2024 Lok Sabha Elections: ವಯನಾಡ್ ಕ್ಷೇತ್ರದಲ್ಲಿ ರಾಹುಲ್ ಗಾಂಧಿ vs ಕೇರಳ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್
ಕೋಯಿಕ್ಕೋಡ್ ಮೂಲದ ಸುರೇಂದ್ರನ್, ಈ ಹಿಂದೆ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಪತ್ತನಂತಿಟ್ಟದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕಾಂಗ್ರೆಸ್ ಮತ್ತು ಎಡ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದ್ದ ಇವರು ಮೂರನೇ ಸ್ಥಾನ ಪಡೆದರು. ಸುರೇಂದ್ರನ್ ಅವರು 2016 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತು 2019 ರಲ್ಲಿ ನಡೆದ ಉಪಚುನಾವಣೆಯಲ್ಲಿಯೂ ಸ್ಪರ್ಧಿಸಿ ಸೋತಿದ್ದಾರೆ.
ದೆಹಲಿ ಮಾರ್ಚ್ 25: ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok sabkha Election) ವಯನಾಡ್ (Wayanad) ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಕೇರಳದ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್ (K Surendran) ಕಣಕ್ಕಿಳಿಯಲಿದ್ದಾರೆ. 2009 ರಿಂದ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಭದ್ರಕೋಟೆಯಾಗಿದೆ ವಯನಾಡ್. 2019 ರಲ್ಲಿ ರಾಹುಲ್ ಗಾಂಧಿ ಅಮೇಠಿಯಲ್ಲಿ ಮತ್ತು ವಯನಾಡ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಅಮೇಠಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಸೋತಿದ್ದರೂ, ವಯನಾಡಿನಲ್ಲಿ ಅವರು ಭರ್ಜರಿ ಗೆಲುವು ಸಾಧಿಸಿದ್ದರು. ಸುರೇಂದ್ರನ್, ಕೇರಳದ ರಾಜಕೀಯ ಕ್ಷೇತ್ರದಲ್ಲಿ ಪ್ರಬಲವಾದ ಕಾಂಗ್ರೆಸ್-ಎಡ ಮೈತ್ರಿಗೆ ಸವಾಲೆಸೆಯುವ ಕೆಲಸವನ್ನು ಮಾಡುತ್ತಲೇ ಇರುತ್ತಾರೆ. ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದರೂ, ದಕ್ಷಿಣ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ತೀವ್ರ ಪ್ರತಿಸ್ಪರ್ಧಿಗಳಾಗಿ ಉಳಿದಿವೆ.
ಕೋಯಿಕ್ಕೋಡ್ ಮೂಲದ ಸುರೇಂದ್ರನ್, ಈ ಹಿಂದೆ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಪತ್ತನಂತಿಟ್ಟದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕಾಂಗ್ರೆಸ್ ಮತ್ತು ಎಡ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದ್ದ ಇವರು ಮೂರನೇ ಸ್ಥಾನ ಪಡೆದರು. ಸುರೇಂದ್ರನ್ ಅವರು 2016 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತು 2019 ರಲ್ಲಿ ನಡೆದ ಉಪಚುನಾವಣೆಯಲ್ಲಿಯೂ ಸ್ಪರ್ಧಿಸಿ ಸೋತಿದ್ದಾರೆ. 2020 ರಲ್ಲಿ ಬಿಜೆಪಿ ಕೇರಳ ಘಟಕದ ಮುಖ್ಯಸ್ಥರಾಗಿ ನೇಮಕಗೊಂಡ ಸುರೇಂದ್ರನ್ ಅವರು ಶಬರಿಮಲೆ ದೇವಸ್ಥಾನಕ್ಕೆ ಯುವತಿಯರ ಪ್ರವೇಶದ ವಿರುದ್ಧ ಪ್ರತಿಭಟನೆಗಳನ್ನು ಮುನ್ನಡೆಸಿ ಮುನ್ನಲೆಗೆ ಬಂದಿದ್ದರು.
ವಯನಾಡಿನ ಚುನಾವಣಾ ಕದನವು ಕೇರಳದ ಪ್ರಮುಖ ಸ್ಪರ್ಧೆಗಳಲ್ಲಿ ಒಂದಾಗಿದೆ. ತಿರುವನಂತಪುರಂ ಕ್ಷೇತ್ರದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮೂರು ಬಾರಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಸವಾಲು ಹಾಕಲಿದ್ದಾರೆ. ಬಿಜೆಪಿಯ ಇತ್ತೀಚಿನ ಅಭ್ಯರ್ಥಿಗಳ ಪಟ್ಟಿಯು ನಟ ಕಂಗನಾ ರನೌತ್ ಮತ್ತು ಕಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯರಂತಹ ಗಮನಾರ್ಹ ವ್ಯಕ್ತಿಗಳನ್ನು ಒಳಗೊಂಡಿದೆ. ಇದು ವಿವಿಧ ರಾಜ್ಯಗಳಾದ್ಯಂತ ಅನುಭವಿ ರಾಜಕಾರಣಿಗಳು ಮತ್ತು ಹೊಸಬರನ್ನು ಪ್ರತಿಬಿಂಬಿಸುತ್ತದೆ. ಕೇರಳದ 20 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಚುನಾವಣೆ ನಡೆಯಲಿದೆ.
ರಾಹುಲ್ ಗಾಂಧಿ ಅಮೇಠಿಯಲ್ಲಿ ಸೋತಂತೆ ಇಲ್ಲಿಯೂ ಸೋಲುತ್ತಾರೆ: ಸುರೇಂದ್ರನ್
2019 ರಲ್ಲಿ ರಾಹುಲ್ ಗಾಂಧಿ ನಾಲ್ಕು ಲಕ್ಷ ಮತಗಳ ಅಂತರದಿಂದ ಗೆದ್ದಿರುವ ಕ್ಷೇತ್ರವಾದ ವಯನಾಡ್‌ನಲ್ಲಿ ಈ ಬಾರಿ ಅವರ ಪ್ರತಿಸ್ಪರ್ಧಿ ಬಿಜೆಪಿ ಕೇರಳದ ಮುಖ್ಯಸ್ಥ ಕೆ ಸುರೇಂದ್ರನ್, ಅವರು ಕಾಂಗ್ರೆಸ್ ಸಂಸದ “ಅಮೇಠಿಯಲ್ಲಿ ಸೋತಂತೆ ಸೋಲಲಿದ್ದಾರೆ ಎಂದು ಹೇಳಿದ್ದಾರೆ. ಕೇರಳದಲ್ಲಿ ರಾಹುಲ್ ಗಾಂಧಿ ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸ್ಪರ್ಧಿಸುತ್ತಿರುವ ವಯನಾಡ್ ಕ್ಷೇತ್ರದಲ್ಲಿ ಬಿಜೆಪಿ ಸುರೇಂದ್ರನ್ ಅವರನ್ನು ಕಣಕ್ಕಿಳಿಸಿದರೆ ಎಡರಂಗವು ಹಿರಿಯ ಸಿಪಿಐ ನಾಯಕಿ ಅನ್ನಿ ರಾಜಾ ಅವರನ್ನು ಕಣಕ್ಕಿಳಿಸಿದೆ.
ಇಂಡಿಯಾ ಬಣದ ಇಬ್ಬರು ಹಿರಿಯ ನಾಯಕರಾದ ರಾಹುಲ್ ಗಾಂಧಿ ಮತ್ತು ಅನ್ನಿ ರಾಜಾ ಅವರನ್ನು ಎದುರಿಸಲು ಬಿಜೆಪಿಯ ಕೇಂದ್ರ ನಾಯಕತ್ವವು ಭಾನುವಾರ ಸುರೇಂದ್ರನ್ ಅವರ ಉಮೇದುವಾರಿಕೆಯನ್ನು ಘೋಷಿಸಿದೆ. ಅಭ್ಯರ್ಥಿಯಾಗಿ ಹೆಸರು ಘೋಷಣೆ ಆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ ಸುರೇಂದ್ರನ್, ರಾಹುಲ್ ಗಾಂಧಿಗೆ 2019 ರಲ್ಲಿ ಅಮೇಠಿಯಲ್ಲಿ ಎದುರಾದ ಅದೇ ಫಲಿತಾಂಷ ವಯನಾಡಿನಲ್ಲಿ ಎದುರಿಸಬೇಕಾಗುತ್ತದೆ. ವಯನಾಡು ಅಭಿವೃದ್ಧಿಯ ಬಿಕ್ಕಟ್ಟಿನ ಕ್ಷೇತ್ರವಾಗಿದೆ, ಕ್ಷೇತ್ರಕ್ಕೆ ರಾಹುಲ್ ಗಾಂಧಿ ಏನೂ ಮಾಡಿಲ್ಲ ಎಂದು ಸುರೇಂದ್ರನ್ ಹೇಳಿದ್ದಾರೆ.
ಇದನ್ನೂ ಓದಿ: JNU Elections: ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲಿ ಎಡಪಕ್ಷ ಬೆಂಬಲಿತ ಗುಂಪಿಗೆ ಭರ್ಜರಿ ಗೆಲುವು
ಕಳೆದ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸಿಪಿಐನ ಪಿಪಿ ಸುನೀರ್ ಅವರನ್ನು 4.31 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಬಿಜೆಪಿಯ ಮಿತ್ರಪಕ್ಷವಾದ ಭಾರತ್ ಧರ್ಮ ಜನಸೇನಾ (ಬಿಡಿಜೆಎಸ್) ತನ್ನ ಮುಖ್ಯಸ್ಥ ತುಷಾರ್ ವೆಲ್ಲಪ್ಪಲ್ಲಿ ಅವರನ್ನು ಕಣಕ್ಕಿಳಿಸಿತ್ತು, ಅವರು ವಯನಾಡಿನಲ್ಲಿ ಕೇವಲ 78,816 ಮತಗಳನ್ನು ಗಳಿಸಿದರು. “ಕೇಂದ್ರ ನಾಯಕತ್ವವು ನನಗೆ ಜವಾಬ್ದಾರಿಯನ್ನು ವಹಿಸಿದೆ. ಅವರು ವಯನಾಡು ಕ್ಷೇತ್ರದಲ್ಲಿ ಕಣಕ್ಕಿಳಿಯುವಂತೆ ಹೇಳಿದ್ದಾರೆ. ಇಂಡಿಯಾ ಬಣದ ಹಿರಿಯ ನಾಯಕರು ಒಂದೇ ಕ್ಷೇತ್ರದಲ್ಲಿ ಏಕೆ ಸ್ಪರ್ಧಿಸುತ್ತಿದ್ದಾರೆ ಎಂದು ವಯನಾಡಿನ ಜನರು ಖಂಡಿತವಾಗಿಯೂ ಕೇಳುತ್ತಾರೆ ಎಂದಿದ್ದಾರೆ ಸುರೇಂದ್ರನ್.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:07 pm, Mon, 25 March 24