ದೆಹಲಿ ಸೆಪ್ಟೆಂಬರ್ 13: ದೆಹಲಿಯಲ್ಲಿ ಅಧಿಕಾರದ ಮಾರ್ಗವು ಉತ್ತರ ಪ್ರದೇಶದ (Uttar Pradesh) ಮೂಲಕ ಹಾದುಹೋಗುತ್ತದೆ. ಇದು ಸುಮ್ಮನೆ ಹೇಳಿದ್ದಲ್ಲ, ಚುನಾವಣಾ ದಾಖಲೆಯೂ ಇದನ್ನು ಸಾಬೀತುಪಡಿಸುತ್ತದೆ. ಪಂಡಿತ್ ಜವಾಹರ್ ಲಾಲ್ ನೆಹರೂ ಅವರಿಂದ ಹಿಡಿದು ಇಂದಿರಾಗಾಂಧಿ, ರಾಜೀವ್ ಗಾಂಧಿ, ಅಟಲ್ ಬಿಹಾರ್ ವಾಜಪೇಯಿ, ನರೇಂದ್ರ ಮೋದಿಯವರೆಲ್ಲ ಉತ್ತರ ಪ್ರದೇಶದಿಂದ ಗೆದ್ದು ದೇಶದ ಪ್ರಧಾನಿಯಾಗಿದ್ದಾರೆ. ಪ್ರತಿಪಕ್ಷಗಳು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದು, ಇದಕ್ಕಾಗಿ ರಾಜಕೀಯ ಜಾಲವನ್ನು ಹೆಣೆಯಲು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದ ಸ್ಪರ್ಧಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸಿದ್ಧತೆ ನಡೆಸುತ್ತಿದ್ದಾರೆ ಎಂದು ಟಿವಿ9 ಭಾರತ್ವರ್ಷ್ ವರದಿ ಮಾಡಿದೆ.
ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಮ್ ಗೆದ್ದು ಮೊದಲ ಬಾರಿಗೆ ಸಂಸದರಾದ ಉತ್ತರ ಪ್ರದೇಶಲ್ಲಿರುವ ಆ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಈ ಸ್ಥಾನದಲ್ಲಿ ಗೆದ್ದ ನಂತರವೇ ಕಾನ್ಶಿರಾಮ್ ಉತ್ತರ ಪ್ರದೇಶದ ದಲಿತರ ಹೃದಯದಲ್ಲಿ ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸಿದರು ಮತ್ತು ಬಿಎಸ್‌ಪಿಯನ್ನು ಹೊಸ ರಾಜಕೀಯ ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸಿದರು. ಮೂರು ದಶಕಗಳ ನಂತರ, ಯುಪಿ ರಾಜಕೀಯದಲ್ಲಿ ಬಿಎಸ್ ಪಿ ಅಂಚಿನಲ್ಲಿದೆ, ಆದರೆ ಕಾಂಗ್ರೆಸ್ ಖರ್ಗೆ ಮೂಲಕ ದಲಿತರನ್ನು ತನ್ನೊಂದಿಗೆ ಸಂಪರ್ಕಿಸುವ ತಂತ್ರವನ್ನು ರೂಪಿಸುತ್ತಿದೆ.
ಯುಪಿಯಲ್ಲಿ ಕಾಂಗ್ರೆಸ್ ಖರ್ಗೆ ಅವರನ್ನು ಕಣಕ್ಕಿಳಿಸುವ ಕ್ಷೇತ್ರ ಮಹತ್ವದ್ದು. ಆದರೆ ದಲಿತ ಮತಗಳನ್ನು ಸೇರಿಸುವಲ್ಲಿ ಕಾಂಗ್ರೆಸ್ ಗಂಭೀರವಾಗಿದೆ ಎಂಬುದು ಸ್ಪಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಪ್ರತಿಪಕ್ಷಗಳ ಮೈತ್ರಿಕೂಟದ ಇಂಡಿಯಾದ ಭಾಗವಾಗುವ ಬದಲು ಬಿಜೆಪಿಯ ಸಹಾಯಕಿಯಾಗುತ್ತಿದ್ದಾರೆ ಎಂದು ಕಾಂಗ್ರೆಸ್ ನಂಬಿದೆ. ಇಂತಹ ಪರಿಸ್ಥಿತಿಯಲ್ಲಿ ಯುಪಿ ಸೇರಿದಂತೆ ದೇಶಾದ್ಯಂತ ದಲಿತರ ಮತಗಳನ್ನು ಸೆಳೆಯಲು ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ದಕ್ಷಿಣ ಕರ್ನಾಟಕದ ಗುಲ್ಬರ್ಗ ಕ್ಷೇತ್ರದ ಜತೆಗೇ ಉತ್ತರ ಪ್ರದೇಶದ ಇಟಾವಾ ಅಥವಾ ಬಾರಾಬಂಕಿ ಕ್ಷೇತ್ರದಿಂದ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ.
ಉತ್ತರ ಪ್ರದೇಶದಲ್ಲಿ ಖರ್ಗೆ ಅವರು ಚುನಾವಣೆಗೆ ಸ್ಪರ್ಧಿಸಲು ಚರ್ಚಿಸುತ್ತಿರುವ ಸ್ಥಾನಗಳ ಪೈಕಿ ಒಂದು ಸ್ಥಾನ ಇಟಾವಾ ಮತ್ತು ಇನ್ನೊಂದು ಬಾರಾಬಂಕಿ. ಈ ಎರಡೂ ಸ್ಥಾನಗಳು ಪ್ರಸ್ತುತ ಬಿಜೆಪಿ ವಶದಲ್ಲಿದೆ, ಆದರೆ ಕುತೂಹಲಕಾರಿ ಸಂಗತಿಯೆಂದರೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರ ರಾಜಕೀಯ ಗುರು ಕಾನ್ಶಿರಾಮ್ ಒಂದು ಸ್ಥಾನದಲ್ಲಿ ಸಂಸದರಾಗಿದ್ದರೆ, ಅವರ ನಿಕಟವರ್ತಿಯಾಗಿದ್ದ ಪಿಎಲ್ ಪುನಿಯಾ ಮತ್ತೊಂದು ಸ್ಥಾನದಿಂದ ಸಂಸದರಾಗಿ ಆಯ್ಕೆಯಾದರು. ಇಟಾವಾ ಕ್ಷೇತ್ರದಲ್ಲಿ ದಲಿತ-ಹಿಂದುಳಿದ ಮತಗಳ ಸಮೀಕರಣವಿದೆ. ಎರಡನೇ ಬಾರಾಬಂಕಿ ಕ್ಷೇತ್ರದಲ್ಲಿ ದಲಿತ-ಮುಸ್ಲಿಂ ಕಾಂಬಿನೇಷನ್ ಪ್ರಬಲವಾಗಿದೆ. ಅವರು ಇಟಾವಾದಿಂದ ಸ್ಪರ್ಧಿಸಿದರೆ, ಯಾದವ್ ಬೆಲ್ಟ್ ಸ್ಥಾನಗಳ ಮೇಲೆ ಪ್ರಭಾವ ಬೀರಬಹುದು. ಒಂದು ವೇಳೆ ಅವರು ಬಾರಾಬಂಕಿ ಕ್ಷೇತ್ರದಿಂದ ಸ್ಪರ್ಧಿಸಿದರೆ, ಅವರು ರಾಯ್ ಬರೇಲಿ-ಅಮೇಥಿ ಸೇರಿದಂತೆ ಅವಧ್ ಸ್ಥಾನಗಳ ಮೇಲೆ ಪ್ರಭಾವ ಬೀರುತ್ತಾರೆ.
1984 ರಲ್ಲಿ ಬಿಎಸ್ಪಿ ರಚನೆಯೊಂದಿಗೆ, ಕಾನ್ಶಿರಾಮ್ ಅವರು ‘ದಲಿತ ಸಮುದಾಯ’ಕ್ಕೆ ಬಲವಾದ ರಾಜಕೀಯ ನೆಲೆಯನ್ನು ಸೃಷ್ಟಿಸಿದರು. ಅವರು ದೇಶದ ವಿವಿಧ ಭಾಗಗಳಲ್ಲಿ ಸುತ್ತಾಡಿ, ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ನಡುವೆ ಪ್ರಚಾರ ಮಾಡಿದರು. ಮುಲಾಯಂ ಸಿಂಗ್ ಯಾದವ್ ಒಬಿಸಿ-ಅಲ್ಪಸಂಖ್ಯಾತ ರಾಜಕಾರಣ ಮಾಡುತ್ತಿದ್ದರು. ಯುಪಿಯ ಸಹರಾನ್‌ಪುರ, ಅಮೇಥಿ, ಅಲಹಾಬಾದ್ ಮತ್ತು ಪಂಜಾಬ್‌ನ ಹೋಶಿಯಾರ್‌ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾನ್ಶಿರಾಮ್ ಸೋತಿದ್ದರು. 1991 ರಲ್ಲಿ, ಯುಪಿಯ ಇಟಾವಾ ಲೋಕಸಭಾ ಸ್ಥಾನ ತೆರವಾಯಿತು, ಅಲ್ಲಿ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಕಾನ್ಶಿ ರಾಮ್ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಅಲ್ಲಿಯವರೆಗೆ ಇಟಾವಾ ಲೋಕಸಭಾ ಸ್ಥಾನವನ್ನು ಕಾಯ್ದಿರಿಸಲಾಗಿಲ್ಲ.
ಇದನ್ನೂ ಓದಿ: ಆಹ್ವಾನ ಇಲ್ಲದೆ ಜಿ20 ಶೃಂಗಸಭೆಗೆ ನಾನು ಹೇಗೆ ಹೋಗಲಿ: ಮಲ್ಲಿಕಾರ್ಜುನ ಖರ್ಗೆ
ಕಾನ್ಶಿರಾಮ್ ಗೆಲುವಿನೊಂದಿಗೆ ಯುಪಿಯಲ್ಲಿ ಹೊಸ ರಾಜಕೀಯ ಸಮೀಕರಣ ಆರಂಭವಾಯಿತು. ಇಟಾವಾದಲ್ಲಿ ಕಾನ್ಶಿರಾಮ್ ಅವರನ್ನು ಗೆಲ್ಲಿಸುವಲ್ಲಿ ಮುಲಾಯಂ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಮುಲಾಯಂ ಅವರ ಆಪ್ತ ಸ್ನೇಹಿತ ರಾಮ್ ಸಿಂಗ್ ಶಾಕ್ಯಾ ಜನತಾ ದಳದಿಂದ ಅಭ್ಯರ್ಥಿಯಾಗಿದ್ದರು, ಆದರೆ ಅವರು ಕಾನ್ಶಿ ರಾಮ್‌ಗೆ ಸಹಾಯ ಮಾಡಿದರು. ಕಾನ್ಶಿರಾಮ್ ಅವರ ಮನವಿಯ ನಂತರವೇ ಮುಲಾಯಂ ಸಿಂಗ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ಮುಲಾಯಂ ಸಿಂಗ್ ಜತೆ ಕೈಜೋಡಿಸಿದರೆ ಯುಪಿಯಲ್ಲಿ ಎಲ್ಲ ಪಕ್ಷಗಳೂ ಸರ್ವನಾಶವಾಗಲಿವೆ ಎಂದು ಕಾನ್ಶಿರಾಮ್ ಅಂದು ಹೇಳಿದ್ದರು. ಇಟಾವಾ ವಿಜಯದ ನಂತರ, ಮುಲಾಯಂ ಮತ್ತು ಕಾನ್ಶಿ ರಾಮ್ ನಡುವೆ ಮೈತ್ರಿ ಪ್ರಾರಂಭವಾಯಿತು. 1993 ರಲ್ಲಿ ಇಬ್ಬರೂ ಒಟ್ಟಾಗಿ ಚುನಾವಣೆಗೆ ಸ್ಪರ್ಧಿಸಿದರು. ಬಿಜೆಪಿ ಹೇಳ ಹೆಸರಿಲ್ಲದಾಯಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:18 pm, Wed, 13 September 23