ಏನಿದೆ ರೇಟ್? ಎಂದು ಕಂಗನಾ ಫೋಟೊ ಪೋಸ್ಟ್ ಮಾಡಿ ಅವಮಾನಿಸಿದ ಸುಪ್ರಿಯಾ ಶ್ರಿನೇಟ್; ಅಕೌಂಟ್ ಹ್ಯಾಕ್ ಎಂದು ಸಬೂಬು

ಕಂಗನಾ ರಣಾವತ್‌ ಬಗ್ಗೆ ವಿಪಕ್ಷಗಳ ನಿಂದನೀಯ ಟ್ವೀಟ್‌ಗಳ ವಿರುದ್ಧ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದು , ಮಹಿಳೆಯ ಮೇಲೆ ಲೈಂಗಿಕ ಅವಹೇಳನಕಾರಿ ದಾಳಿಯನ್ನು ಖಂಡಿಸಿದ್ದಾರೆ. ಜನಾಕ್ರೋಶ ಕಂಡುಬರುತ್ತಿದ್ದಂತೆ ಶ್ರಿನೇಟ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಅನ್ನು ಅಳಿಸಿದ್ದು ತನ್ನ ಮೆಟಾ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ

ಏನಿದೆ ರೇಟ್? ಎಂದು ಕಂಗನಾ ಫೋಟೊ ಪೋಸ್ಟ್ ಮಾಡಿ ಅವಮಾನಿಸಿದ ಸುಪ್ರಿಯಾ ಶ್ರಿನೇಟ್; ಅಕೌಂಟ್ ಹ್ಯಾಕ್ ಎಂದು ಸಬೂಬು
ಕಂಗನಾ ರಣಾವತ್-ಸುಪ್ರಿಯಾ ಶ್ರಿನೇಟ್
Follow us
ರಶ್ಮಿ ಕಲ್ಲಕಟ್ಟ
|

Updated on:Mar 25, 2024 | 7:52 PM

ದೆಹಲಿ ಮಾರ್ಚ್  25: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ ನಂತರ ನಟಿ ಕಂಗನಾ ರಣಾವತ್ (Kangana Ranaut) ಮೇಲೆ ಕಾಂಗ್ರೆಸ್ (Congress) ನಾಯಕರು ಮತ್ತು ಬೆಂಬಲಿಗರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನೇಟ್ ಕೂಡಾ ಇನ್​​ಸ್ಟಾಗ್ರಾಮ್​​ನಲ್ಲಿ ಕಂಗನಾ ರಣಾವತ್ ಅವರ ಹಾಟ್ ಫೋಟೊವೊಂದನ್ನು ಪೋಸ್ಟ್ ಮಾಡಿ “ಕ್ಯಾ ಭಾವ್ ಚಲ್ ರಹಾ ಹೈ ಮಂಡಿ ಮೆ ಕೋಯಿ ಬತಾಯೇಗಾ? (ಮಂಡಿಯಲ್ಲಿನ ಏನ್ ರೇಟ್ ಇದೆ ಎಂದು ಯಾರಾದರೂ ಹೇಳುತ್ತೀರಾ?)” ಎಂದು ಬರೆದಿದ್ದು, ಜನಾಕ್ರೋಶ ನಂತರ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಚ್‌ಎಸ್ ಅಹಿರ್, ನಟಿ ಕಂಗನಾ ರಣಾವತ್ ಅವರು ಮಂಡಿಯಿಂದ ಅಭ್ಯರ್ಥಿಯಾಗಿರುವುದನ್ನು ಉಲ್ಲೇಖಿಸಿ, “ಮಂಡಿ ಸೇ ರ*ಡಿ” ಎಂದು ನಿಂದಿಸಿದ್ದಾರೆ.

ಕಂಗನಾ ರಣಾವತ್‌ ಬಗ್ಗೆ ವಿಪಕ್ಷಗಳ ನಿಂದನೀಯ ಟ್ವೀಟ್‌ಗಳ ವಿರುದ್ಧ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದು , ಮಹಿಳೆಯ ಮೇಲೆ ಲೈಂಗಿಕ ಅವಹೇಳನಕಾರಿ ದಾಳಿಯನ್ನು ಖಂಡಿಸಿದ್ದಾರೆ.

ಜನಾಕ್ರೋಶ ಕಂಡುಬರುತ್ತಿದ್ದಂತೆ ಶ್ರಿನೇಟ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಅನ್ನು ಅಳಿಸಿದ್ದು ತನ್ನ ಮೆಟಾ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದು ತನ್ನ ಅಣಕ ಖಾತೆ ಮಾಡಿದ ಕಿಡಿಗೇಡಿತನ. ಆದಾಗ್ಯೂ ತನ್ನ ಅಣಕ ಖಾತೆಯಿಂದ ಪ್ರಾರಂಭವಾದ ಕಿಡಿಗೇಡಿತನವು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೇಗೆ ಪ್ರತಿಫಲಿಸುತ್ತದೆ ಎಂಬುದನ್ನು ಅವರು ವಿವರಿಸಿಲ್ಲ.

ಇದನ್ನೂ ಓದಿ: 2024 Lok Sabha Elections: ವಯನಾಡ್ ಕ್ಷೇತ್ರದಲ್ಲಿ ರಾಹುಲ್ ಗಾಂಧಿ vs ಕೇರಳ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್

ಖಡಕ್ ಉತ್ತರ ನೀಡಿದ ಕಂಗನಾ

ತನ್ನ ಚಿತ್ರದೊಂದಿಗೆ ಅವಹೇಳನಾಕಾರಿ ಬರಹ ಪೋಸ್ಟ್ ಮಾಡಿದ ಸುಪ್ರಿಯಾ ಅವರಿಗೆ ಪ್ರತಿಕ್ರಿಯೆ ನೀಡಿದ ಕಂಗನಾ ,ಡಿಯರ್ ಸುಪ್ರಿಯಾ ಜೀ ಕಲಾವಿದೆಯಾಗಿ ಕಳೆದ 20 ವರ್ಷಗಳ ನನ್ನ ವೃತ್ತಿಜೀವನದಲ್ಲಿ ನಾನು ಎಲ್ಲಾ ರೀತಿಯ ಮಹಿಳೆಯ ಪಾತ್ರವನ್ನು ನಿರ್ವಹಿಸಿದ್ದೇನೆ. ಕ್ವೀನ್​​ನಲ್ಲಿನ ಮುಗ್ದ ಹುಡುಗಿಯಿಂದ ಹಿಡಿದು ಢಾಕಡ್‌ನಲ್ಲಿ ಮೋಹಕ ಗೂಢಚಾರಿಕೆಯವರೆಗೆ, ಮಣಿಕರ್ಣಿಕಾದಲ್ಲಿ ದೇವತೆಯಿಂದ ಚಂದ್ರಮುಖಿಯಲ್ಲಿನ ಪಿಶಾಚಿ ವರೆಗೆ, ರಜ್ಜೋದಲ್ಲಿ ವೇಶ್ಯೆಯಿಂದ ತಲೈವಿಯ ಕ್ರಾಂತಿಕಾರಿ ನಾಯಕಿವರೆಗೆ.

ನಾವು ಪೂರ್ವಾಗ್ರಹಗಳ ಸಂಕೋಲೆಯಿಂದ ನಮ್ಮ ಹೆಣ್ಣುಮಕ್ಕಳನ್ನು ಮುಕ್ತಗೊಳಿಸಬೇಕು, ಅವರ ದೇಹದ ಅಂಗಗಳ ಬಗ್ಗೆ ಕುತೂಹಲ ಬಿಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನಾವು ಲೈಂಗಿಕ ಕೆಲಸಗಾರರನ್ನು ಜೀವನ ಅಥವಾ ಸಂದರ್ಭಗಳಿಗೆ ಸವಾಲು ಹಾಕುವುದನ್ನು ಕೆಲವು ರೀತಿಯ ನಿಂದನೆ ಅಥವಾ ನಿಂದೆಯಾಗಿ ಬಳಸುವುದನ್ನು ತಡೆಯಬೇಕು. ಪ್ರತಿಯೊಬ್ಬ ಮಹಿಳೆಯೂ ಅವಳ ಘನತೆಗೆ ಅರ್ಹಳು ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:50 pm, Mon, 25 March 24