ಅಪ್ಪುನನ್ನು ಶಾಂತಯುತವಾಗಿ ಕಳಿಸಿಕೊಡೋಣ, ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿಕೊಂಡರು ರಾಘವೇಂದ್ರ ರಾಜ್ಕುಮಾರ್
ಡಾ ರಾಜ್ ಕುಮಾರ್ ಅವರ ಅಂತಿಮ ಸಂಸ್ಕಾರದ ವೇಳೆ ಸಂಭವಿಸಿದ ಅಹಿತಕರ ಘಟನೆಗಳು ಮರುಕಳಿಸುವುದು ಬೇಡ, ಗಲಾಟೆಗೆ ಅವಕಾಶ ಮಾಡಿಕೊಡಬೇಡಿ, ಎಲ್ಲವೂ ಸುಸೂತ್ರ ಮತ್ತು ಸಾಂಗವಾಗಿ ನಡೆಯಲು ಎಲ್ಲರೂ ಸಹಕರಿಸಬೇಕು ಎಂದು ರಾಘಣ್ಣ ವಿನಂತಿಸಿಕೊಂಡರು.
ಪುನೀತ್ ರಾಜ್ಕುಮಾರ ಅವರ ಹಠಾತ್ ಮರಣ ರಾಜ್ಯೋತ್ಸವ ಆಚರಿಸಲು ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಕನ್ನಡನಾಡನ್ನು ಸ್ತಬ್ಧಗೊಳಿಸಿದೆ. ಇಂಥದೊಂದು ಆಘಾತಕಾರಿ ಸುದ್ದಿ ಶುಕ್ರವಾರ ಮಧ್ಯಾಹ್ನ ಸಿಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಇಡೀ ಕರ್ನಾಟಕ ರೋದಿಸುತ್ತಿದೆ. ಬಹಳಷ್ಟು ಮನೆಗಳಲ್ಲಿ ಶುಕ್ರವಾರ ಮಧ್ಯಾಹ್ನದ ನಂತರ ಒಲೆ ಹೊತ್ತಿಕೊಳ್ಳಲಿಲ್ಲ. ಮನೆ ಮಗನನ್ನು ಕಳೆದುಕೊಂಡಷ್ಟೇ ದುಃಖ. ಇದು ಕನ್ನಡಿಗರನ್ನು ಎಡೆಬಿಡದೆ ಕಾಡಲಿರುವ ನೋವು ಮತ್ತು ವೇದನೆ. ಅಪ್ಪು ಅವರ ಅಂತಿಮ ಸಂಸ್ಕಾರ ಶಾಂತಿಯುತವಾಗಿ ನಡೆಯಲು ಸಹಕರಿಸುವಂತೆ ಮಾಧ್ಯಮದ ಮೂಲಕ ಜನರಿಗೆ ಅಪೀಲ್ ಮಾಡುವಾಗ ಪುನೀತ್ ಸಹೋದರ ರಾಘವೇಂದ್ರ ರಾಜ್ಕುಮಅರ್ ಬಹಳ ಭಾವುಕರಾಗಿದ್ದರು
ಡಾ ರಾಜ್ ಕುಮಾರ್ ಅವರ ಅಂತಿಮ ಸಂಸ್ಕಾರದ ವೇಳೆ ಸಂಭವಿಸಿದ ಅಹಿತಕರ ಘಟನೆಗಳು ಮರುಕಳಿಸುವುದು ಬೇಡ, ಗಲಾಟೆಗೆ ಅವಕಾಶ ಮಾಡಿಕೊಡಬೇಡಿ, ಎಲ್ಲವೂ ಸುಸೂತ್ರ ಮತ್ತು ಸಾಂಗವಾಗಿ ನಡೆಯಲು ಎಲ್ಲರೂ ಸಹಕರಿಸಬೇಕು ಎಂದು ರಾಘಣ್ಣ ವಿನಂತಿಸಿಕೊಂಡರು.
‘ಅವನು ನಮಗೆ ಚಿಕ್ಕ ಮಗುವಿನಂತಿದ್ದ. ಅಸಲಿಗೆ ಅಪ್ಪಾಜಿ ಮತ್ತು ಅಮ್ಮನ ಹತ್ತಿರ ನಾನು ಹೋಗಬೇಕಿತ್ತು. ಆದರೆ, ಎರಡು ಬಾರಿ ಅವನ ನನ್ನನ್ನು ಸಾವಿನ ದವಡೆಯಿಂದ ಎಳೆದುಕೊಂಡ ಬಂದ. ನನಗೆ ಪೇಸ್ ಮೇಕರ್ ಹಾಕಿಸಿದ್ದು ಅವನೇ. ನನ್ನ ಮಕ್ಕಳೊಂದಿಗೆ ನೀನಿರು, ಅಪ್ಪಾಜಿ-ಅಮ್ಮನ ಜೊತೆಯಿರಲು ನಾನು ಹೋಗುತ್ತೇನೆ ಅಂತ ಹೊರಟೇಬಿಟ್ಟಿದ್ದಾನೆ. ಕಲಾವಿದರಿಗೆ ಸಾವಿಲ್ಲ. ತಮ್ಮ ಚಿತ್ರಗಳ ಮೂಲಕ ಅವರು ಜನರ ನಡುವೆ ಬದುಕಿರುತ್ತಾರೆ,’ ಎಂದು ರಾಘಣ್ಣ ಹೇಳಿದರು.
ಪುನೀತ್ ಅವರ ಇಬ್ಬರು ಹೆಣ್ಣು ಮಕ್ಕಳಲ್ಲಿ ಹಿರಿಯವಳು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು ಬೆಂಗಳೂರಿಗೆ ಮರಳುತ್ತಿದ್ದಾಳೆ ಎಂದು ರಾಘಣ್ಣ ಹೇಳಿದರು. ಪುನೀತ್ ಅಂತ್ಯ ಸಂಸ್ಕಾರಕ್ಕೆ ಅವಸರವೇನೂ ಮಾಡುವುದಿಲ್ಲ. ಎಲ್ಲರಿಗೂ ಅವನ ಆಂತಿಮ ದರ್ಶನ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.
ಇದನ್ನೂ ಓದಿ: Puneeth Rajkumar: ಕಂಠೀರವ ಸ್ಟುಡಿಯೋದಲ್ಲಿ ಭಾನುವಾರ ಸರ್ಕಾರಿ ಗೌರವಗಳೊಂದಿಗೆ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ