‘ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್..!’-ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರ ಹೇಳಿಕೆ
Sachin Pilot: ಸಚಿನ್ ಪೈಲಟ್ ಎಂದು ಹೇಳಲಾಗುತ್ತಿತ್ತು. ಅದರಲ್ಲೂ ಕಳೆದ ವರ್ಷ, ಸಚಿನ್ ಪೈಲಟ್ ಮತ್ತು ಅವರಿ ನಿಷ್ಠ ಶಾಸಕರು ಬಂಡಾಯ ಎದ್ದಾಗ ಈ ಮಾತುಗಳು ಬಲವಾಗಿಯೇ ಕೇಳಿಬಂದಿದ್ದವು.
ಜೈಪುರ: ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ (Sachin Pilot) ಭಾರತೀಯ ಜನತಾ ಪಾರ್ಟಿ (ಬಿಜೆಪಿ) (BJP) ಸೇರ್ಪಡೆಯಾಗುತ್ತಾರಾ? ಹೀಗೊಂದು ಊಹಾಪೋಹಗಳು ಮತ್ತೆ ಎದ್ದಿವೆ. ಅದಕ್ಕೆ ಕಾರಣ ಬಿಜೆಪಿ ಹಿರಿಯ ನಾಯಕರೊಬ್ಬರ ಮಾತು. ಮುಂಬರುವ ದಿನಗಳಲ್ಲಿ ಸಚಿನ್ ಪೈಲಟ್ ಖಂಡಿತವಾಗಿಯೂ ಬಿಜೆಪಿ ಸೇರುತ್ತಾರೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಹೇಳಿದ್ದು ಈಗ ಮತ್ತೆ ಚರ್ಚೆಯನ್ನು ಹುಟ್ಟುಹಾಕಿದೆ.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ರಾಜಸ್ತಾನ ಬಿಜೆಪಿ ಮುಖ್ಯಸ್ಥನಾಗಿರುವ ಎಪಿ ಅಬ್ದುಲ್ಲಾಕುಟ್ಟಿ ಈ ಮಾತುಗಳನ್ನಾಡಿದ್ದಾರೆ. ಸಚಿನ್ ಪೈಲಟ್ ನಿಜಕ್ಕೂ ಒಳ್ಳೆಯ ನಾಯಕ. ಮುಂಬರುವ ದಿನಗಳಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದು ನನಗೆ ಬಲವಾಗಿ ಅನ್ನಿಸುತ್ತಿದೆ ಎಂದು ಮಾಧ್ಯಮಗಳೆದುರು ಹೇಳಿದ್ದಾರೆ.
ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಯಾದಾಗಾಲೇ, ಮುಂದಿನ ಸರದಿ ಸಚಿನ್ ಪೈಲಟ್ ಎಂದು ಹೇಳಲಾಗುತ್ತಿತ್ತು. ಅದರಲ್ಲೂ ಕಳೆದ ವರ್ಷ, ಸಚಿನ್ ಪೈಲಟ್ ಮತ್ತು ಅವರಿ ನಿಷ್ಠ ಶಾಸಕರು ಬಂಡಾಯ ಎದ್ದಾಗ ಈ ಮಾತುಗಳು ಬಲವಾಗಿಯೇ ಕೇಳಿಬಂದಿದ್ದವು. ಆದರೆ ನನಗೆ ಬಿಜೆಪಿ ಸೇರುವ ಯಾವುದೇ ಯೋಚನೆಯೂ ಇಲ್ಲ ಎಂದು ಹೇಳುವ ಮೂಲಕ ಸಚಿನ್ ಪೈಲಟ್ ಊಹಾಪೋಹಗಳಿಗೆ ತೆರೆ ಎಳೆದಿದ್ದರು ಮತ್ತು ಹಾಗೇ ನಡೆದುಕೊಂಡಿದ್ದರು. ಈಗ ಬಿಜೆಪಿ ನಾಯಕರು ಹೇಳಿದ ಮಾತಿನಿಂದ ಕುತೂಹಲ ಎದ್ದಿದೆ.
ಇದನ್ನೂ ಓದಿ: ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಮೆರವಣಿಗೆಯಲ್ಲಿ ಮುಸ್ಲಿಂ ವಿರೋಧಿ ಘೋಷಣೆ, ಎಫ್ಐಆರ್ ದಾಖಲು
Love You Racchu: ಫೈಟರ್ ವಿವೇಕ್ ಸಾವು; ನಿರ್ದೇಶಕ ಶಂಕರ್, ಸಾಹಸ ನಿರ್ದೇಶಕ ವಿನೋದ್ ಪೊಲೀಸರ ವಶಕ್ಕೆ