AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈನ ಕೆರೆಯೊಂದರಲ್ಲಿ ಯುವತಿಯ ಶವ ಪತ್ತೆ

ಮುಂಬೈನ ಕೆರೆಯಲ್ಲಿ 19 ವರ್ಷದ ಯುವತಿಯ ಶವ ಪತ್ತೆಯಾಗಿದ್ದು, ಆತನ ಗೆಳೆಯನೇ ಆಕೆಯನ್ನು ಕೊಲೆ ಮಾಡಿರಬಹುದು ಎಂದು ಅಂದಾಜಿಸಿದ್ದಾರೆ. ಇಬ್ಬರೂ ಕೆರೆಯ ಸಮೀಪ ಹೋಗಿದ್ದನ್ನು ಸಿಸಿಟಿವಿಯೊಂದು ಸೆರೆ ಹಿಡಿದಿದೆ.

ಮುಂಬೈನ ಕೆರೆಯೊಂದರಲ್ಲಿ ಯುವತಿಯ ಶವ ಪತ್ತೆ
ಕೆರೆ-ಸಾಂದರ್ಭಿಕ ಚಿತ್ರImage Credit source: NDTV
Follow us
ನಯನಾ ರಾಜೀವ್
|

Updated on: Aug 08, 2024 | 12:23 PM

ಮಹಾರಾಷ್ಟ್ರದ ರಾಜಧಾನಿ ಮುಂಬೈನ ಕೆರೆಯೊಂದರಲ್ಲಿ 19 ವರ್ಷದ ಯುವತಿಯ ಶವ ಪತ್ತೆಯಾಗಿದೆ. ಆಕೆಯ ಗೆಳೆಯನೇ ಕೊಂದು ಕೆರೆಗೆ ಎಸೆದಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ. ಬುಧವಾರ ಸಂಜೆ 4.30ರ ಸುಮಾರಿಗೆ ಬೇಲಾಪುರ ಸಮೀಪದ ಶಾಲೆಯೊಂದರ ಬಳಿಯ ಕೆರೆಯಲ್ಲಿ ಶವ ಇರುವುದನ್ನು ಮೀನುಗಾರರು ನೋಡಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಹೊರತೆಗೆದಿದ್ದಾರೆ, ಯುವತಿಯನ್ನು ಭಾವಿಕಾ ಮೋರೆ ಎಂದು ಗುರುತಿಸಲಾಗಿದೆ. ನೆರೂಲ್​ ಕಾಲೇಜಿನ ವಿದ್ಯಾರ್ಥಿನಿ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಾ

ಥಮಿಕ ತನಿಖೆಯಲ್ಲಿ ಯುವತಿ ಸ್ವಸ್ತಿಕ್ ಪಾಟೀಲ್ ಎಂಬ 22 ವರ್ಷದ ಯುವಕನೊಂದಿಗೆ ಸಂಬಂಧ ಹೊಂದಿದ್ದಳು ಎಂದು ಹೇಳಲಾಗುತ್ತಿದೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಇಬ್ಬರೂ ಸಂಜೆ 4 ಗಂಟೆ ಸುಮಾರಿಗೆ ಕೆರೆಯ ಕಡೆಗೆ ಹೋದರು ಆದರೆ ಹಿಂದಿರುಗಲಿಲ್ಲ.

ಇವರಿಬ್ಬರ ನಡುವೆ ಜಗಳ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ನಂತರ ವ್ಯಕ್ತಿ ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಆಕೆಯ ಶವವನ್ನು ಕೆರೆಗೆ ಎಸೆದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮತ್ತಷ್ಟು ಓದಿ: ಸೀರಿಯಲ್ ಕಿಲ್ಲರ್ಸ್​: 14 ತಿಂಗಳಲ್ಲಿ 9 ಮಹಿಳೆಯರ ಹತ್ಯೆ, ಮೂವರು ಶಂಕಿತರ ಬಂಧನ

ಇದೀಗ ವ್ಯಕ್ತಿಯ ಪತ್ತೆಗೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಶವಪರೀಕ್ಷೆ ವರದಿ ಬಂದ ನಂತರ ಮಹಿಳೆಯ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ