ಅಪ್ಪುವನ್ನು ಸಹೋದರ ಎಂದೇ ಸಂಬೋಧಿಸಿ ಶಿವರಾಜ್ ಕುಮಾರ್ಗೆ ಸಂತಾಪ ಪತ್ರ ಬರೆದ ತಮಿಳುನಾಡು ಸಿಎಂ ಸ್ಟಾಲಿನ್
ಪುನೀತ್ ರಾಜ್ಕುಮಾರ್ ನಿಧನಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅಪ್ಪುವನ್ನು ಸಹೋದರ ಎಂದೇ ಸಂಬೋಧಿಸಿ ಶಿವರಾಜ್ ಕುಮಾರ್ಗೆ ಸಂತಾಪ ಪತ್ರ ಬರೆದಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ನಿಧನದಿಂದ ಇಡೀ ಚಿತ್ರರಂಗ ಶಾಕ್ಗೆ ಒಳಗಾಗಿದೆ. ಸದಾ ಹಸನ್ಮುಖಿಯಾಗಿದ್ದ ನಗು ಮರೆಯಾಗಿದೆ ಮಗುವಂತಹ ಮಾತುಗಳಿಂದ ಎಲ್ಲರಿಗೂ ಹತ್ತಿರವಾಗುತ್ತಿದ್ದ ಮಾತುಗಳು ಮೌನಕ್ಕೆ ಶರಣಾಗಿದೆ ಎಂಬ ಸತ್ಯವನ್ನು ನಂಬಲು ಅಸಾಧ್ಯವಾಗುತ್ತಿದೆ. ಪುನೀತ್ ರಾಜ್ ಕುಮಾರ್ ನಿಧನಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅಪ್ಪುವನ್ನು ಸಹೋದರ ಎಂದೇ ಸಂಬೋಧಿಸಿ ಶಿವರಾಜ್ ಕುಮಾರ್ಗೆ ಸಂತಾಪ ಪತ್ರ ಬರೆದಿದ್ದಾರೆ.
ತಮ್ಮ ಸಹೋದರ ಪುನೀತ್ರ ದಿಢೀರ್ ಸಾವು ನನಗೆ ಭರಿಸಲಾಗದ ನೋವುಂಟು ಮಾಡಿದೆ. ಸಂತಾಪ ಸೂಚಿಸಲು ನನಗೆ ಮಾತೇ ಬರುತ್ತಿಲ್ಲ. ನಮ್ಮ ಎರಡೂ ಕುಟುಂಬಗಳು ಹಲವು ದಶಕಗಳಿಂದ ಸೌಹಾರ್ದಯುತ ಬಾಂಧವ್ಯವನ್ನು ಹೊಂದಿದೆ. ನನಗೆ ಪುನೀತ್ ಅಗಲಿಕೆ ವೈಯಕ್ತಿಕವಾಗಿ ನಷ್ಟವನ್ನುಂಟು ಮಾಡಿದೆ.
ನನ್ನ ತಂದೆ ಕರುಣಾನಿಧಿ ಅವರ ಸಾವಿಗೆ ಸಂತಾಪ ಸೂಚಿಸಲು ಗೋಪಾಲಪುರಂಗೆ ಬಂದಿದ್ದ ಪುನೀತ್ರ ಆ ಕ್ಷಣಗಳು ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ದಯಬಿಟ್ಟು ನನ್ನ ಸಂತಾಪವನ್ನು ತಮ್ಮ ಕುಟುಂಬಕ್ಕೆ ಮತ್ತು ಕರ್ನಾಟಕದ ಜನತೆಗೆ ತಿಳಿಸಿ. ಕರ್ನಾಟಕವು ಅಮೂಲ್ಯವಾದ ರತ್ನವನ್ನು ಮಾನವತಾವಾದಿಯನ್ನು ಕಳೆದುಕೊಂಡಿದೆ. ಅಪ್ಪು ನಮ್ಮ ಮಧ್ಯೆ ಇಲ್ಲವಾದರೂ ಅವರ ನೆನೆಪು ಸದಾ ನಮ್ಮೊಂದಿಗೆ ಇರುತ್ತದೆ. ದಿ. ರಾಜ್ಕುಮಾರ್ರ ಹಿರಿಯ ಮಗನಾದ ನೀವು ಈ ಕಹಿ ಗಳಿಗೆಯಲ್ಲಿ ಆತ್ಮಸ್ಥರ್ಯ ತುಂಬಿಕೊಂಡು ಕುಟುಂಬಸ್ಥರೊಂದಿಗೆ ನಿಲ್ಲುತ್ತೀರಿ ಎಂದು ಭಾವಿಸುತ್ತೇನೆ ಎಂದು ಎಂ.ಕೆ ಸ್ಟಾಲಿನ್ ಅಪ್ಪುವನ್ನು ಸಹೋದರ ಎಂದೇ ಸಂಬೋಧಿಸಿ ಶಿವರಾಜ್ ಕುಮಾರ್ಗೆ ಸಂತಾಪ ಪತ್ರ ಬರೆದಿದ್ದಾರೆ.
ತಮಿಳುನಾಡಿನಿಂದ ಆಗಮಿಸಿದ ಪುನೀತ್ ಅಭಿಮಾನಿ ಅಪ್ಪು ಅಂತಿಮ ದರ್ಶನ ಪಡೆಯಲು ತಮಿಳುನಾಡಿನಿಂದ ಅಭಿಮಾನಿಗಳು ಆಗಮಿಸಿದ್ದಾರೆ. ದಿವ್ಯಾಂಗ ಅಭಿಮಾನಿ ದೇವು ಸ್ನೇಹಿತನ ಹೆಗಲ ಮೇಲೆ ಹತ್ತಿ ಪುನೀತ್ ಅಂತಿಮ ದರ್ಶನ ಪಡೆದಿದ್ದಾರೆ. ಅಪ್ಪು ನಿಧನದ ಸುದ್ದಿಕೇಳುತ್ತಿದ್ದಂತೆ ಧಾವಿಸಿ ಬಂದು ಅಂತಿಮ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ: ಅಪ್ಪುನನ್ನು ಶಾಂತಯುತವಾಗಿ ಕಳಿಸಿಕೊಡೋಣ, ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿಕೊಂಡರು ರಾಘವೇಂದ್ರ ರಾಜ್ಕುಮಾರ್
Published On - 9:25 am, Sat, 30 October 21