Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭಾ ಚುನಾವಣೆ: ವಯನಾಡಿನಿಂದ ರಾಹುಲ್​ ಗಾಂಧಿ ಸ್ಪರ್ಧೆ ಖಚಿತ, ಶೀಘ್ರ ಮೊದಲ ಪಟ್ಟಿ ಬಿಡುಗಡೆ ಮಾಡಲಿದೆ ಕಾಂಗ್ರೆಸ್​

ರಾಹುಲ್ ಗಾಂಧಿ ಅವರು ಕೇರಳದ ವಯನಾಡ್‌ನಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋತಿರುವ ಅಮೇಥಿಯಿಂದಲೂ ಸ್ಪರ್ಧಿಸುತ್ತಾರೆಯೇ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.

ಲೋಕಸಭಾ ಚುನಾವಣೆ: ವಯನಾಡಿನಿಂದ ರಾಹುಲ್​ ಗಾಂಧಿ ಸ್ಪರ್ಧೆ ಖಚಿತ, ಶೀಘ್ರ ಮೊದಲ ಪಟ್ಟಿ ಬಿಡುಗಡೆ ಮಾಡಲಿದೆ ಕಾಂಗ್ರೆಸ್​
ರಾಹುಲ್ ಗಾಂಧಿ Image Credit source: The Statesman
Follow us
ನಯನಾ ರಾಜೀವ್
|

Updated on: Mar 08, 2024 | 10:57 AM

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ(Rahul Gandhi) ಮುಂಬರುವ ಲೋಕಸಭಾ ಚುನಾವಣೆ(Lok Sabha Election)ಯಲ್ಲಿ ವಯನಾಡಿನಿಂದಲೇ ಸ್ಪರ್ಧಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್​ ಶೀಘ್ರವೇ ಬಿಡುಗಡೆ ಮಾಡಲಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಕಣಕ್ಕಿಳಿಸುವ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. ಕಾಂಗ್ರೆಸ್​ನ ಕೇಂದ್ರ ಚುನಾವಣಾ ಸಮಿತಿ 40 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.

ಈ ಪಟ್ಟಿಯಲ್ಲಿ ರಾಹುಲ್ ಗಾಂಧಿ ಕೇರಳದ ವಯನಾಡು ಕ್ಷೇತ್ರದಿಂದ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಹಾಗೆಯೇ ಅಮೇಥಿಯಿಂದ ಸ್ಪರ್ಧಿಸುತ್ತಾರೋ ಇಲ್ಲವೋ ಎನ್ನುವ ನಿರ್ಧಾರ ಇನ್ನೂ ಅಂತಿಮವಾಗಿಲ್ಲ. ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯನ ಹೆಸರೂ ಚುನಾವಣಾ ರೇಸ್​ನಲ್ಲಿದೆ. ರಾಯ್​ ಬರೇಲಿಯ ಮೇಲೂ ಪಕ್ಷ ಕಣ್ಣಿಟ್ಟಿದೆ.

ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಿಇಸಿ ಸಭೆಯಲ್ಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 60 ಲೋಕಸಭಾ ಸ್ಥಾನಗಳ ಕುರಿತು ಚರ್ಚಿಸಲಾಯಿತು. ಇದು ದೆಹಲಿ, ಕರ್ನಾಟಕ, ಕೇರಳ, ಛತ್ತೀಸ್​ಗಢ, ತೆಲಂಗಾಣ, ಸಿಕ್ಕಿಂ, ತ್ರಿಪುರ, ನಾಗಾಲೆಂಡ್​, ಮಣಿಪುರ, ಮೇಘಾಲಯ ಹಾಗೂ ಲಕ್ಷದ್ವೀಪಗಳ ಲೋಕಸಭಾ ಸ್ಥಾನಗಳನ್ನು ಒಳಗೊಂಡಿದೆ. ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಕೂಡ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂದು ಕಾಂಗ್ರೆಸ್​ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಕೇರಳದಲ್ಲಿ ಪಕ್ಷದ ಸ್ಕ್ರೀನಿಂಗ್ ಸಮಿತಿಯು ವಯನಾಡು ಕ್ಷೇತ್ರಕ್ಕೆ ರಾಹುಲ್ ಗಾಂಧಿ ಹೆಸರನ್ನು ಸೂಚಿಸಿದೆ. ರಾಹುಲ್ ಗಾಂಧಿ ಮತ್ತೆ ವಯನಾಡಿನಿಂದ ಸ್ಪರ್ಧಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ವಿಡಿ ಸತೀಶನ್ ಅವರು ಕೇರಳದ 16 ಸ್ಥಾನಗಳಲ್ಲಿ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ. ಮಿತ್ರಪಕ್ಷಗಳು ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. 16 ಕ್ಷೇತ್ರಗಳಲ್ಲಿ ಅಭ್ಯರ್ಥೊಗಳು ಯಾರೆಂಬುದನ್ನು ಸಿಇಸಿ ನಿರ್ಧರಿಸಲಿದೆ.

ಪ್ರಿಯಾಂಕಾ ಗಾಂಧಿ ಬಗ್ಗೆ ಸಸ್ಪೆನ್ಸ್​ ಮುಂದುವರೆದಿದೆ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಚುನಾವಣಾ ರಾಜಕೀಯದ ಬಗ್ಗೆಯೂ ಸಸ್ಪೆನ್ಸ್​ ಇದೆ. ರಾಹುಲ್ ಗಾಂಧಿ ಅಮೇಥಿಯಿಂದ ಮತ್ತು ಪ್ರಿಯಾಂಕಾ ಗಾಂಧಿ ರಾಯ್​ ಬರೇಲಿಯಿಂದ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ. 2019ರಲ್ಲಿ ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಸೋಲು ಕಂಡಿದ್ದರು. ವಯನಾಡಿನಲ್ಲಿ ಗೆದ್ದಿದ್ದರು. ರಾಹುಲ್ ಈ ಹಿಂದೆ ಮೂರು ಬಾರಿ ಅಮೇಥಿಯಿಂದ ಸಂಸದರಾಗಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ