಗರಕ್ಷಕರೇ ಹತ್ಯೆ ಮಾಡಿದರು. ಅವರ ತಂದೆ ರಾಜೀವ್ ಗಾಂಧಿ 1991 ರಲ್ಲಿ ಆತ್ಮಹತ್ಯಾ ದಾಳಿಯಲ್ಲಿ ಕೊಲ್ಲಲ್ಪಟ್ಟರು. ಇಬ್ಬರೂ ಮಾಜಿ ಪ್ರಧಾನಿಗಳು. ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸಕ್ಕೆ ಕೈಗೊಳ್ಳುವ ವಾರಕ್ಕಿಂತ ಮುನ್ನ ರಾಹುಲ್ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:45 pm, Fri, 2 June 23