Parliament Monsoon Session: ಲೋಕಸಭೆಯಲ್ಲಿ ಸಂವಿಧಾನದ 127 ನೇ ತಿದ್ದುಪಡಿ ಮಸೂದೆ ಮಂಡನೆ

ಈ ಮಸೂದೆ 1950 ರ ಸಂವಿಧಾನದ (ಪರಿಶಿಷ್ಟ ಪಂಗಡಗಳ) ಆದೇಶವನ್ನು ತಿದ್ದುಪಡಿ ಮಾಡುತ್ತದೆ. ಅದರಲ್ಲಿ ಅಧಿಸೂಚಿತ ಎಸ್​​ಟಿಗಳ ಪಟ್ಟಿಯನ್ನು ಮಾರ್ಪಡಿಸಲು ಸಂಸತ್ತಿಗೆ ಅನುಮತಿ ನೀಡುತ್ತದೆ. ಮಸೂದೆಯು ಹಿಂದುಳಿದ ವರ್ಗಗಳನ್ನು ಗುರುತಿಸಲು ರಾಜ್ಯಗಳಿಗೆ ಅಧಿಕಾರವನ್ನು ಪುನಃಸ್ಥಾಪಿಸುವ ಗುರಿಯನ್ನು ಹೊಂದಿದೆ.

Parliament Monsoon Session: ಲೋಕಸಭೆಯಲ್ಲಿ ಸಂವಿಧಾನದ 127 ನೇ ತಿದ್ದುಪಡಿ ಮಸೂದೆ ಮಂಡನೆ
ಲೋಕಸಭೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 10, 2021 | 5:17 PM

ದೆಹಲಿ: ಲೋಕಸಭೆ ಸೋಮವಾರ ಧ್ವನಿ ಮತದ ಮೂಲಕ  ಸಂವಿಧಾನ (ಪರಿಶಿಷ್ಟ ಪಂಗಡಗಳು) ಆದೇಶ (ತಿದ್ದುಪಡಿ) ವಿಧೇಯಕ, 2021 (The Constitution (Scheduled Tribes) Order (Amendment) Bill, 2021) ಅಂಗೀಕರಿಸಿತು. ಇದು ಅರುಣಾಚಲ ಪ್ರದೇಶದ ಶಿಫಾರಸಿನಂತೆ ಪರಿಶಿಷ್ಟ ಪಂಗಡಗಳ ಸಾಂವಿಧಾನಿಕ ಪಟ್ಟಿಯನ್ನು ತಿದ್ದುಪಡಿ ಮಾಡಲು ಪ್ರಯತ್ನಿಸುತ್ತದೆ. ಈ ಮಸೂದೆ 1950 ರ ಸಂವಿಧಾನದ (ಪರಿಶಿಷ್ಟ ಪಂಗಡಗಳ) ಆದೇಶವನ್ನು ತಿದ್ದುಪಡಿ ಮಾಡುತ್ತದೆ. ಅದರಲ್ಲಿ ಅಧಿಸೂಚಿತ ಎಸ್​​ಟಿಗಳ ಪಟ್ಟಿಯನ್ನು ಮಾರ್ಪಡಿಸಲು ಸಂಸತ್ತಿಗೆ ಅನುಮತಿ ನೀಡುತ್ತದೆ. ಮಸೂದೆಯು ಹಿಂದುಳಿದ ವರ್ಗಗಳನ್ನು ಗುರುತಿಸಲು ರಾಜ್ಯಗಳಿಗೆ ಅಧಿಕಾರವನ್ನು ಪುನಃಸ್ಥಾಪಿಸುವ ಗುರಿಯನ್ನು ಹೊಂದಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ವಿರೋಧ ಪಕ್ಷಗಳು ಕೇಂದ್ರದೊಂದಿಗೆ ಸಹಕರಿಸಲು ನಿರ್ಧರಿಸಿವೆ.

ಇತರ ಎರಡು ಮಸೂದೆಗಳು ಕೂಡಾ ಇಂದು ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟಿದೆ. ಅವುಗಳು ಸೀಮಿತ ಹೊಣೆಗಾರಿಕೆ ಪಾಲುದಾರಿಕೆ (ತಿದ್ದುಪಡಿ) ಮಸೂದೆ, 2021 (Limited Liability Partnership (Amendment) Bill, 2021) ಮತ್ತು ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ (ತಿದ್ದುಪಡಿ) ಮಸೂದೆ, 2021 (Deposit Insurance and Credit Guarantee Corporation (Amendment) Bill, 2021 ).

ರಾಜ್ಯಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನ್ಯಾಯಮಂಡಳಿ ಸುಧಾರಣಾ ಮಸೂದೆ, 2021 ( Tribunals Reforms Bill, 2021) ಅನ್ನು ಮುಂದಿಡಲಿದ್ದಾರೆ.. ಕೇಂದ್ರ ಸಚಿವರಾದ ಸರ್ಬಾನಂದ ಸೋನೊವಾಲ್, ಅರ್ಜುನ್ ಮುಂಡಾ ಮತ್ತು ವೀರೇಂದ್ರ ಕುಮಾರ್ ಕೂಡ ಇಂದು ಸಂಸತ್ತಿನಲ್ಲಿ ಮಸೂದೆಗಳನ್ನು ಮಂಡಿಸಲಿದ್ದಾರೆ.

ಈ ವರ್ಷದ ಸಂಸತ್ ನ ಮುಂಗಾರು ಅಧಿವೇಶನವು ಆಗಸ್ಟ್ 13 ರಂದು ಕೊನೆಗೊಳ್ಳಲಿದ್ದು ಪ್ರತಿಪಕ್ಷಗಳ ಪ್ರತಿಭಟನೆಗಳು ಮತ್ತು ಪೆಗಾಸಸ್ ಬೇಹುಗಾರಿಕೆ, ಕೃಷಿ ಮಸೂದೆ, ಇಂಧನ ಬೆಲೆಯಲ್ಲಿ ಏರಿಕೆ ಮುಂತಾದ ವಿಷಯಗಳ ಕುರಿತು ಚರ್ಚಿಸಲು ವಿಪಕ್ಷ ಬೇಡಿಕೆಗಳನ್ನು ಒಡ್ಡಿದ್ದು, ಹಲವು ಬಾರಿ ಕಲಾಪ ಮುಂದೂಡಿಕೆಯಾಗಿದೆ.

 ಸೀಮಿತ ಹೊಣೆಗಾರಿಕೆ ಪಾಲುದಾರಿಕೆ (ತಿದ್ದುಪಡಿ) ಮಸೂದೆಗೆ ಅಂಗೀಕಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ (ತಿದ್ದುಪಡಿ) ಮಸೂದೆ, 2021 (Limited Liability Partnership (Amendment) Bill) ಅನ್ನು ಮಂಡಿಸಿದರು. ನಂತರ ಅದನ್ನು ಮನೆಯಲ್ಲಿ ಕೈ ಎತ್ತಿ ಮತ ನೀಡಿ ಮೂಲಕ ಅಂಗೀಕರಿಸಲಾಯಿತು. ಮಸೂದೆಯ ಕುರಿತು ಸೀತಾರಾಮನ್ ಭಾಷಣದ ಸಮಯದಲ್ಲಿ, ಪ್ರತಿಪಕ್ಷದ ಸಂಸದರು ಮನೆಯ ಅಂಗಳಕ್ಕೆ  ಬಂದು ಪೆಗಾಸಸ್ ನಂತಹ ವಿಷಯಗಳ ಬಗ್ಗೆ ಪ್ರತಿಭಟಿಸಿದರು ಮತ್ತು ಅವರ ಮೇಲೆ ಚರ್ಚೆಗೆ ಒತ್ತಾಯಿಸಿದರು.

ಇದನ್ನೂ ಓದಿ: ಲೋಕಸಭೆಯಲ್ಲಿ ಅಕ್ರಮ ಗಣಿಗಾರಿಕೆ ಪ್ರಸ್ತಾಪ; ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸಂಸದೆ ಸುಮಲತಾ ಒತ್ತಾಯ

ಇದನ್ನೂ ಓದಿ: ಐಟಿ ಸಮಿತಿ ಪೆಗಾಸಸ್ ಬಗ್ಗೆ ಚರ್ಚೆ ಮಾಡುವ ನಿರೀಕ್ಷೆ ಇದೆ: ಶಶಿ ತರೂರ್

Published On - 1:53 pm, Mon, 9 August 21

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ