ಮೋದಿ ಬಗ್ಗೆ ಬಿಬಿಸಿ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಸಮಯ ಗಮನಿಸಿ, ಇದು ಆಕಸ್ಮಿಕ ಅಲ್ಲ, ರಾಜಕೀಯ: ಜೈಶಂಕರ್
ನಾವು ಯೂರೋಪಿಯನ್ ನಗರದಲ್ಲಿ ಯಾರೋ ಮಾಡಿದ ಸಾಕ್ಷ್ಯಚಿತ್ರ ಅಥವಾ ಭಾಷಣದ ಬಗ್ಗೆ ಚರ್ಚೆ ಮಾಡುತ್ತಿಲ್ಲ. ನಾವು ಮೇಲ್ನೋಟಕ್ಕೆ ನಡೆಸುತ್ತಿರುವ ರಾಜಕೀಯವನ್ನು ಚರ್ಚಿಸುತ್ತಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತ ಬಿಬಿಸಿಯ (BBC documentary)ವಿವಾದಾತ್ಮಕ ಸಾಕ್ಷ್ಯಚಿತ್ರದ ಸಮಯ ಆಕಸ್ಮಿಕವಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (S Jaishankar) ಮಂಗಳವಾರ ಹೇಳಿದ್ದಾರೆ. ಎಎನ್ಐ ಜೊತೆ ಮಾತನಾಡಿದ ಸಚಿವರು, “ನಾವು ಯೂರೋಪಿಯನ್ ನಗರದಲ್ಲಿ ಯಾರೋ ಮಾಡಿದ ಸಾಕ್ಷ್ಯಚಿತ್ರ ಅಥವಾ ಭಾಷಣದ ಬಗ್ಗೆ ಚರ್ಚೆ ಮಾಡುತ್ತಿಲ್ಲ. ನಾವು ಮೇಲ್ನೋಟಕ್ಕೆ ನಡೆಸುತ್ತಿರುವ ರಾಜಕೀಯವನ್ನು ಚರ್ಚಿಸುತ್ತಿದ್ದೇವೆ. ‘ಇತರ ವಿಧಾನಗಳಿಂದ ಯುದ್ಧ’ ಎಂಬ ನುಡಿಗಟ್ಟು ಇದೆ. ಇದು ಇತರ ವಿಧಾನಗಳಿಂದ ಮಾಡುವ ಯುದ್ಧ ಎಂದಿದ್ದಾರೆ. “ಒಂದು ತರಾತುರಿಯ ಕೆಲಸ ಮಾಡಿ ಇದು ಕೇವಲ ಸತ್ಯದ ಅನ್ವೇಷಣೆಯಾಗಿದೆ ಎಂದು ಹೇಳಿ ಅದನ್ನು ನಾವು 20 ವರ್ಷಗಳ ನಂತರ ಪ್ರಕಟಿಸಿದರೆ ಆ ಸಮಯವು ಆಕಸ್ಮಿಕವಾಗಿದೆ ಎಂದು ನೀವು ಭಾವಿಸುತ್ತೀರಾ? ಭಾರತದಲ್ಲಿ ಚುನಾವಣಾ ಕಾಲ ಶುರುವಾಗಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಲಂಡನ್ ಮತ್ತು ನ್ಯೂಯಾರ್ಕ್‌ನಲ್ಲಿ ಇದು ಆರಂಭವಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.
ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2002ರ ಗುಜರಾತ್ ದಂಗೆಯ ಸಂದರ್ಭದಲ್ಲಿ ನಡೆದ ಘಟನೆಗಳನ್ನು ವಿವರಿಸುವ ಬಿಬಿಸಿ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಇದನ್ನು ‘ಪ್ರಚಾರದ ತುಣುಕು’ ಎಂದು ಕರೆದಿರುವ ಕೇಂದ್ರವು India: The Modi Question’ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರವನ್ನು ಸಾಮಾಜಿಕ ಮಾಧ್ಯಮಗಳಿಂದಲೂ ನಿರ್ಬಂಧಿಸಿವೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಯೋಜನೆಗಳ ಸಂಕ್ಷಿಪ್ತ ರೂಪದ ಬಗ್ಗೆ ಕಾಂಗ್ರೆಸ್ ವ್ಯಂಗ್ಯ; ಶ್ರೀಮತಿ ಎಲ್ಲಿ ಎಂದ ಜೈರಾಮ್ ರಮೇಶ್
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮತ್ತು ಭಾರತದಲ್ಲಿ ಕೆಲವು ವಿಭಾಗಗಳು ಪ್ರಧಾನಿ ಮೋದಿ ಮತ್ತು ಭಾರತದ ಬೆಳವಣಿಗೆಯನ್ನು ಒಪ್ಪಿಕೊಳ್ಳಲಿಲ್ಲವೇ ಎಂಬ ಪ್ರಶ್ನೆಗೆ ಜೈಶಂಕರ್, “ನಿಮಗೆ ಅನುಮಾನವೇ? ಇದು ಕಲ್ಲಿನ ಮೇಲೆ ಬೀಳುವ ಹನಿಯಂತೆ. ಭಾರತ, ಸರ್ಕಾರದ, ಬಿಜೆಪಿಯ, ಪ್ರಧಾನ ಮಂತ್ರಿಯ ಬಗ್ಗೆ ನೀವು ತೀವ್ರವಾದ ಚಿತ್ರಣವನ್ನು ಹೇಗೆ ರೂಪಿಸುತ್ತೀರಿ? ಇದು ಒಂದು ದಶಕದಿಂದ ನಡೆಯುತ್ತಿದೆ. ಅದರ ಬಗ್ಗೆ ಭ್ರಮೆ ಬೇಡ”.
#WATCH | “If he has superior knowledge, wisdom, I am always willing to listen,” says EAM Dr S Jaishankar to ANI on Rahul Gandhi’s statement that EAM doesn’t know much about foreign policy matters & needs to learn more pic.twitter.com/4lHpXQMTON
— ANI (@ANI) February 21, 2023
“ನೀವು ಏನೇ ಅನ್ನಿ, ಹೊರಗೆ ಇಕೋ ಚೇಂಬರ್ ಇದೆ. ಇದು ಜಾಗತೀಕರಣಗೊಂಡ ಜಗತ್ತು. ಜನರು ರಾಜಕೀಯವನ್ನು ವಿದೇಶಕ್ಕೆ ಒಯ್ಯುತ್ತಾರೆ. ಕೆಲವೊಮ್ಮೆ ಭಾರತದಲ್ಲಿನ ರಾಜಕೀಯವು ನಮ್ಮ ಗಡಿಯಲ್ಲಿ ಹುಟ್ಟಿಕೊಳ್ಳುವುದಿಲ್ಲ, ಆದರೆ ಹೊರಗಿನಿಂದ ಹುಟ್ಟಿಕೊಳ್ಳುತ್ತದೆ. ಆಲೋಚನೆಗಳು ಮತ್ತು ಕಾರ್ಯಸೂಚಿಗಳು ಹೊರಗಿನಿಂದ ಬರುತ್ತವೆ. ಇದ್ದಕ್ಕಿದ್ದಂತೆ ಭಾರತದ ಕುರಿತಾದ ವರದಿಗಳು ಏಕೆ ಹೆಚ್ಚುತ್ತಿವೆ?” ಎಂದು ಅವರು ಹೇಳಿದರು. ನೀವು ಸಾಕ್ಷ್ಯಚಿತ್ರವನ್ನು ಮಾಡಲು ಬಯಸುವುದಾದರೆ, 1984 ರಲ್ಲಿ ದೆಹಲಿಯಲ್ಲಿ ಅನೇಕ ಘಟನೆಗಳು ನಡೆದವು. ನಾವು ಅದರ ಕುರಿತು ಸಾಕ್ಷ್ಯಚಿತ್ರ ಯಾಕಿಲ್ಲ? ಮಾನವತಾವಾದಿ ಎಂದು ಹೇಳುವುದಾದರೆ ತಪ್ಪು ಮಾಡಿದ ಜನರಿಗೆ ನ್ಯಾಯ ಸಿಗಬೇಕು. ರಾಜಕೀಯ ಕ್ಷೇತ್ರಕ್ಕೆ ಬರಲು ಧೈರ್ಯವಿಲ್ಲದ ಜನರು ಆಡುತ್ತಿರುವ ರಾಜಕೀಯ ಇದು ಎಂದು ಸಚಿವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:33 pm, Tue, 21 February 23