ಬಿಜೆಪಿ(BJP) ನೇತೃತ್ವದ ಕೇಂದ್ರ ಸರ್ಕಾರ ತ್ವರಿತವಾಗಿ ಸಂಕ್ಷಿಪ್ತ ರೂಪಗಳನ್ನು ಕೊಡುವ ರೀತಿಯನ್ನು ಕಾಂಗ್ರೆಸ್ (Congress) ಸಂಸದ ಜೈರಾಮ್ ರಮೇಶ್ (Jairam Ramesh) ವ್ಯಂಗ್ಯವಾಡಿದ್ದಾರೆ. ಇತ್ತೀಚಿನ ಸಂಸದೀಯ ಸ್ಥಾಯಿ ಸಮಿತಿ ಸಭೆಯ ಸಂಚಿಕೆಯನ್ನು ಹಂಚಿಕೊಂಡ ರಮೇಶ್, ‘ಶ್ರೀಮಾನ್’ ಎಂದು ಸಂಕ್ಷೇಪಿಸುವ ಸರ್ಕಾರ ಆಯೋಜಿಸಿದ ಕಾರ್ಯಕ್ರಮದ ಬಗ್ಗೆ ಸದಸ್ಯರಿಗೆ ತಿಳಿಸಲಾಗಿದೆ ಎಂದು ಹೇಳಿದರು. ಪುರುಷನ್ನು ಸಂಭೋದಿಸಲು ಹಿಂದಿಯಲ್ಲಿ ಶ್ರೀಮಾನ್ ಎಂದು ಬಳಸಲಾಗುತ್ತದೆ.
ಆಕರ್ಷಕ ಅಕ್ರೋನೇಮ್‌ಗಳನ್ನು ರೂಪಿಸುವ ಮೋದಿ ಸರ್ಕಾರದ ಗೀಳಿಗೆ ಸರಿಸಾಟಿ ಯಾರೂ ಇಲ್ಲ… ಇಂದು ಸ್ಥಾಯಿ ಸಮಿತಿ ಸಭೆಯಲ್ಲಿ ನಮಗೆ ವೈಜ್ಞಾನಿಕ ಸಂಶೋಧನಾ ಮೂಲಸೌಕರ್ಯ ಹಂಚಿಕೆ ನಿರ್ವಹಣೆ ಮತ್ತು ನೆಟ್‌ವರ್ಕ್‌ಗಳ (SRIMAN-Scientific Research Infrastructure Sharing Maintenance and Networks) ಬಗ್ಗೆ ಅರಿವು ಮೂಡಿಸಲಾಯಿತು. ಶ್ರೀಮತಿ ಎಲ್ಲಿದ್ದಾಳೆ ಎಂಬುದು ನನ್ನ ಪ್ರತಿಕ್ರಿಯೆ!” ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
There’s simply no match for Modi Sarkar’s obsession with coining catchy acronyms. Today in the Standing Committee meeting we were made aware of Scientific Research Infrastructure Sharing Maintenance and Networks (SRIMAN). My response was where’s SRIMATHI! ?
— Jairam Ramesh (@Jairam_Ramesh) February 21, 2023
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸುಪ್ರಸಿದ್ಧ ನುಡಿಗಟ್ಟುಗಳು ಅಥವಾ ಪದಗಳೊಂದಿಗೆ ಸಂಬಂಧಿಸಿರುವ ಸಂಕ್ಷಿಪ್ತ ರೂಪಗಳ ಮೂಲಕ ಗುರುತಿಸಬಹುದಾದ ಹಲವಾರು ಯೋಜನೆಗಳು ಅಥವಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಉದಾಹರಣೆಗೆ, ಕೇಂದ್ರದ ವಾಯುಯಾನ ಯೋಜನೆ ಉಡಾನ್ ಕಾರ್ಯಕ್ರಮ ಹಿಂದಿಯಲ್ಲಿ ತನ್ನದೇ ಆದ ಅರ್ಥವನ್ನು ಹೊಂದಿದೆ, ಆದಾಗ್ಯೂ, ಇದು ‘ಉಡೇ ದೇಶ್ ಕಾ ಆಮ್ ನಾಗರಿಕ್’ (ದೇಶದ ಸಾಮಾನ್ಯ ನಾಗರಿಕರು ಹಾರಾಟ ಮಾಡಲಿ) ಅಥವಾ ಅಮೃತ್ (Atal Mission for Rejuvenation and Urban Transformation) ಎಂದಾಗಿದೆ.
ಇದನ್ನೂ ಓದಿ: ಭಿವಾನಿಯಲ್ಲಿ ಮುಸ್ಲಿಂ ಯುವಕರ ಹತ್ಯೆ; ಅಶೋಕ್ ಗೆಹ್ಲೋಟ್ ವಿರುದ್ಧ ಓವೈಸಿ ಟೀಕಾ ಪ್ರಹಾರ
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಕಾರ ಸಂಬಂಧಿತ ಮಧ್ಯಸ್ಥಗಾರರ ಜಾಲವನ್ನು ರಚಿಸುವ ಮೂಲಕ ದೇಶದ ವಿಜ್ಞಾನಿಗಳು, ಉದ್ಯಮ ವೃತ್ತಿಪರರು ಮತ್ತು ಸಂಶೋಧಕರಿಗೆ ಸಂಶೋಧನಾ ಮೂಲಸೌಕರ್ಯಗಳ ಸಮರ್ಥ ಬಳಕೆ ಮತ್ತು ವ್ಯಾಪಕ ಪ್ರವೇಶವನ್ನು ಉತ್ತೇಜಿಸುವ ಗುರಿಯನ್ನು SRIMAN ಹೊಂದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ