ಕಂಗನಾ ಕುರಿತು ಅಶ್ಲೀಲ ಹೇಳಿಕೆ ನೀಡಿದ್ದ ಸುಪ್ರಿಯಾಗೆ ಗೇಟ್​ ಪಾಸ್​ ಕೊಟ್ಟ ಕಾಂಗ್ರೆಸ್! ಹೊಸ ಅಭ್ಯರ್ಥಿ ಆಯ್ಕೆ

|

Updated on: Mar 28, 2024 | 2:20 PM

ಹಿಮಾಚಲದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಖ್ಯಾತ ನಟಿ ಕಂಗನಾ ರಣಾವತ್ ಮೇಲೆ ಕಾಂಗ್ರೆಸ್ ನಾಯಕಿ ಕೀಳುಮಟ್ಟದ ಕಾಮೆಂಟ್ ಮಾಡಿದ್ದರು. ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನೇಟ್ ಇನ್​​ಸ್ಟಾಗ್ರಾಮ್​​ನಲ್ಲಿ ಕಂಗನಾ ರಣಾವತ್ ಅವರ ಹಾಟ್ ಫೋಟೊವೊಂದನ್ನು ಪೋಸ್ಟ್ ಮಾಡಿ “ಕ್ಯಾ ಭಾವ್ ಚಲ್ ರಹಾ ಹೈ ಮಂಡಿ ಮೆ ಕೋಯಿ ಬತಾಯೇಗಾ? (ಮಂಡಿಯಲ್ಲಿನ ಏನ್ ರೇಟ್ ಇದೆ ಎಂದು ಯಾರಾದರೂ ಹೇಳುತ್ತೀರಾ?)” ಎಂದು ಬರೆದಿದ್ದರು. ಇದೀಗ ಕಾಂಗ್ರೆಸ್ ಸುಪ್ರಿಯಾಗೆ ಗೇಟ್​ ಪಾಸ್​ ಕೊಟ್ಟು, ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡಿದೆ.

ಕಂಗನಾ ಕುರಿತು ಅಶ್ಲೀಲ ಹೇಳಿಕೆ ನೀಡಿದ್ದ ಸುಪ್ರಿಯಾಗೆ ಗೇಟ್​ ಪಾಸ್​ ಕೊಟ್ಟ ಕಾಂಗ್ರೆಸ್! ಹೊಸ ಅಭ್ಯರ್ಥಿ ಆಯ್ಕೆ
ಕಂಗನಾ ಕುರಿತು ಅಶ್ಲೀಲ ಹೇಳಿಕೆ ನೀಡಿದ್ದ ಸುಪ್ರಿಯಾಗೆ ಗೇಟ್​ ಪಾಸ್​ ಕೊಟ್ಟ ಕಾಂಗ್ರೆಸ್! ಹೊಸ ಅಭ್ಯರ್ಥಿ ಆಯ್ಕೆ
Follow us on

ಹೊಸದಿಲ್ಲಿ, ಮಾರ್ಚ್​​ 28: ಹಿಮಾಚಲ ಪ್ರದೇಶದ ಮಂಡಿಯಿಂದ (Mandi -Himachal Pradesh) ಬಿಜೆಪಿ (BJP) ಅಭ್ಯರ್ಥಿಯಾಗಿರುವ ಖ್ಯಾತ ನಟಿ ಕಂಗನಾ ರಣಾವತ್ (Kangana Ranaut) ಕುರಿತು ಕೀಳುಮಟ್ಟದ ಹೇಳಿಕೆ ನೀಡಿದ್ದ ಸುಪ್ರಿಯಾ ಶ್ರೀನಾಟೆಗೆ (Supriya Shrinate) ಈ ಬಾರಿಯ ಲೋಕಸಭಾ ಚುನಾವಣೆ ಕಣದಿಂದ ಕಾಂಗ್ರೆಸ್ (Congress) ಗೇಟ್​ ಪಾಸ್​ ಕೊಟ್ಟಿದೆ. ಸುಪ್ರಿಯಾತ ಅನಾರೋಗ್ಯಕರ ಹೇಳಿಕೆ ವಿರುದ್ಧ ಎದುರಾದ ತೀವ್ರ ಆಕ್ರೋಶದ ಅಲೆ ಸಮ್ಮುಖದಲ್ಲಿ ಕಾಂಗ್ರೆಸ್ ಇಂದು ಸುಪ್ರಿಯಾ ಶ್ರೀನಾಟೆ ಅವರ ಉಮೇದುವಾರಿಕೆಯನ್ನು ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ ಕ್ಷೇತ್ರದಿಂದ (Maharajganj in Uttar Pradesh) ವಾಪಸ್ ಪಡೆದಿದೆ.

2019 ರಲ್ಲಿ ಸುಪ್ರಿಯಾ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಪಂಕಜ್ ಚೌಧರಿ ವಿರುದ್ಧ ಸೋತಿದ್ದರು ಎಂಬುದು ಗಮನಾರ್ಹ. ಕಂಗನಾ ರಣಾವತ್ ಮೇಲಿನ ಪೋಸ್ಟ್‌ನಲ್ಲಿ ಭಾರೀ ರಾಜಕೀಯ ಸುಳಿಯಲ್ಲಿ ಸಿಲುಕಿದ ಸುಪ್ರಿಯಾ ಬದಲಿಗೆ ವೀರೇಂದ್ರ ಚೌಧರಿ ಅವರನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿದೆ.

ಭಾರೀ ‘ಬೆಲೆ’ ತೆತ್ತ ಸುಪ್ರಿಯಾ ಶ್ರೀನೇಟ್​ಗೆ ಮುಂದೇನು?

ಇನ್ನು ಸುಪ್ರಿಯಾ ಶ್ರೀನೇಟ್ ಅವರು ಪಕ್ಷದ ಸಾಮಾಜಿಕ ಜಾಲತಾಣ ಮಾಧ್ಯಮ ಮುಖ್ಯಸ್ಥರಾಗಿ ತಮ್ಮ ಕೆಲಸದ ಮೇಲೆ ಕೇಂದ್ರೀಕರಿಸಲು ಬಯಸುತ್ತಾರೆ ಮತ್ತು ಚುನಾವಣೆಯಲ್ಲಿ ತನ್ನನ್ನು ಕಣಕ್ಕಿಳಿಸದಂತೆ ಪಕ್ಷವನ್ನು ಕೇಳಿಕೊಂಡಿದ್ದಾರೆ ಎಂದು ಕಾಂಗ್ರೆಸ್​​ ಮೂಲಗಳನ್ನು ಉಲ್ಲೇಖಿಸಿ NDTV ವರದಿ ಮಾಡಿದೆ. ಆಕೆಯ ಬದಲಿಗೆ ಅಭ್ಯರ್ಥಿಯನ್ನು ಸಹ ಸೂಚಿಸಿದ್ದೇನೆ ಎಂದು ಅವರು ಹೇಳಿದರು.

Also Read: ಏನಿದೆ ರೇಟ್? ಎಂದು ಕಂಗನಾ ಫೋಟೊ ಪೋಸ್ಟ್ ಮಾಡಿ ಅವಮಾನಿಸಿದ ಸುಪ್ರಿಯಾ ಶ್ರಿನೇಟ್; ಅಕೌಂಟ್ ಹ್ಯಾಕ್ ಎಂದು ಸಬೂಬು

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಖ್ಯಾತ ನಟಿ ಕಂಗನಾ ರಣಾವತ್ (Kangana Ranaut) ಮೇಲೆ ಕಾಂಗ್ರೆಸ್ (Congress) ನಾಯಕಿಯೊಬ್ಬರು ಇತ್ತೀಚೆಗೆ ಕೀಳುಮಟ್ಟದ ಕಾಮೆಂಟ್ ಮಾಡಿದ್ದರು.

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನೇಟ್ ಇನ್​​ಸ್ಟಾಗ್ರಾಮ್​​ನಲ್ಲಿ ಕಂಗನಾ ರಣಾವತ್ ಅವರ ಹಾಟ್ ಫೋಟೊವೊಂದನ್ನು ಪೋಸ್ಟ್ ಮಾಡಿ “ಕ್ಯಾ ಭಾವ್ ಚಲ್ ರಹಾ ಹೈ ಮಂಡಿ ಮೆ ಕೋಯಿ ಬತಾಯೇಗಾ? (ಮಂಡಿಯಲ್ಲಿನ ಏನ್ ರೇಟ್ ಇದೆ ಎಂದು ಯಾರಾದರೂ ಹೇಳುತ್ತೀರಾ?)” ಎಂದು ಬರೆದಿದ್ದರು. ವ್ಯಾಪಕ ಜನಾಕ್ರೋಶದ ನಂತರ ಆ ಪೋಸ್ಟ್ ಡಿಲೀಟ್ ಮಾಡಿದ್ದರು. ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಚ್‌ಎಸ್ ಅಹಿರ್, ನಟಿ ಕಂಗನಾ ರಣಾವತ್ ಅವರು ಮಂಡಿಯಿಂದ ಅಭ್ಯರ್ಥಿಯಾಗಿರುವುದನ್ನು ಉಲ್ಲೇಖಿಸಿ, “ಮಂಡಿ ಸೇ ರ*ಡಿ” ಎಂದು ನಿಂದಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:08 pm, Thu, 28 March 24