ಸೀರಿಯಲ್ ಕಿಲ್ಲರ್ಸ್​: 14 ತಿಂಗಳಲ್ಲಿ 9 ಮಹಿಳೆಯರ ಹತ್ಯೆ, ಮೂವರು ಶಂಕಿತರ ಬಂಧನ

ಕೇವಲ 25 ಕಿ.ಮೀ ವ್ಯಾಕ್ತಿಯಲ್ಲಿ ಕಳೆದ 14 ತಿಂಗಳಲ್ಲಿ 9 ಮಹಿಳೆಯರ ಹತ್ಯೆ ನಡೆದಿರುವುದು ಪೊಲೀಸರನ್ನು ಚಿಂತೆಗೀಡು ಮಾಡಿದೆ. ಬರೇಲಿಯಲ್ಲಿ ನಡೆದಿರುವ ಈ ಪ್ರಕರಣಗಳ ಹಿಂದೆ ಸೀರಿಯಲ್ ಕಿಲ್ಲರ್ಸ್​ ಕೈವಾಡವಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಸೀರಿಯಲ್ ಕಿಲ್ಲರ್ಸ್​: 14 ತಿಂಗಳಲ್ಲಿ 9 ಮಹಿಳೆಯರ ಹತ್ಯೆ, ಮೂವರು ಶಂಕಿತರ ಬಂಧನ
ಸಾವು
Follow us
ನಯನಾ ರಾಜೀವ್
|

Updated on: Aug 08, 2024 | 9:41 AM

ಬರೇಲಿಯಲ್ಲಿ ಸರಣಿ ಹಂತಕರ ಅಟ್ಟಹಾಸ ಹೆಚ್ಚಾಗಿದೆ, 14 ತಿಂಗಳಲ್ಲಿ 9 ಮಹಿಳೆಯರನ್ನು ಹತ್ಯೆ ಮಾಡಿದ್ದು, ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಈ ಎಲ್ಲಾ ಕೊಲೆಗಳು ಕೇವಲ 25 ಕಿ.ಮೀ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಎಲ್ಲಾ ಕೊಲೆಯ ಹಿಂದೆ ಒಂದೇ ಗುಂಪಿನ ಕೈವಾಡವಿದೆ ಎಂದು ಅಂದಾಜಿಸಲಾಗಿದೆ.

45 ರಿಂದ 55 ವರ್ಷ ವಯಸ್ಸಿನ ಎಲ್ಲಾ ಮಹಿಳೆಯರು, ಮಧ್ಯಾಹ್ನದ ಸುಮಾರಿಗೆ ಹೊಲಗಳಲ್ಲಿ ಕತ್ತು ಹಿಸುಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಬಟ್ಟೆಗಳು ಎಲ್ಲವೂ ಸರಿಯಾಗೇ ಇದ್ದವು ಹಾಗಾಗಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆರು ತಿಂಗಳಿನಿಂದ ಪೊಲೀಸರು ಈ ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ ಎಂದು ಯುಪಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಶಾಂತ್ ಕುಮಾರ್ ಖಚಿತಪಡಿಸಿದ್ದಾರೆ.

ಹಾಗಾದರೆ ಆಭರಣಗಳನ್ನು ದೋಚುವುದೇ ಅವರ ಗುರಿಯಾಗಿದೆ ಎಂದು ಆಲೋಚಿಸಲಾಗಿದೆ. ಇದೆಲ್ಲವೂ ಒಂದೇ ವ್ಯಾಪ್ತಿಯಲ್ಲಿ ನಡೆದಿರುವ ಕಾರಣ ಸೀರಿಯಲ್ ಕಿಲ್ಲರ್ಸ್​ ಕೃತ್ಯವಿರಬಹುದು ಎಂದು ಅಂದಾಜಿಸಲಾಗಿದೆ. ಕೊಲೆಗಳ ಪುನರಾವರ್ತಿತ ಮಾದರಿಯು ಭಾರತದಲ್ಲಿನ ಇತರ ಕುಖ್ಯಾತ ಸೀರಿಯಲ್ ಕಿಲ್ಲರ್​​​ಪ್ರಕರಣಗಳಿಗೆ ಹೋಲಿಕೆಗಳನ್ನು ಮಾಡಿದೆ.

ಮತ್ತಷ್ಟು ಓದಿ: Crime News: ಕೊಲೆ ಮಾಡಿ ಸೂಟ್​ಕೇಸ್​ನಲ್ಲಿ ಶವ ತುಂಬಿ ರೈಲಿನಲ್ಲಿ ಸಾಗಿಸಿದ ಹಂತಕರು

ತೀರಾ ಇತ್ತೀಚಿನವರಲ್ಲಿ ಒಬ್ಬರು ರವೀಂದರ್ ಕುಮಾರ್, 2015 ರಲ್ಲಿ ಆರು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಮಾಡಿ ಬಂಧಿಸಲ್ಪಟ್ಟಿದ್ದರು. ಎಂಟು ವರ್ಷಗಳ ಅವಧಿಯಲ್ಲಿ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದಾದ್ಯಂತ ಕನಿಷ್ಠ 30 ಮಕ್ಕಳನ್ನು ಅತ್ಯಾಚಾರ ಮಾಡಿ ಕೊಂದಿರುವುದಾಗಿ ಕುಮಾರ್ ನಂತರ ಒಪ್ಪಿಕೊಂಡಿದ್ದರು.

ಬರೇಲಿಯಲ್ಲಿ ತನಿಖೆ ಮುಂದುವರೆದಿದ್ದು, ಅಪರಾಧಿಯನ್ನು ಪತ್ತೆಹಚ್ಚಲು ಮತ್ತು ಹೆಚ್ಚಿನ ಜೀವಹಾನಿಯನ್ನು ತಡೆಯಲು ಪೊಲೀಸರು ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದ್ದಾರೆ. ಸ್ಥಳೀಯ ಸಮುದಾಯಗಳು ಹೆಚ್ಚಿನ ಅಲರ್ಟ್‌ನಲ್ಲಿವೆ ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ವರದಿ ಮಾಡುವಂತೆ ಅಧಿಕಾರಿಗಳು ನಿವಾಸಿಗಳನ್ನು ಒತ್ತಾಯಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ