ಅಯೋಧ್ಯೆಯ ರಾಮ ಮಂದಿರದ ಸಂಕೀರ್ಣ ನಿರ್ಮಾಣ ಕಾರ್ಯ 2024ರ ಡಿಸೆಂಬರ್​ ವೇಳೆಗೆ ಪೂರ್ಣ

|

Updated on: Mar 08, 2024 | 9:08 AM

ಅಯೋಧ್ಯೆಯ ರಾಮಮಂದಿರ ಸಂಕೀರ್ಣದ ನಿರ್ಮಾಣ ಕಾಮಗಾರಿಯನ್ನು ಈ ವರ್ಷದ ಡಿಸೆಂಬರ್‌ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗುರುವಾರ ತಿಳಿಸಿದೆ. 1,500 ಕಾರ್ಮಿಕರನ್ನು ನೇಮಿಸಲಾಗಿದೆ, 3,500 ಕ್ಕೂ ಹೆಚ್ಚು ಹೆಚ್ಚುವರಿ ಕಾರ್ಮಿಕರನ್ನು ಶೀಘ್ರದಲ್ಲೇ ನಿಯೋಜಿಸಲಾಗುವುದು. ಶನಿವಾರ, ಭಾನುವಾರದಂದು 2 ಲಕ್ಷಕ್ಕೂ ಹೆಚ್ಚು ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡುತ್ತಾರೆ.

ಅಯೋಧ್ಯೆಯ ರಾಮ ಮಂದಿರದ ಸಂಕೀರ್ಣ ನಿರ್ಮಾಣ ಕಾರ್ಯ 2024ರ ಡಿಸೆಂಬರ್​ ವೇಳೆಗೆ ಪೂರ್ಣ
ರಾಮ ಮಂದಿರ
Image Credit source: Jansatta
Follow us on

ಅಯೋಧ್ಯೆಯ ರಾಮಮಂದಿರ(Ram Mandir) ಸಂಕೀರ್ಣದ ನಿರ್ಮಾಣ ಕಾಮಗಾರಿಯನ್ನು ಈ ವರ್ಷದ ಡಿಸೆಂಬರ್‌ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ಜನವರಿ 22 ರಂದು ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ಬಳಿಕ ಸುಮಾರು 75 ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಸುಮಾರು 1,500 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಮೂರು ಅಂತಸ್ತಿನ ದೇವಾಲಯದ ಕಟ್ಟಡದ ಉಳಿದ ಎರಡು ಮಹಡಿಗಳ ನಿರ್ಮಾಣವನ್ನು ತ್ವರಿತಗೊಳಿಸಲು 3,500 ಕ್ಕೂ ಹೆಚ್ಚು ಹೆಚ್ಚುವರಿ ಕಾರ್ಮಿಕರನ್ನು ಶೀಘ್ರದಲ್ಲೇ ನಿಯೋಜಿಸಲಾಗುವುದು ಎಂದು ದೇವಸ್ಥಾನದ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಹೇಳಿದರು.

ದೇವಾಲಯ ನಿರ್ಮಾಣ ಸಮಿತಿಯ ಸಭೆ ಇತ್ತೀಚೆಗೆ ನಡೆದಿದ್ದು, ಈ ವರ್ಷಾಂತ್ಯದೊಳಗೆ ರಾಮಜನ್ಮಭೂಮಿ ಸಂಕೀರ್ಣದಲ್ಲಿ ಎಲ್ಲಾ ನಿರ್ಮಾಣಗಳನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಮಿಶ್ರಾ ಹೇಳಿದರು. ಗರ್ಭಗುಡಿಯು ದೇವಾಲಯದ ನೆಲ ಮಹಡಿಯಲ್ಲಿದೆ ಮತ್ತು ಮೊದಲ ಮಹಡಿಯಲ್ಲಿ ಶ್ರೀರಾಮನ ಆಸ್ಥಾನವನ್ನು ಸ್ಥಾಪಿಸಲಾಗುವುದು, ರಾಮಲಲ್ಲಾನ ದರ್ಶನದ ನಂತರ ಭಕ್ತರು ಶ್ರೀರಾಮನ ಆಸ್ಥಾನದ ದರ್ಶನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಎಂದರು.

ಮತ್ತಷ್ಟು ಓದಿ: ರಾಮ ಮತ್ತು ರಾಮನ ಭಂಟ ಆಂಜನೇಯ ಮೊದಲು ಭೇಟಿಯಾಗಿದ್ದು ಎಲ್ಲಿ? ಇಲ್ಲಿ ರಾಮನ ಪಾದುಕೆಯೂ ಇದೆ

ಭವ್ಯ ದೇಗುಲದ ಮುಖ್ಯ ಶಿಖರ ಹಾಗೂ ಇನ್ನೊಂದು ಶಿಖರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, 300 ದಿನಗಳಲ್ಲಿ ಶಿಖರಗಳು ಸಿದ್ಧಗೊಳ್ಳಲಿವೆ ಎಂದು ದೇವಸ್ಥಾನದ ಟ್ರಸ್ಟ್ ಸದಸ್ಯರು ತಿಳಿಸಿದ್ದಾರೆ. ಮಳೆ ಮತ್ತು ಬಿಸಿಲಿನಿಂದ ಭಕ್ತರನ್ನು ರಕ್ಷಿಸಲು ದೇವಸ್ಥಾನದ ಪರ್ಕೋಟ ಕೂಡ ಮಳೆಗಾಲದ ಆಗಮನದ ಮೊದಲು ಸಿದ್ಧವಾಗಲಿದೆ ಎಂದು ಅವರು ಹೇಳಿದರು.

ಸಂಕೀರ್ಣದಲ್ಲಿ, ಪರ್ಕೋಟಾದ ಉದ್ದಕ್ಕೂ ಆರು ದೇವರು ಮತ್ತು ದೇವತೆಗಳ ದೇವಾಲಯಗಳನ್ನು ನಿರ್ಮಿಸಲಾಗುವುದು, ಜೊತೆಗೆ ಏಳು ಋಷಿಗಳ ದೇವಾಲಯಗಳನ್ನು ಸಹ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ದೇವಾಲಯವನ್ನು ನಿರ್ಮಿಸುತ್ತಿರುವ ಎಲ್‌ಅಂಡ್‌ಟಿ ಕಂಪನಿಯು ರಾಜಸ್ಥಾನ, ಗುಜರಾತ್, ಬಿಹಾರ ಮತ್ತು ಉತ್ತರ ಪ್ರದೇಶದಿಂದ ಪ್ರಸ್ತುತ 1,500 ಕಾರ್ಮಿಕರನ್ನು ನಿಯೋಜಿಸಲಿದೆ ಎಂದು ಅವರು ಹೇಳಿದರು.

ಶನಿವಾರ ಮತ್ತು ಭಾನುವಾರದಂದು ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ರಾಮಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ, ಆದರೆ ಇತರ ದಿನಗಳಲ್ಲಿ ಸುಮಾರು 1.5 ಲಕ್ಷ ಭಕ್ತರು ಆಗಮಿಸುತ್ತಿದ್ದಾರೆ ಎಂದು ರಾಮ ಮಂದಿರ ಟ್ರಸ್ಟ್‌ನ ಉಸ್ತುವಾರಿ ಅಧಿಕಾರಿ ಪ್ರಕಾಶ್ ಗುಪ್ತಾ ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ