ಮಮತಾ ಬ್ಯಾನರ್ಜಿ ಬೆನ್ನಲ್ಲೇ ಗೋವಾಕ್ಕೆ ತೆರಳಿದ ರಾಹುಲ್ ಗಾಂಧಿ; ಇಂದು ಮೀನುಗಾರರೊಂದಿಗೆ ಮಾತುಕತೆ

| Updated By: Lakshmi Hegde

Updated on: Oct 30, 2021 | 10:41 AM

ಗೋವಾದಲ್ಲಿ ಸದ್ಯ ಬಿಜೆಪಿ ಸರ್ಕಾರವಿದೆ. 2022ಕ್ಕೆ ಅದರ ಅವಧಿ ಮುಗಿಯಲಿದ್ದು ಫೆಬ್ರವರಿ-ಮಾರ್ಚ್​​ನಲ್ಲಿ ಚುನಾವಣೆ ನಡೆಯಲಿದೆ. ಗೋವಾದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಬಿಡಬಾರದು ಎಂದು ಕಾಂಗ್ರೆಸ್​, ತೃಣಮೂಲ ಕಾಂಗ್ರೆಸ್​ ಸೇರಿ ವಿವಿಧ ಪಕ್ಷಗಳು ಪಣತೊಟ್ಟಿವೆ.

ಮಮತಾ ಬ್ಯಾನರ್ಜಿ ಬೆನ್ನಲ್ಲೇ ಗೋವಾಕ್ಕೆ ತೆರಳಿದ ರಾಹುಲ್ ಗಾಂಧಿ; ಇಂದು ಮೀನುಗಾರರೊಂದಿಗೆ ಮಾತುಕತೆ
ರಾಹುಲ್ ಗಾಂಧಿ
Follow us on

2022ರಲ್ಲಿ ನಡೆಯಲಿರುವ ಗೋವಾ ವಿಧಾನಸಭೆ ಚುನಾವಣೆ(Goa Assembly Election)ಗೆ ರಾಜಕೀಯ ಪಕ್ಷಗಳ ಸಿದ್ಧತೆ ಶುರುವಾಗಿದೆ. ತೃಣಮೂಲ ಕಾಂಗ್ರೆಸ್​ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಗೋವಾ ಪ್ರವಾಸ ಮಾಡಿ, ಅಲ್ಲಿ ಬಿಜೆಪಿ ವಿರುದ್ಧ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಇಲ್ಲಿಯೂ ದಾದಾಗಿರಿ ನಡೆಸಲು ಬಿಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ(Congress MP Rahul Gandhi) ಇಂದು ಗೋವಾಕ್ಕೆ ತೆರಳಲಿದ್ದು,  ಅಲ್ಲಿ ಮೀನುಗಾರರ  ಸಮುದಾಯದೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅದರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರೊಟ್ಟಿಗೆ ಕೂಡ ಅವರು ಸಂವಾದ ನಡೆಸಲಿದ್ದಾರೆ.  

ಶುಕ್ರವಾರ ಕಾಂಗ್ರೆಸ್​ ಪಕ್ಷ ಈ ಬಗ್ಗೆ ಸರಣಿ ಟ್ವೀಟ್ ಮಾಡಿದೆ.  ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರು ಶನಿವಾರ ಗೋವಾಕ್ಕೆ ಆಗಮಿಸಲಿದ್ದಾರೆ. ಇಲ್ಲಿನ ಮೀನುಗಾರರನ್ನು ಭೇಟಿಯಾಗಲಿದ್ದಾರೆ. ಇಲ್ಲಿನ ಮೀನುಗಾರರು ರಾಹುಲ್​ ಜೀ ಅವರಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಿತ್ತು.  ಒಂದೆರಡು ಮೀನುಗಾರರನ್ನು ಮಾತನಾಡಿಸಿ, ವಿಡಿಯೋವನ್ನು ಕಾಂಗ್ರೆಸ್​ ಶೇರ್ ಮಾಡಿದೆ.

ಗೋವಾದಲ್ಲಿ ಸದ್ಯ ಬಿಜೆಪಿ ಸರ್ಕಾರವಿದೆ. 2022ಕ್ಕೆ ಅದರ ಅವಧಿ ಮುಗಿಯಲಿದ್ದು ಫೆಬ್ರವರಿ-ಮಾರ್ಚ್​​ನಲ್ಲಿ ಚುನಾವಣೆ ನಡೆಯಲಿದೆ. ಗೋವಾದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಬಿಡಬಾರದು ಎಂದು ಕಾಂಗ್ರೆಸ್​, ತೃಣಮೂಲ ಕಾಂಗ್ರೆಸ್​ ಸೇರಿ ವಿವಿಧ ಪಕ್ಷಗಳು ಪಣತೊಟ್ಟಿವೆ. ಗೋವಾ ವಿಧಾನಸಭೆಯಲ್ಲಿ 40 ಸದಸ್ಯರ ಬಲವಿದೆ. ಸದ್ಯ ಬಿಜೆಪಿಯ 17 ಶಾಸಕರಿದ್ದಾರೆ. ಅದರ ಹೊರತಾಗಿ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ (MGP) , ವಿಜಯ್​ ಸರ್​ದೇಸಾಯಿ ಅವರ ಗೋವಾ ಫಾರ್ವರ್ಡ್​ ಪಾರ್ಟಿ (GFP)ಯ ಮತ್ತು ಮೂವರು ಸ್ವತಂತ್ರ ಅಭ್ಯರ್ಥಿಗಳ ಬೆಂಬಲವನ್ನು ಪಡೆದು ಅಧಿಕಾರ ನಡೆಸುತ್ತಿದೆ. ಕಾಂಗ್ರೆಸ್​​ನ 15 ಶಾಸಕರು ಸದನದಲ್ಲಿ ಇದ್ದಾರೆ.  ನಿನ್ನೆ ಮಮತಾ ಬ್ಯಾನರ್ಜಿ ಕೂಡ ಮೀನುಗಾರ ಸಮುದಾಯದ ಜತೆ ಸಂವಾದ ನಡೆಸಿದ್ದರು. ಇವರ ಸಮ್ಮುಖದಲ್ಲಿ ಖ್ಯಾತ ಟೆನ್ನಿಸ್​ ಐಕಾನ್​  ಲಿಯಾಂಡರ್ ಪೇಸ್​ ಕೂಡ ಟಿಎಂಸಿ ಸೇರಿದ್ದಾರೆ.

ಇದನ್ನೂ ಓದಿ: Orange Signal : ‘ಗುಡ್ ನ್ಯೂಸ್ ಯಾವಾಗ?’ ಹೀಗೆ ಕೇಳುವುದನ್ನು ನಿಲ್ಲಿಸುವುದು ಸೂಕ್ತ

ಅಪ್ಪುವನ್ನು ಸಹೋದರ ಎಂದೇ ಸಂಬೋಧಿಸಿ ಶಿವರಾಜ್ ಕುಮಾರ್​ಗೆ ಸಂತಾಪ ಪತ್ರ ಬರೆದ ತಮಿಳುನಾಡು ಸಿಎಂ ಸ್ಟ್ಯಾಲಿನ್