ಈ ಹುಡುಗಿ ವ್ಯವಸ್ಥೆಯಿಂದ ಬೇಸತ್ತಿದ್ದಾಳೆ: ಕುಸ್ತಿಪಟು ವಿನೇಶ್ ಫೋಗಟ್‌ ಬಗ್ಗೆ ಶಶಿ ತರೂರ್ ಟ್ವೀಟ್

|

Updated on: Aug 08, 2024 | 12:54 PM

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡು ಅನರ್ಹಗೊಂಡ ಒಂದು ದಿನದ ನಂತರ ಕುಸ್ತಿಪಟು ವಿನೇಶ್ ಫೋಗಟ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಶಶಿ ತರೂರ್, ಇಸ್ ಸಿಸ್ಟಂ ಸೆ ಪಕ್ ಗಯೀ ಹೈ ಯೇ ಲಡ್ಕಿ, ಲಡ್ತೇ ಲಡ್ತೇ ಥಕ್ ಗಯೀ ಹೈ ಯೇ ಲಡ್ಕೀ (ಈ ಹುಡುಗಿ ವ್ಯವಸ್ಥೆಯಿಂದ ಬೇಸತ್ತಿದ್ದಾಳೆ. ಹೋರಾಡಿ ಹೋರಾಡಿ ಸುಸ್ತಾಗಿದ್ದಾಳೆ ಈ ಹುಡುಗಿ)"ಎಂದಿದ್ದಾರೆ.

ಈ ಹುಡುಗಿ ವ್ಯವಸ್ಥೆಯಿಂದ ಬೇಸತ್ತಿದ್ದಾಳೆ: ಕುಸ್ತಿಪಟು ವಿನೇಶ್ ಫೋಗಟ್‌ ಬಗ್ಗೆ ಶಶಿ ತರೂರ್ ಟ್ವೀಟ್
ವಿನೇಶ್ ಫೋಗಟ್ -ಶಶಿ ತರೂರ್
Follow us on

ದೆಹಲಿ ಆಗಸ್ಟ್ 08: ಕಾಂಗ್ರೆಸ್ ನಾಯಕ ಶಶಿ ತರೂರ್ (Shashi Tharoor) ಅವರು ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಕ್ರೀಡೆಯಿಂದ ನಿವೃತ್ತಿ ಘೋಷಿಸಿದ ನಂತರ ಗುರುವಾರ ಹಿಂದಿಯಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡು ಅನರ್ಹಗೊಂಡ ಒಂದು ದಿನದ ನಂತರ ಫೋಗಟ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇಸ್ ಸಿಸ್ಟಂ ಸೆ ಪಕ್ ಗಯೀ ಹೈ ಯೇ ಲಡ್ಕಿ, ಲಡ್ತೇ ಲಡ್ತೇ ಥಕ್ ಗಯೀ ಹೈ ಯೇ ಲಡ್ಕೀ (ಈ ಹುಡುಗಿ ವ್ಯವಸ್ಥೆಯಿಂದ ಬೇಸತ್ತಿದ್ದಾಳೆ. ಹೋರಾಡಿ ಹೋರಾಡಿ ಸುಸ್ತಾಗಿದ್ದಾಳೆ ಈ ಹುಡುಗಿ),” ಎಂದು ತರೂರ್ ಎಕ್ಸ್‌ನಲ್ಲಿ ಬರೆದಿದ್ದಾರೆ.

ಮಂಗಳವಾರ ವಿನೇಶ್ ಫೋಗಟ್ ಅವರು ಒಲಿಂಪಿಕ್ಸ್‌ನಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮೊದಲ ಬಾರಿಗೆ ಜಪಾನ್‌ನ ಹಾಲಿ ವಿಶ್ವ ಮತ್ತು ಒಲಿಂಪಿಕ್ ಚಾಂಪಿಯನ್ ಯುಯಿ ಸುಸಾಕಿಯನ್ನು ಅವರು ಸೋಲಿಸಿದ್ದರು. ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಅವರನ್ನು 5-0 ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದರು.

ಶಶಿ ತರೂರ್ ಟ್ವೀಟ್


ಆದಾಗ್ಯೂ, 50 ಕೆಜಿ ತೂಕದ ವಿಭಾಗದಲ್ಲಿ ಸ್ಪರ್ಧೆಗಿಳಿಯಲಿದ್ದ ವಿನೇಶ್ ಅವರಿಗೆ ಬುಧವಾರ ಬೆಳಗ್ಗೆ ತೂಕ ಪರೀಕ್ಷೆ ಮಾಡಿದಾಗ ಅವರ 50 ಕೆಜಿಗಿಂತ ಸ್ವಲ್ಪ ಹೆಚ್ಚು ಗ್ರಾಂ ದೇಹಭಾರ ಇತ್ತು ಎಂದು ಕಂಡು ಬಂದ ನಂತರ ಅವರು ಪಂದ್ಯದಿಂದ ಅನರ್ಹಗೊಂಡಿದ್ದರು.

ಕುಸ್ತಿ ನನ್ನನ್ನು ಸೋಲಿಸಿತು, ನಾನು ಸೋತಿದ್ದೇನೆ…ದಯವಿಟ್ಟು ನನ್ನನ್ನು ಕ್ಷಮಿಸು ..ನಿನ್ನ ಕನಸು. ನನ್ನ ಧೈರ್ಯ, ಎಲ್ಲವೂ ಛಿದ್ರವಾಗಿದೆ. ನನ್ನಲ್ಲಿ ಹೆಚ್ಚಿನ ಶಕ್ತಿ ಉಳಿದಿಲ್ಲ. ವಿದಾಯ ಕುಸ್ತಿ 2001-2024. ನಾನು ಯಾವಾಗಲೂ ನಿಮ್ಮೆಲ್ಲರಿಗೂ ಋಣಿಯಾಗಿರುತ್ತೇನೆ..ಕ್ಷಮಿಸಿ. ”ಎಂದು ನಿವೃತ್ತಿ ಘೋಷಿಸಿ ವಿನೇಶ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ತೂಕ ಇಳಿಸುವ ಪ್ರಯತ್ನದಲ್ಲಿ ರಾತ್ರಿಯಿಡೀ ತಂಡ ನಡೆಸಿದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ವಿನೇಶ್ ಫೋಗಟ್ ಬುಧವಾರ ಬೆಳಗ್ಗೆ ನಿಗದಿತ 50 ಕೆಜಿಗಿಂತ 100ಗ್ರಾಂ ಹೆಚ್ಚುವರಿ ತೂಕವನ್ನು ಹೊಂದಿದ್ದರು. ಇಂದರಿಂದ ಪೈನಲ್ ಪಂದ್ಯದಿಂದ ಅನರ್ಹಗೊಂಡಿದ್ದಾರೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​ಹೇಳಿಕೆಯಲ್ಲಿ ತಿಳಿಸಿದೆ. ತೂಕ ಇಳಿಸಲು ನಡೆಸಿದ ಸತತ ಪ್ರಯತ್ನಗಳ ಪರಿಣಾಮವಾಗಿ ಅವರು ನಿರ್ಜಲೀಕರಣದಿಂದ ಬಳಲಿ ಅಸ್ವಸ್ಥಗೊಂಡಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಇದನ್ನೂ ಓದಿ: Vinesh Phogat: ಭಾವುಕ ಸಂದೇಶದೊಂದಿಗೆ ಕುಸ್ತಿಗೆ ನಿವೃತ್ತಿ ಘೋಷಿಸಿದ ವಿನೇಶ್ ಫೋಗಟ್

ವಿನೇಶ್ ಫೋಗಟ್ ಯಾರು?

ವಿನೇಶ್ ಮೂರು ಬಾರಿ ಒಲಿಂಪಿಯನ್ ಆಗಿದ್ದು, ಏಷ್ಯನ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಎರಡರಲ್ಲೂ ಚಿನ್ನದ ಪದಕ ಗೆದ್ದಿದ್ದಾರೆ. ಕಳೆದ ವರ್ಷದಿಂದ, ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಭಾರತದ ಮಾಜಿ ರೆಸ್ಲಿಂಗ್ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಅವರು ತೀವ್ರ ಪ್ರತಿಭಟನೆ ನಡೆಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ