ಅಸ್ಸಾಂ: ಭಾರತ್​ ಜೋಡೋ ನ್ಯಾಯ ಯಾತ್ರೆಗೆ ಮುತ್ತಿಗೆ, ರಾಹುಲ್ ವಿರುದ್ಧ ಘೋಷಣೆ, ಕಾಂಗ್ರೆಸ್​ ಇಂದು ಪ್ರತಿಭಟನೆ

|

Updated on: Jan 22, 2024 | 7:45 AM

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ನೇತೃತ್ವದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ(Bharat Jodo Nyay Yatra) ಪ್ರಸ್ತುತ ಅಸ್ಸಾಂನಲ್ಲಿದೆ. ಈ ಸಮಯದಲ್ಲಿ, ನಾಗಾವ್ ಜಿಲ್ಲೆಯ ರಸ್ತೆ ಬದಿಯ ಉಪಾಹಾರ ಗೃಹದ ಬಳಿ ಜನಸಮೂಹ ಯಾತ್ರೆಯನ್ನು ಸುತ್ತುವರೆದಿತ್ತು.

ಅಸ್ಸಾಂ: ಭಾರತ್​ ಜೋಡೋ ನ್ಯಾಯ ಯಾತ್ರೆಗೆ ಮುತ್ತಿಗೆ, ರಾಹುಲ್ ವಿರುದ್ಧ ಘೋಷಣೆ, ಕಾಂಗ್ರೆಸ್​ ಇಂದು ಪ್ರತಿಭಟನೆ
ರಾಹುಲ್ ಗಾಂಧಿ
Image Credit source: India Today
Follow us on

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ನೇತೃತ್ವದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ(Bharat Jodo Nyay Yatra) ಪ್ರಸ್ತುತ ಅಸ್ಸಾಂನಲ್ಲಿದೆ. ಈ ಸಮಯದಲ್ಲಿ, ನಾಗಾವ್ ಜಿಲ್ಲೆಯ ರಸ್ತೆ ಬದಿಯ ಉಪಾಹಾರ ಗೃಹದ ಬಳಿ ಜನಸಮೂಹ ಯಾತ್ರೆಯನ್ನು ಸುತ್ತುವರೆದಿತ್ತು.

ಈ ವೇಳೆ ನೆರೆದಿದ್ದವರು ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್ ಶಾಸಕ ರಕಿಬುಲ್ ಹುಸೇನ್ ಅವರನ್ನೂ ವಿರೋಧಿಸಿದರು. ಜನರು ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಅನ್ಯಾಯದ ಮೆರವಣಿಗೆ ಎಂದು ಕರೆದಿದ್ದಾರೆ. ಪರಿಸ್ಥಿತಿಯನ್ನು ಗ್ರಹಿಸಿದ ಭದ್ರತಾ ಸಿಬ್ಬಂದಿ ಗಾಂಧಿ ಮತ್ತು ಇತರ ನಾಯಕರನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ದರು.

ಇದಲ್ಲದೇ ಭಾನುವಾರವೂ ಕಾಂಗ್ರೆಸ್ ಕಾರ್ಯಕರ್ತರ ವಾಹನಗಳ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ ವಿದ್ಯಾರ್ಥಿ ವಿಭಾಗದ ಮೂವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾತ್ರಾ ಬೆಂಗಾವಲು ವಾಹನದ ಮೇಲಿನ ದಾಳಿಯನ್ನು ಯೋಜಿತ ದಾಳಿ ಎಂದು ಕಾಂಗ್ರೆಸ್ ಹೇಳಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದು, ಅಸ್ಸಾಂನಲ್ಲಿ ಯಾತ್ರೆ ಪ್ರವೇಶಿಸಿದಾಗಿನಿಂದ, ದೇಶದ ಅತ್ಯಂತ ಭ್ರಷ್ಟ ಸಿಎಂ ನಮ್ಮ ಬೆಂಗಾವಲು, ನಾಯಕರು ಮತ್ತು ಆಸ್ತಿಪಾಸ್ತಿಗೆ ಹಾನಿ ಮಾಡಲು ತನ್ನ ಗೂಂಡಾಗಳನ್ನು ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ಓದಿ: ಅಸ್ಸಾಂ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ವಿರುದ್ಧ ಎಫ್​ಐಆರ್​ ದಾಖಲು

ಪ್ರತಿಯೊಬ್ಬ ಭಾರತೀಯನೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಘಟನೆ ಬಿಜೆಪಿಯ ಫ್ಯಾಸಿಸಂ ಮತ್ತು ಗೂಂಡಾಗಿರಿಯನ್ನು ಬಯಲು ಮಾಡಿದೆ. ಯಾತ್ರೆಯ ಮೇಲಿನ ದಾಳಿಯ ವಿರುದ್ಧ ಭಾರತದಾದ್ಯಂತ ಪಿಸಿಸಿಗಳು ಮತ್ತು ಡಿಸಿಸಿಗಳು ರಾಜ್ಯದಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸಲಿವೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಾರತ್ ಜೋಡೋ ನ್ಯಾಯ ಯಾತ್ರೆಯು ಗುವಾಹಟಿಯಲ್ಲಿ ನಿಗದಿಪಡಿಸಿದ ಮಾರ್ಗ ಮತ್ತು ನಿಯಮಗಳನ್ನು ಉಲ್ಲಂಘಿಸಿದರೆ, ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ