Bilkis Bano Case: ಬಿಲ್ಕಿಸ್ ಬಾನು ಪ್ರಕರಣ, ಗೋಧ್ರಾ ಜೈಲಿನ ಅಧಿಕಾರಗಳ ಮುಂದೆ ಶರಣಾದ ಎಲ್ಲಾ 11 ಅಪರಾಧಿಗಳು

ಗುಜರಾತ್ ಗಲಭೆ ಸಂತ್ರಸ್ತೆ ಬಿಲ್ಕಿಸ್ ಬಾನು(Bilkis Bano) ಪ್ರಕರಣದ ಎಲ್ಲಾ 11 ಅಪರಾಧಿಗಳು ಭಾನುವಾರ ರಾತ್ರಿ ಗೋಧ್ರಾ ಜೈಲಿನ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಜನವರಿ 8 ರಂದು ಸುಪ್ರೀಂ ಕೋರ್ಟ್ ಅವರ ಶಿಕ್ಷೆಯನ್ನು ರದ್ದುಗೊಳಿಸಿತ್ತು ಮತ್ತು ಜನವರಿ 21 ರೊಳಗೆ ಶರಣಾಗುವಂತೆ ಸೂಚಿಸಿತ್ತು.

Bilkis Bano Case: ಬಿಲ್ಕಿಸ್ ಬಾನು ಪ್ರಕರಣ, ಗೋಧ್ರಾ ಜೈಲಿನ ಅಧಿಕಾರಗಳ ಮುಂದೆ ಶರಣಾದ ಎಲ್ಲಾ 11 ಅಪರಾಧಿಗಳು
ಜೈಲುImage Credit source: Telegraph
Follow us
ನಯನಾ ರಾಜೀವ್
|

Updated on: Jan 22, 2024 | 8:42 AM

ಗುಜರಾತ್ ಗಲಭೆ ಸಂತ್ರಸ್ತೆ ಬಿಲ್ಕಿಸ್ ಬಾನು(Bilkis Bano) ಪ್ರಕರಣದ ಎಲ್ಲಾ 11 ಅಪರಾಧಿಗಳು ಭಾನುವಾರ ರಾತ್ರಿ ಗೋಧ್ರಾ ಜೈಲಿನ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಜನವರಿ 8 ರಂದು ಸುಪ್ರೀಂ ಕೋರ್ಟ್ ಅವರ ಶಿಕ್ಷೆಯನ್ನು ರದ್ದುಗೊಳಿಸಿತ್ತು ಮತ್ತು ಜನವರಿ 21 ರೊಳಗೆ ಶರಣಾಗುವಂತೆ ಸೂಚಿಸಿತ್ತು.

ಆರೋಪಿಗಳು ಭಾನುವಾರ ತಡರಾತ್ರಿ ಜೈಲು ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ಎಂದು ಇನ್‌ಸ್ಪೆಕ್ಟರ್ ಎನ್‌ಎಲ್ ದೇಸಾಯಿ ತಿಳಿಸಿದ್ದಾರೆ. ಬಿಲ್ಕಿಸ್ ಬಾನು ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರ ಹತ್ಯೆಯ ಅಪರಾಧಿಗಳು ಶರಣಾಗಲು ಹೆಚ್ಚಿನ ಸಮಯವನ್ನು ಕೋರಿದ್ದರು.

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ, ಅಪರಾಧಿಗಳು ತಮ್ಮ ಆರೋಗ್ಯ ಮತ್ತು ಅವರ ಕುಟುಂಬ ಸದಸ್ಯರ ಜವಾಬ್ದಾರಿಗಳನ್ನು ಉಲ್ಲೇಖಿಸಿದ್ದರು. ಸುಪ್ರೀಂ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು ಮತ್ತು ಪೂರ್ವನಿರ್ಧರಿತ ದಿನಾಂಕದೊಳಗೆ ಶರಣಾಗುವಂತೆ ಕೇಳಿತ್ತು.

ಮತ್ತಷ್ಟು ಓದಿ: ಬಿಲ್ಕಿಸ್ ಬಾನು ಪ್ರಕರಣದ ದೋಷಿಗಳು ಜ.21ರೊಳಗೆ ಶರಣಾಗಲು ಸುಪ್ರೀಂಕೋರ್ಟ್ ಆದೇಶ

11 ಅಪರಾಧಿಗಳಲ್ಲಿ ಬಕಾಭಾಯಿ ವೋಹಾನಿಯಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಗೋವಿಂದ್ ನಾಯ್, ಜಸ್ವಂತ್ ನಾಯ್, ಮಿತೇಶ್ ಭಟ್, ಪ್ರದೀಪ್ ಮೋರ್ಧಿಯಾ, ರಾಧೇಶ್ಯಾಮ್ ಶಾ, ರಾಜುಭಾಯ್ ಸೋನಿ, ರಮೇಶ್ ಚಂದನಾ ಮತ್ತು ಶೈಲೇಶ್ ಭಟ್ ಸೇರಿದ್ದಾರೆ. ಇವರೆಲ್ಲರ ಶಿಕ್ಷೆಯನ್ನು ಗುಜರಾತ್ ಸರ್ಕಾರ ಮನ್ನಾ ಮಾಡಿತ್ತು. 11 ಅಪರಾಧಿಗಳು ಎರಡು ಖಾಸಗಿ ವಾಹನಗಳಲ್ಲಿ ರಾತ್ರಿ 11.30ರ ಸುಮಾರಿಗೆ ಸಿಂಗ್ವಾಡ್​ ರಂಧಿಕ್​ಪುರದಿಂದ ಗೋಧ್ರಾ ಜೈಲಿಗೆ ಬಂದು ಶರಣಾಗಿದ್ದಾರೆ.

ಬಿಲ್ಕಿನ್ ಬಾನು ಪ್ರಕರಣ ಫೆಬ್ರವರಿ 2002 ರಲ್ಲಿ ಗೋಧ್ರಾ ರೈಲು ದಹನ ಘಟನೆಯ ನಂತರ ಭುಗಿಲೆದ್ದ ಕೋಮು ಗಲಭೆಯ ಸಂದರ್ಭದಲ್ಲಿ ಆಗ 21 ವರ್ಷ ಮತ್ತು ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಬಿಲ್ಕಿಸ್ ಬಾನು ಅವರ ಮೂರು ವರ್ಷದ ಮಗಳು ಮತ್ತು ಆರು ಕುಟುಂಬ ಸದಸ್ಯರು ಗಲಭೆಯಲ್ಲಿ ಸಾವನ್ನಪ್ಪಿದ್ದಾರೆ.

ಅಪರಾಧಿಗಳ ಅವಧಿಪೂರ್ವ ಬಿಡುಗಡೆ ಆಗಸ್ಟ್ 15, 2022 ರಂದು, ಗುಜರಾತ್ ಸರ್ಕಾರವು ತನ್ನ 1992 ರ ನೀತಿಯ ಪ್ರಕಾರ ಸನ್ನಡತೆ ಆಧಾರದ ಮೇಲೆ ಅವಧಿಗೂ ಮುನ್ನವೇ ಅವರನ್ನು ಬಿಡುಗಡೆಗೊಳಿಸಿತ್ತು. ಆದರೆ ಬಿಲ್ಕಿಸ್ ಬಾನು ಮತ್ತೆ ಅಪರಾಧಿಗಳ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಬಳಿಕ ಸುಪ್ರೀಂಕೋರ್ಟ್​ ಈ ಆದೇಶವನ್ನು ರದ್ದುಪಡಿಸಿತು. ಮತ್ತು ಅಪರಾಧಿಗಳಿಗೆ ಅವಧಿಪೂರ್ವ ಬಿಡುಗಡೆ ನೀಡಲು ಗುಜರಾತ್ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ತೀರ್ಪು ನೀಡಿತು.

ತೀರ್ಪಿನ ಕೆಲವು ದಿನಗಳ ನಂತರ, ದೋಷಿಗಳು ತಮ್ಮ ಆರೋಗ್ಯ ವೈಫಲ್ಯ, ಮುಂಬರುವ ಶಸ್ತ್ರಚಿಕಿತ್ಸೆ, ಮಗನ ಮದುವೆ ಮುಂತಾದ ವಿವಿಧ ಆಧಾರದ ಮೇಲೆ ಶರಣಾಗಲು ಹೆಚ್ಚಿನ ಸಮಯವನ್ನು ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದರು. ಶುಕ್ರವಾರ ಅವರ ಅರ್ಜಿಗಳನ್ನು ಎಸ್‌ಸಿ ವಜಾಗೊಳಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ