ಪಶ್ಚಿಮ ಬಂಗಾಳದ ತಮ್ಲುಕ್‌ನಲ್ಲಿ ಟಿಎಂಸಿಯ ದೇಬಂಗ್ಶು ಭಟ್ಟಾಚಾರ್ಯ ವಿರುದ್ಧ ಕಲ್ಕತ್ತಾ ಹೈಕೋರ್ಟ್ ಮಾಜಿ ನ್ಯಾಯಾಧೀಶರನ್ನು ಕಣಕ್ಕಿಳಿಸಿದ ಬಿಜೆಪಿ
ಬಿಜೆಪಿ ಅಭಿಜಿತ್ ಗಂಗೋಪಾಧ್ಯಾಯ ಅವರನ್ನು ತೃಣಮೂಲ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಸೆಲ್‌ನ ಮುಖ್ಯಸ್ಥರಾಗಿರುವ 27 ವರ್ಷದ ದೇಬಂಗ್ಶು ಭಟ್ಟಾಚಾರ್ಯ ಅವರ ವಿರುದ್ಧ ಕಣಕ್ಕಿಳಿದಿದ್ದಾರೆ.ನ್ಯಾಯಮೂರ್ತಿ (ನಿವೃತ್ತ) ಅಭಿಜಿತ್ ಗಂಗೋಪಾಧ್ಯಾಯ ಅವರು 2021ರಲ್ಲಿ ಸುದ್ದಿಯಾಗಿದ್ದರು.
ದೆಹಲಿ ಮಾರ್ಚ್ 25: ಲೋಕಸಭಾ ಚುನಾವಣೆಗೆ (Lok Sabha Election) ಬಿಜೆಪಿ (BJP) ಭಾನುವಾರ 111 ಸ್ಥಾನಗಳಿಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಐದನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಈ ತಿಂಗಳ ಆರಂಭದಲ್ಲಿ ಕಲ್ಕತ್ತಾ ಹೈಕೋರ್ಟ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಅಭಿಜಿತ್ ಗಂಗೋಪಾಧ್ಯಾಯ (Abhijit Gangopadhyay) ಹೆಸರು ಇದೆ. ಅಭಿಜಿತ್ ಅವರು ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ್ ಜಿಲ್ಲೆಯ ತಮ್ಲುಕ್ ಸಂಸದೀಯ ಸ್ಥಾನದಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿ ಅಭಿಜಿತ್ ಗಂಗೋಪಾಧ್ಯಾಯ ಅವರನ್ನು ತೃಣಮೂಲ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಸೆಲ್‌ನ ಮುಖ್ಯಸ್ಥರಾಗಿರುವ 27 ವರ್ಷದ ದೇಬಂಗ್ಶು ಭಟ್ಟಾಚಾರ್ಯ ಅವರ ವಿರುದ್ಧ ಕಣಕ್ಕಿಳಿದಿದ್ದಾರೆ. ಮಾರ್ಚ್ 10 ರಂದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದ ಎಲ್ಲಾ 42 ಸ್ಥಾನಗಳಿಗೆ ಒಂದೇ ಬಾರಿಗೆ ಹೆಸರುಗಳನ್ನು ಘೋಷಿಸಿದರು.
ನ್ಯಾಯಮೂರ್ತಿ (ನಿವೃತ್ತ) ಅಭಿಜಿತ್ ಗಂಗೋಪಾಧ್ಯಾಯ ಅವರು 2021ರಲ್ಲಿ ಸುದ್ದಿಯಾಗಿದ್ದರು. ಕಲ್ಕತ್ತಾ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಾಗಿದ್ದಾಗ, ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ (ಡಬ್ಲ್ಯುಬಿಎಸ್‌ಎಸ್‌ಸಿ) ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣವನ್ನು ಟೀಕೆ ಮಾಡಿದ್ದು ಪ್ರಕರಣದ ತನಿಖೆ ನಡೆಸುವಂತೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನಿರ್ದೇಶನ ನೀಡಿದ್ದರು.
ಕೇಂದ್ರೀಯ ಸಂಸ್ಥೆಯಾಗಿರುವ ಸಿಬಿಐ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ, ಅಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಪಕ್ಷವು ರಾಜ್ಯದಲ್ಲಿ ಕಾಲಿಡಲು ಪ್ರಯತ್ನಿಸುತ್ತಿರುವಾಗ, ಅವರ ತೀರ್ಪುಗಳ ಹಿಂದೆ ‘ರಾಜಕೀಯ ಉದ್ದೇಶಗಳು’ ಇವೆ ಎಂದು ಆರೋಪಿಸಲಾಗಿದೆ. ಆದಾಗ್ಯೂರಾಜಕೀಯಕ್ಕಾಗಿ ನ್ಯಾಯಾಂಗ ತೊರೆದು ಬಿಜೆಪಿ ಸೇರಿರುವುದು ಇಂತಹ ಆರೋಪಗಳಿಗೆ ಪುಷ್ಠಿ ನೀಡಿದೆ.
ಮಾಜಿ ನ್ಯಾಯಾಧೀಶರ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ ಅವರು ‘ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ನಿರಾಕರಿಸಿದ ನಂತರ’ ಅವರು ನಾಯಕರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ‘ಬೆಂಚ್‌ನಲ್ಲಿ ಕುಳಿತಿದ್ದ ಬಿಜೆಪಿ ಬಾಬು’ ಅವರನ್ನು ಸೋಲಿಸುವುದಾಗಿ ಶಪಥ ಮಾಡಿದರು.
“ತಯಾರಾಗಿರಿ. ನೀವು ಎಲ್ಲಿಂದ ಸ್ಪರ್ಧಿಸುತ್ತೀರೋ, ನಾನು ನಿಮ್ಮ ಹೋರಾಟಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸುತ್ತೇನೆ ಎಂದು ಮಮತಾ ಹೇಳಿದ್ದರು. ತಮ್ಲುಕ್‌ನಿಂದ ಗಂಗೋಪಾಧ್ಯಾಯ ಅವರ ನಾಮನಿರ್ದೇಶನವನ್ನು ನಿರೀಕ್ಷಿಸಿದ ತೃಣಮೂಲವು ಮಾಜಿ ನ್ಯಾಯಾಧೀಶರ ವಿರುದ್ಧ ಭಟ್ಟಾಚಾರ್ಯರನ್ನು ಕಣಕ್ಕಿಳಿಸಿದೆ.
ಇದನ್ನೂ ಓದಿ: ಸುವೇಂದು ಅಧಿಕಾರಿ vs ಅಭಿಷೇಕ್ ಬ್ಯಾನರ್ಜಿ: ಬಿಜೆಪಿಗೆ ಟಿಎಂಸಿ ಬಹಿರಂಗ ಸವಾಲು
ಭಟ್ಟಾಚಾರ್ಯ ಅವರು ಪಕ್ಷದ ವಿದ್ಯಾರ್ಥಿ ಘಟಕವಾದ ತೃಣಮೂಲ ಛಾತ್ರ ಪರಿಷತ್ತಿನ ಸದಸ್ಯರಾಗಿ ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.2022 ರಿಂದ ಪಕ್ಷದ ಸಾಮಾಜಿಕ ಮಾಧ್ಯಮ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಚುನಾವಣೆಯ್ಲಿ ‘ಖೇಲಾ ಹೋಬೆ’ ಪ್ರಚಾರ ಗೀತೆ ಬರೆದದ್ದೂ ಇದೇ ಭಟ್ಟಾಚಾರ್ಯ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ