Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ರಾಪ್ತ ಪತ್ನಿ ಜತೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸುವುದು ಕೂಡ ಅತ್ಯಾಚಾರ: ಬಾಂಬೆ ಹೈಕೋರ್ಟ್​

ಅಪ್ರಾಪ್ತ ಪತ್ನಿ ಜತೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸುವುದು ಕೂಡ ಅತ್ಯಾಚಾರ ಎಂದು ಬಾಂಬೆ ಹೈಕೋರ್ಟ್​ ತೀರ್ಪು ನೀಡಿದೆ. ವ್ಯಕ್ತಿ ವಿರುದ್ಧ ಅಪ್ರಾಪ್ತ ಬಾಲಕಿ ದಾಖಲಿಸಿದ್ದ ಅತ್ಯಾಚಾರ ದೂರಿನ ವಿಚಾರಣೆ ಮಾಡುವಾಗ ಹೈಕೋರ್ಟ್​ ಈ ಅಭಿಪ್ರಾಯ ಪಟ್ಟಿದ್ದು, ಪತಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಅಪ್ರಾಪ್ತ ಪತ್ನಿ ಜತೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸುವುದು ಕೂಡ ಅತ್ಯಾಚಾರ: ಬಾಂಬೆ ಹೈಕೋರ್ಟ್​
Follow us
ನಯನಾ ರಾಜೀವ್
|

Updated on: Nov 15, 2024 | 10:52 AM

ಅಪ್ರಾಪ್ತ ಪತ್ನಿ ಜತೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸುವುದು ಕೂಡ ಅತ್ಯಾಚಾರ ಎಂದು ಬಾಂಬೆ ಹೈಕೋರ್ಟ್​ ತೀರ್ಪು ನೀಡಿದೆ. ವ್ಯಕ್ತಿ ವಿರುದ್ಧ ಅಪ್ರಾಪ್ತ ಬಾಲಕಿ ದಾಖಲಿಸಿದ್ದ ಅತ್ಯಾಚಾರ ದೂರಿನ ವಿಚಾರಣೆ ಮಾಡುವಾಗ ಹೈಕೋರ್ಟ್​ ಈ ಅಭಿಪ್ರಾಯ ಪಟ್ಟಿದ್ದು, ಪತಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯೊಂದಿಗೆ ಲೈಂಗಿಕ ಸಂಪರ್ಕವನ್ನು ಅತ್ಯಾಚಾರ ಎಂದೇ ಹೇಳಲಾಗುವುದು. ಮದುವೆಯಾಗಿದ್ದರೂ ಅಥವಾ ಇಲ್ಲದಿದ್ದರೂ ಸಹ ಕೂಡ ಇದರಲ್ಲಿ ವ್ಯತ್ಯಾಸವಿಲ್ಲ. ಹೆಂಡತಿ ಅಥವಾ ಹೆಂಡತಿಯೆಂದು ಹೇಳಲಾದ ಹುಡುಗಿಯ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇರುವಾಗ ಹೆಂಡತಿಯೊಂದಿಗೆ ಸಮ್ಮತಿಯ ಲೈಂಗಿಕತೆಯು ಕೂಡ ಅತ್ಯಾಚಾರವೆಂದೇ ಕರೆಸಿಕೊಳ್ಳುತ್ತದೆ ಎಂದರು.

ಕೆಳ ನ್ಯಾಯಾಲಯ ವಿಧಿಸಿದ್ದ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಪೀಠ ಎತ್ತಿಹಿಡಿದಿದೆ. ತನ್ನ ಒಪ್ಪಿಗೆಯಿಲ್ಲದೆ ಲೈಂಗಿಕ ಸಂಬಂಧ ನಡೆದಿದೆ ಎಂದು ಸಂತ್ರಸ್ತೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ. ಸೆಪ್ಟೆಂಬರ್ 9, 2021 ರಂದು, ವಾರ್ಧಾ ಜಿಲ್ಲೆಯ ವಿಚಾರಣಾ ನ್ಯಾಯಾಲಯವು POCSO ಕಾಯಿದೆಯಡಿಯಲ್ಲಿ ಯುವಕನನ್ನು ತಪ್ಪಿತಸ್ಥರೆಂದು ಘೋಷಿಸಿತು. ಇದೀಗ ಈ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅಪ್ರಾಪ್ತ ಬಾಲಕಿಯ ದೂರಿನ ಮೇರೆಗೆ ಮೇಲ್ಮನವಿದಾರನನ್ನು 25 ಮೇ 2019 ರಂದು ಬಂಧಿಸಲಾಯಿತು.

ಮತ್ತಷ್ಟು ಓದಿ: ಕೊಪ್ಪಳದಲ್ಲಿ ಮಹಿಳೆ ಮೇಲೆ ಅತ್ಯಾಚಾರ: ವಿಡಿಯೋ ವೈರಲ್, 16 ಜನರ ವಿರುದ್ಧ ಎಫ್​ಐಆರ್

ವಿಶೇಷವೆಂದರೆ ಆ ವೇಳೆ ಬಾಲಕಿ 31 ವಾರಗಳ ಗರ್ಭಿಣಿಯಾಗಿದ್ದಳು. ಇಬ್ಬರ ನಡುವೆ ಪ್ರೇಮ ಸಂಬಂಧವಿದ್ದು, ಅರ್ಜಿದಾರರು ಬಲವಂತವಾಗಿ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದು, ಮದುವೆ ಭರವಸೆ ನೀಡಿ ಅದನ್ನು ಮುಂದುವರಿಸಿದ್ದಾರೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ಗರ್ಭಿಣಿಯಾದ ನಂತರ, ಸಂತ್ರಸ್ತೆ ತನ್ನನ್ನು ಮದುವೆಯಾಗುವಂತೆ ವ್ಯಕ್ತಿಯನ್ನು ಕೇಳಿದ್ದಳು. ಇದಾದ ನಂತರ ಆತ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದು, ಇಬ್ಬರೂ ಜತೆಯಲ್ಲಿದ್ದರು. ಡಿಎನ್‌ಎ ವರದಿಯು ಜನಿಸಿರುವ ಗಂಡು ಮಗು ಆರೋಪಿ ಮತ್ತು ಸಂತ್ರಸ್ತೆಯದ್ದೇ ಎಂಬುದನ್ನು ದೃಢಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ