ಕೊಲ್ಕತ್ತಾ ಏರ್​​ಪೋರ್ಟ್​ನಲ್ಲಿ ಇಂಡಿಗೋ ವಿಮಾನದೊಳಗೆ ಹಾವು ಪತ್ತೆ; ಪ್ರಯಾಣಿಕರು ಶಾಕ್

Snake on Indigo Flight | ಇಂಡಿಗೋ ವಿಮಾನದಲ್ಲಿ ತಮ್ಮ ಲಗೇಜ್​ ಹಾಕುತ್ತಿದ್ದಾಗ ಪ್ರಯಾಣಿಕರೊಬ್ಬರಿಗೆ ಹಾವು ಕಾಣಿಸಿದೆ. ಲಗೇಜ್ ಬ್ಯಾಗೇಜ್ ಬೆಲ್ಟ್​ಗೆ ಸುತ್ತಿಕೊಂಡಿದ್ದ ಹಾವನ್ನು ಕಂಡು ಪ್ರಯಾಣಿಕ ಹೌಹಾರಿದ್ದಾರೆ.

ಕೊಲ್ಕತ್ತಾ ಏರ್​​ಪೋರ್ಟ್​ನಲ್ಲಿ ಇಂಡಿಗೋ ವಿಮಾನದೊಳಗೆ ಹಾವು ಪತ್ತೆ; ಪ್ರಯಾಣಿಕರು ಶಾಕ್
ಇಂಡಿಗೋ ವಿಮಾನದಲ್ಲಿ ಹಾವು
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 09, 2021 | 3:43 PM

ಕೊಲ್ಕತ್ತಾ: ಕೊಲ್ಕತ್ತಾದ ಏರ್​ಪೋರ್ಟ್​ನಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ (Indigo Flight) ಹಾವು ಕಾಣಿಸಿಕೊಂಡಿದ್ದು, ಕೆಲಕಾಲ ಪ್ರಯಾಣಿಕರು ಕಂಗಾಲಾದ ಘಟನೆ ನಡೆದಿದೆ. ವಿಮಾನ ಟೇಕಾಫ್ ಆಗುವ ಮೊದಲೇ ಈ ಹಾವು (Snake) ಕಣ್ಣಿಗೆ ಬಿದ್ದಿದ್ದರಿಂದ ಕೆಲ ಸಮಯ ವಿಮಾನವನ್ನು ಅಲ್ಲೇ ನಿಲ್ಲಿಸಿ, ಹಾವನ್ನು ತೆಗೆದ ಬಳಿಕ ಟೇಕಾಫ್ ಮಾಡಲಾಯಿತು.

ರಾಯ್ಪುರದಿಂದ ಬಂದು ಕೊಲ್ಕತ್ತಾದಿಂದ ಮುಂಬೈಗೆ ತೆರಳುವ ವಿಮಾನದಲ್ಲಿ ಪ್ರಯಾಣಿಕರೆಲ್ಲರೂ ಹತ್ತಿ ಕುಳಿತಿದ್ದ ವೇಳೆ ವಿಷಯ ಗೊತ್ತಾಗಿದೆ. ವಿಮಾನದಲ್ಲಿ ತಮ್ಮ ಲಗೇಜ್​ ಅನ್ನು ಹಾಕುತ್ತಿದ್ದಾಗ ಪ್ರಯಾಣಿಕರೊಬ್ಬರಿಗೆ ಹಾವು ಕಾಣಿಸಿದೆ. ಲಗೇಜ್ ಬ್ಯಾಗೇಜ್ ಬೆಲ್ಟ್​ಗೆ ಸುತ್ತಿಕೊಂಡಿದ್ದ ಹಾವನ್ನು ಕಂಡು ಪ್ರಯಾಣಿಕ ಹೌಹಾರಿದ್ದಾರೆ. ಈ ವಿಷಯ ಗೊತ್ತಾದ ಕೂಡಲೇ ವಿಮಾನದ ಸಿಬ್ಬಂದಿ ಎಲ್ಲ ಪ್ರಯಾಣಿರನ್ನೂ ಕೆಳಗೆ ಇಳಿಸಿದ್ದಾರೆ. ಬಳಿಕ ಏರ್​ಪೋರ್ಟ್​ ಸಿಬ್ಬಂದಿಗೂ ವಿಷಯ ತಿಳಿಸಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಆ ಹಾವನ್ನು ರಕ್ಷಿಸಿ, ತೆಗೆದುಕೊಂಡು ಹೋಗಿದ್ದಾರೆ.

ಆಗಸ್ಟ್​ 5ಕ್ಕೆ ನಡೆದಿರುವ ಈ ಘಟನೆಯ ವಿಡಿಯೋವೊಂದು ಟ್ವಿಟ್ಟರ್​ನಲ್ಲಿ ಈಗ ಶೇರ್ ಆಗಿದೆ. ವಿಮಾನದೊಳಗೆ ಹಾವು ಹೇಗೆ ಸೇರಿಕೊಂಡಿತು, ಇದು ವಿಮಾನದ ಸಿಬ್ಬಂದಿಯ ಗಮನಕ್ಕೆ ಯಾಕೆ ಬರಲಿಲ್ಲ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: Shocking News: ಪೊಲೀಸರಂತೆ ಬಸ್ ನಿಲ್ಲಿಸಿ 1.2 ಕೋಟಿ ರೂ. ಕದ್ದೊಯ್ದ ಕಳ್ಳರು; ಸಿನಿಮಾ ಸ್ಟೈಲ್​ನಲ್ಲಿ ದರೋಡೆ!

Shocking News: 1 ಕೋಟಿ ರೂ. ಕೊಡದಿದ್ದರೆ ನಿಮ್ಮ ಮಕ್ಕಳನ್ನು ಕೊಲ್ಲುತ್ತೇನೆ; 11 ವರ್ಷದ ಮಗಳಿಂದಲೇ ಅಪ್ಪನಿಗೆ ಬ್ಲಾಕ್​ಮೇಲ್!

(Shocking News: Snake found onboard Mumbai bound IndiGo flight at Kolkata airport Snake on Plane)

Published On - 3:41 pm, Mon, 9 August 21