ಎಂಜಲಿನಿಂದ ಗ್ರಾಹಕನ ಮುಖಕ್ಕೆ ಮಸಾಜ್ ಮಾಡಿದ್ದ ಕ್ಷೌರಿಕನ ಸಲೂನ್ ನೆಲಸಮ
ಸಲೂನ್ನಲ್ಲಿ ಗ್ರಾಹಕರೊಬ್ಬರ ಮುಖಕ್ಕೆ ಎಂಜಲಿನಿಂದ ಮಸಾಜ್ ಮಾಡುತ್ತಿದ್ದ ಕ್ಷೌರಿಕನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇದೀಗ ಅಕ್ರಮವಾಗಿ ನಿರ್ಮಿಸಿರುವ ಸಲೂನ್ನನ್ನು ಜಿಲ್ಲಾಡಳಿತ ನೆಲಕ್ಕುರುಳಿಸಿದೆ.
ಎಂಜಲಿನಿಂದ ಮುಖಕ್ಕೆ ಮಸಾಜ್ ಮಾಡಿದ್ದ ಕ್ಷೌರಿಕನ ಸಲೂಲ್ನನ್ನು ಕನೌಜ್ ಜಿಲ್ಲಾಡಳಿತ ನೆಲಕ್ಕುರುಳಿಸಿದೆ. ಉತ್ತರ ಪ್ರದೇಶದ ಕನೌಜ್ನ ಸಲೂನ್ವೊಂದರಲ್ಲಿ ಕ್ಷೌರಿಕ ಯೂಸುಫ್ ತನ್ನ ಎಂಜಲು ಬಳಸಿ ಗ್ರಾಹಕರೊಬ್ಬರ ಮುಖಕ್ಕೆ ಮಸಾಜ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಅಲ್ಲಿರುವವರು ಯಾರೋ ವಿಡಿಯೋ ಮಾಡಿದ್ದರು, ವೈರಲ್ ಆದ ಬಳಿಕ ಆತ ಸಲೂನ್ ಬಿಟ್ಟು ಓಡಿ ಹೋಗಿದ್ದ, ಕೊನೆಗೂ ಆತನನ್ನು ಬಂಧಿಸಲಾಗಿದೆ.
ಆತನ ಸಲೂನ್ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದ್ದು, ನೆಲಕ್ಕುರುಳಿಸಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಯೂಸುಫ್ ವಿರುದ್ಧ ಪ್ರತಿಭಟನೆ ನಡೆಸಿ ಆತನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ಈ ವಿಡಿಯೋವನ್ನು 15 ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಸ್ವತಃ ತಾನೇ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ.
ಮತ್ತಷ್ಟು ಓದಿ: Watch Video: ಇದು ಎಂಜಲು ಉಗುಳಿ ಮಸಾಜ್ ಮಾಡುವ ಸಲೂನ್, ವಿಡಿಯೋ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವೀಡಿಯೋಕ್ಕೆ ಈ ಭಾಗದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು ಈ ಘಟನೆಯನ್ನು ಸ್ಪಿಟ್ ಜಿಹಾದ್ ಎಂದು ಟ್ಯಾಗ್ ಮಾಡಿದ್ದಾರೆ. ಆರೋಪಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ